ಮುಂದೆ ಎರಡು ವರ್ಷ ಇಲ್ಲದ ಶುಭ ಮುಹೂರ್ತ ; ವಿಡಿಯೋ ಕಾಲ್ ಮೂಲಕವೇ ನಡೆದ ವಿವಾಹ!
Team Udayavani, May 2, 2020, 6:13 PM IST
ತಿರುವನಂತಪುರಂ: ಕೋವಿಡ್ ವೈರಸ್ ಮಣಿಸಲು ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ಹಲವಾರು ವೈಚಿತ್ರ್ಯಗಳಿಗೆ ಕಾರಣವಾಗುತ್ತಿದೆ. ಲಾಕ್ ಡೌನ್‌ನಿಂದಾಗಿ ವೀಡಿಯೋ ಕಾಲ್ ಮೂಲಕ ಮದುವೆ ಕಾರ್ಯಕ್ರಮವೂ ನಡೆದಿದೆ.
ಕೊಟ್ಟಾಯಂನಲ್ಲಿ ವರ ಶ್ರೀಜಿತ್ ನಟೇಶನ್, ವಧು ಅಂಜನಾ ಲಕ್ನೋದಲ್ಲಿ. ಪ್ರಯಾಣಕ್ಕೆ ಅಡ್ಡಿ ಮತ್ತು ಮುಂದಿನ 2 ವರ್ಷಗಳವರೆಗೆ ಶುಭ ದಿನ ಇಲ್ಲದೇ ಇರುವ ಬಗ್ಗೆ ಅರಿತ 2 ಕುಟುಂಬಗಳು ಇಂಥ ಸಾಹಸಕ್ಕೆ ನಿರ್ಧರಿಸಿದವು.
ವೀಡಿಯೋ ಕರೆ ಮಾಡಿಸಿ, ವರನು ಫೋನ್‌ಗೆ ಮಂಗಳ ಸೂತ್ರ ಕಟ್ಟುವ ಮೂಲಕ ಮದುವೆ ಪೂರ್ಣಗೊಳಿಸಿದ್ದಾನೆ. ಈ ವೇಳೆ ವೀಡಿಯೋ ಕರೆಯಲ್ಲಿ ವಧು ಕೂಡ ಪರದೆ ಮೇಲಿದ್ದಳು.
ಸದ್ಯಕ್ಕೆ ಈ ದಂಪತಿ ಲಾಕ್‌ಡೌನ್ ನಿರ್ಬಂಧ ತೆಗೆದುಹಾಕುವುದನ್ನು ಕಾಯುತ್ತಿದ್ದಾರೆ. ನಂತರದ ದಿನಗಳಲ್ಲಿ ವಿವಾಹ ಸಂಬಂಧ ದೊಡ್ಡ ಕಾರ್ಯಕ್ರಮ ಆಯೋಜಿಸುವ ಕುರಿತು ಯೋಚಿಸಿದೆ.
ಸೋಂಕಿನಿಂದ ಕೇರಳದ ಶಿಕ್ಷಕಿ ಸಾವು
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಕೇರಳ ಮೂಲದ ಶಿಕ್ಷಕಿ ಪ್ರಿನ್ಸಿ ರಾಯ್ ಮ್ಯಾಥ್ಯೂ ಕೊನೆಯುಸಿರೆಳೆದಿದ್ದಾರೆ. ಅವರು ಅಬುದಾಭಿಯಲ್ಲಿ ಇರುವ ಅಬುದಾಭಿ ಇಂಡಿಯನ್ ಸ್ಕೂಲ್‌ನಲ್ಲಿ ಹಿರಿಯ ಶಿಕ್ಷಕಿಯಾಗಿದ್ದರು.
ಕಳೆದವಾರ ಜ್ವರದಿಂದ ಪ್ರಿನ್ಸಿ ನರಳುತ್ತಿದ್ದರು. ಜ್ವರದ ತಾಪಮಾನ ಹೆಚ್ಚಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಸೇರಿಸಿದೆವು. ವೈದರು ಪರೀಕ್ಷೆ ನಡೆಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಪತಿ ರಾಯ್ ಮ್ಯಾಥ್ಯೂ ಸ್ಯಾಮ್ಯುಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.