ಅತ್ಯಾಚಾರ ಎಸಗಿದ ಸ್ವಾಮಿಯ ಮರ್ಮಾಂಗಕ್ಕೇ ಕತ್ತರಿ!
Team Udayavani, May 21, 2017, 11:42 AM IST
ತಿರುವನಂತಪುರ: ಯುವಕನ ಮರ್ಮಾಂಗವನ್ನೇ ಕತ್ತರಿಸುವ ಮೂಲಕ ನಾಯಕಿಯು ತನ್ನ ನಂಬಿಕೆಗೆ ದ್ರೋಹವೆಸಗಿದ ಆತನ ವಿರುದ್ಧ ಸೇಡು ತೀರಿಸಿಕೊಳ್ಳುವ ಮಲಯಾಳಂ ಸಿನಿಮಾ “22 ಫೀಮೇಲ್ ಕೊಟ್ಟಾಯಂ’ ಅನ್ನು ನೀವು ನೋಡಿರಬಹುದು. ಈಗ ಕೇರಳದಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದೆ.
ಆದರೆ, ಇಲ್ಲಿ 23 ವರ್ಷದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬಳು ಕಾಮುಕ ಸ್ವಾಮೀಜಿಯ ಜನನಾಂಗವನ್ನೇ ಕತ್ತರಿಸಿದ್ದಾಳೆ!
ಅಚ್ಚರಿಯಾದರೂ ಇದು ಸತ್ಯ. ಕೊಲ್ಲಂನ ಪನ್ಮಾನಾ ಆಶ್ರಮದ ಸ್ವಘೋಷಿತ ದೇವಮಾನವ 54 ವರ್ಷದ ಸ್ವಾಮಿ ಗಣೇಶಾನಂದನೇ ಯುವತಿಯ ಆಕ್ರೋಶಕ್ಕೆ ಬಲಿಯಾದವನು. ಶುಕ್ರವಾರ ರಾತ್ರಿ ಪೂಜೆಗೆಂದು ಮನೆಗೆ ಬಂದಾಗ, ಯುವತಿಯ ಮೇಲೆ ಮತ್ತೆ ಅತ್ಯಾಚಾರವೆಸಗಲು ಸ್ವಾಮೀಜಿ ಯತ್ನಿಸಿದ್ದು, ಈ ವೇಳೆ ಆಕೆ ಚಾಕುವಿ ನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಈ ಮೂಲಕ ಸತತ 8 ವರ್ಷಗಳಿಂದ ತನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯಕ್ಕೆ ಅಂತ್ಯ ಹಾಡಿದ್ದಾಳೆ. ಘಟನೆ ನಡೆದ ಕೂಡಲೇ ಆಕೆ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾಳೆ.
ಗಂಭೀರ ಸ್ಥಿತಿಯಲ್ಲಿರುವ ಗಣೇಶಾನಂದ ಇದೀಗ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಧೈರ್ಯವನ್ನು ಕೊಂಡಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, “ಯುವತಿ ಅತ್ಯಂತ ದಿಟ್ಟ ಹಾಗೂ ಒಳ್ಳೆಯ ಕೆಲಸವನ್ನೇ ಮಾಡಿದ್ದಾಳೆ’ ಎಂದಿದ್ದಾರೆ. ಆದರೆ, ಇದನ್ನು ತಳ್ಳಿಹಾಕಿರುವ ಸ್ವಾಮಿ, “ಅದರಿಂದ ಈಗ ಏನೂ ಪ್ರಯೋಜನವಿಲ್ಲ ಎಂದು ಜನನಾಂಗವನ್ನು ನಾನೇ ಕತ್ತರಿಸಿಕೊಂಡೆ’ ಎಂದಿದ್ದಾನೆ.
ಆಗಾಗ್ಗೆ ಮನೆಗೆ ಬರುತ್ತಿದ್ದ: ಯುವತಿಯ ಕುಟುಂಬ ಸದಸ್ಯರು ಸ್ವಾಮೀಜಿಯ ಭಕ್ತರಾಗಿದ್ದು, ಇದೇ ನೆಪವಿಟ್ಟುಕೊಂಡು ಆತ ಆಗಾಗ್ಗೆ ಇವರ ಮನೆಗೆ ಬರುತ್ತಿದ್ದ. ಈ ಬಗ್ಗೆ ಹೇಳಿಕೊಂಡಿರುವ ಯುವತಿ “ನಾನು ಅಪ್ರಾಪ್ತ ವಯಸ್ಸಿನವಳಾಗಿದ್ದಾಗಿನಿಂದಲೂ ಅಂದರೆ ಕಳೆದ 8 ವರ್ಷಗಳಿಂದಲೂ ಸ್ವಾಮಿಯು ನನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದ. ಇದರಿಂದ ರೋಸಿ ಹೋಗಿದ್ದೆ. ಶುಕ್ರವಾರ ಆತ ಬರುವುದು ಗೊತ್ತಾಗುತ್ತಿದ್ದಂತೆ ಚಾಕು ಸಿದ್ಧಪಡಿಸಿಟ್ಟುಕೊಂಡೆ. ಬಲಾತ್ಕಾರಕ್ಕೆ ಯತ್ನಿಸಿದೊಡನೆ ಮರ್ಮಾಂಗವನ್ನು ಕತ್ತರಿಸಿಬಿಟ್ಟೆ’ ಎಂದಿದ್ದಾಳೆ. ಈಗ ಪೊಲೀಸರು ಪೋಕೊÕà ಕಾಯ್ದೆಯಡಿ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
nಯುವತಿಗೆ ಕಾನೂನಿನ ರಕ್ಷಣೆ: ಮರ್ಮಾಂಗ ಕತ್ತರಿಸಿದ ಯುವತಿ ಮೇಲೆ ಪೊಲೀಸರು ದೂರು ದಾಖಲಿಸಿಲ್ಲ ಏಕೆಂದರೆ, ಆಕೆಗೆ ಕಾನೂನಿ ನಲ್ಲಿ ರಕ್ಷಣೆ ಇದೆ. ಐಪಿಸಿ ಸೆಕ್ಷನ್ 100ರ ಅನ್ವಯ, ಮಹಿಳೆಯರು ತಮ್ಮ ಘನತೆ ಅಥವಾ ಜೀವದ ಪ್ರಶ್ನೆ ಬಂದಾಗ, ಸ್ವಯಂರಕ್ಷಣೆಗಾಗಿ ದಾಳಿಕೋರನನ್ನು ಕೊಂದರೂ ಆಕೆಗೆ ಕಾನೂನಿನ ರಕ್ಷಣೆ ಸಿಗುತ್ತದೆ.
ಹಿಂದೆಯೂ ನಡೆದಿತ್ತು
ಇಂಥ ಕೃತ್ಯಗಳು
2012ರ ಮಾರ್ಚ್- ದಿಲ್ಲಿಯ ಅಲಿಪುರದಲ್ಲಿ ವಿಧವೆಯೊಬ್ಬಳು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾತನ ಮರ್ಮಾಂಗವನ್ನು ಕತ್ತರಿಸಿದ್ದಳು
2014 ಆಗಸ್ಟ್- ಬಿಹಾರದಲ್ಲಿ ರೇಪ್ ಮಾಡಲು ಮುಂದಾದ ಚಿಕ್ಕಪ್ಪನ ಜನನಾಂಗಕ್ಕೆ ಯುವತಿ ಕತ್ತರಿ ಹಾಕಿದ್ದಳು
2016 ಫೆಬ್ರವರಿ- ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ ಪುರುಷನ ಖಾಸಗಿ ಅಂಗಾಂಗಕ್ಕೆ ಹಾನಿ ಮಾಡಿದ್ದರು
2016 ಎಪ್ರಿಲ್- ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಅಸ್ಸಾಂನ ಬುಡಕಟ್ಟು ಮಹಿಳೆಯೊಬ್ಬಳು ಹತ್ಯೆಗೈದು, ಸುಟ್ಟು ಹಾಕಿದ್ದಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.