ಹೈಕೋರ್ಟ್ ತೀರ್ಪು ವಜಾ; ಸುಪ್ರೀಂನಿಂದ ಹದಿಯಾ ವಿವಾಹ ಪುನರೂರ್ಜಿತ
Team Udayavani, Mar 8, 2018, 4:16 PM IST
ಹೊಸದಿಲ್ಲಿ : ಕೇರಳ ಲವ್ ಜಿಹಾದ್ ಸಂತ್ರಸ್ತೆಯಾಗಿರುವ ಹದಿಯಾ ಗೆ ದೊಡ್ಡ ವಿಜಯ ಪ್ರಾಪ್ತವಾಗಿದೆ. ಸುಪ್ರೀಂ ಕೋರ್ಟ್ ಇಂದು ಗುರುವಾರ ಕೇರಳ ಹೈಕೋರ್ಟಿನ ಆದೇಶವನ್ನು ವಜಾ ಗೊಳಿಸಿ ಪತಿ ಶಫೀನ್ ಜಹಾನ್ ಜತೆಗಿನ ಹದಿಯಾ ಳ ಮದುವೆಯನ್ನು ಪುನರೂರ್ಜಿತಗೊಳಿಸಿದೆ.
ಇದಕ್ಕೆ ಮೊದಲು ಇಂದು ಬೆಳಗ್ಗೆ ಸರ್ವೋಚ್ಚ ನ್ಯಾಯಾಲಯ ತನಿಖಾ ಸಂಸ್ಥೆಗೆ ಈ ಪ್ರಕರಣದಲ್ಲಿ ಯಾವುದೇ ರೀತಿಯ ಪಾತಕತನ ಇದೆಯೇ ಎಂಬುದನ್ನು ಪತ್ತೆ ಹಚ್ಚುವ ತಮ್ಮ ತನಿಖೆಯನ್ನು ಮುಂದುವರಿಸುವಂತೆ ಸೂಚಿಸಿತು; ಆದರೆ ಹದಿಯಾ ಳ ಮದವೆ ವಿಚಾರದಲ್ಲಿ ಮೂಗು ತೂರಿಸದಂತೆ ಎಚ್ಚರಿಕೆ ನೀಡಿತು.
ಎನ್‌ಐಎ ಪರವಾಗಿ ಕೋರ್ಟಿಗೆ ಹಾಜರಾದ ವಕೀಲ ಮಣೀಂದರ್ ಸಿಂಗ್ ಅವರು ಹದಿಯಾ ಪ್ರಕರಣದ ತನಿಖೆ ಬಹುತೇಕ ಮುಗಿದಿರುವಾಗಿ ಕೋರ್ಟಿಗೆ ತಿಳಿಸಿದರು.
ಹಾಗಿದ್ದರೂ ಈ ಪ್ರಕರಣದ ನಿರ್ಣಾಯಕ ಸಾಕ್ಷಿದಾರರಾದ ಫಸಲ್ ಮುಸ್ತಫ ಮತ್ತು ಶಿರಿನ್ ಶಹಾಂದ್ ಅವರನ್ನು ಪ್ರಶ್ನಿಸಬೇಕಾದ ಅಗತ್ಯವಿದೆ ಎಂದು ಎನ್‌ಐಎ ಹೇಳಿತು.
ಹದಿಯಾ ಓರ್ವ ಕ್ರಿಮಿನಲ್ ಅಥವಾ ಭಯೋತ್ಪಾದಕಿ ಎಂಬ ರೀತಿಯಲ್ಲಿ ತಾನು ಆಕೆಯೊಂದಿಗೆ ನಡೆದುಕೊಂಡಿದ್ದೇನೆ ಎಂಬ ಆರೋಪವನ್ನು ಎನ್‌ಐಎ ಅಲ್ಲಗಳೆಯಿತು.
ಹದಿಯಾ ಈ ಹಿಂದೆ ಸುಪ್ರೀಂ ಕೋರ್ಟಿಗೆ ಬರೆದು ಕೊಟ್ಟಿದ್ದ ಅಫಿದಾವಿತ್‌ನಲ್ಲಿ, “ನಾನು ಸ್ವಇಚ್ಛೆಯಿಂದ ಇಸ್ಲಾಂ ಗೆ ಮತಾಂತರಗೊಂಡಿದ್ದೇನೆ ಮತ್ತು ಜಹಾನ್ ನನ್ನು ಮದುವೆಯಾಗಿದ್ದೇನೆ. ನಾನು ಮುಸ್ಲಿಮಳಾಗಿಯೇ ಉಳಿಯಲು ಬಯಸುತ್ತೇನೆ’ ಎಂದು ಹೇಳಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.