Kerala: ಶಬರಿಮಲೆಯ ಮಾಳಿಗಪುರದಲ್ಲಿ ತೆಂಗಿನ ಕಾಯಿ ಒಡೆಯುವಂತಿಲ್ಲ: ಹೈಕೋರ್ಟ್
Team Udayavani, Dec 1, 2024, 7:40 AM IST
ಶಬರಿಮಲೆ: ಶಬರಿಮಲೆಯ ಮಾಳಿಗಪುರಂ ಕ್ಷೇತ್ರದ ಸುತ್ತುಮುತ್ತ ತೆಂಗಿನ ಕಾಯಿ ಒಡೆಯುವಿಕೆ ಮತ್ತು ಅರಶಿನ ಪುಡಿ ಸಿಂಪಡಿಸುವಿಕೆ ಶಬರಿಮಲೆ ದೇವಸ್ಥಾನದ ಸಂಪ್ರದಾಯದಲ್ಲಿ ಒಳಗೊಂಡಿಲ್ಲ ಎಂದು ಅಭಿಪ್ರಾಯಪಟ್ಟ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ, ತೆಂಗಿನ ಕಾಯಿ ಒಡೆಯುವುದಕ್ಕೆ ನಿರ್ಬಂಧಿಸಿದೆ.
ತೆಂಗಿನ ಕಾಯಿ ಒಡೆಯುವಿಕೆ ಹಾಗೂ ಅರಶಿನ ಪುಡಿ ಸಿಂಪಡಿಸುವಿಕೆ ಬಗ್ಗೆ ಇದೇ ನಿಲುವನ್ನು ಕ್ಷೇತ್ರದ ತಂತ್ರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಮಾಳಿಗಪುರ ಪರಿಸರದಲ್ಲಿ ಕೆಲವು ಭಕ್ತರು ತಾವು ಧರಿಸಿದ ಉಡುಪುಗಳನ್ನು ಅಲ್ಲೇ ಕಳಚಿ ಉಪೇಕ್ಷಿಸಿ ಹೋಗುವುದೂ ಆಚಾರ ಕ್ರಮವಲ್ಲ. ಆದ್ದರಿಂದ ಈ ವಿಷಯವನ್ನು ಧ್ವನಿವರ್ಧಕಗಳ ಮೂಲಕ ತೀರ್ಥಾಟಕರಿಗೆ ತಿಳಿಸಬೇಕೆಂದು ಹೈಕೋರ್ಟ್ ನಿರ್ದೇಶ ನೀಡಿದೆ.
12 ದಿನಗಳಲ್ಲಿ 63.01 ಕೋಟಿ ರೂ. ಆದಾಯ
ಮಂಡಲ ಕಾಲದ ತೀರ್ಥಾಟನೆ ಆರಂಭಗೊಂಡು ಮೊದಲ 12 ದಿನಗಳಲ್ಲಿ 63.01 ಕೋಟಿ ರೂ. ಸಂಗ್ರಹವಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ 15.89 ಕೋಟಿ ರೂ. ಹೆಚ್ಚಳ ಉಂಟಾಗಿದೆ. ಅಪ್ಪ ಪ್ರಸಾದ ವಿತರಣೆ ಮೂಲಕ 3.53 ಕೋಟಿ ರೂ., ಅರವಣ ಮಾರಾಟದಿಂದ 28.93 ಕೋಟಿ ರೂ. ಸಂಗ್ರಹವಾಗಿದೆ.
ಇದೇ ವೇಳೆ ಭಕ್ತರ ದರ್ಶನಕ್ಕಾಗಿ ಏರ್ಪಡಿಸಿದ ವರ್ಚುವಲ್ ಕ್ಯೂ ಯಶಸ್ವಿಯಾಗಿದೆ. ಸ್ಪಾಟ್ ಬುಕ್ಕಿಂಗ್ ಮೂಲಕ ಗರಿಷ್ಠ ಸಂಖ್ಯೆಯ ಭಕ್ತರಿಗೆ ದರ್ಶನ ಸೌಕರ್ಯ ಏರ್ಪಡಿಸುವುದಾಗಿ ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಸ್ಪಾಟ್ ಬುಕ್ಕಿಂಗ್ಗೆ ಪಂಪಾದಲ್ಲಿ ಮಾತ್ರ ಎಂಟು ಕೌಂಟರ್ಗಳಿವೆ. ಬುಕ್ಕಿಂಗ್ ನಡೆಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದುವರೆಗೆ 10 ಲಕ್ಷ ತೀರ್ಥಾಟಕರು ಕ್ಷೇತ್ರ ದರ್ಶನ ಮಾಡಿದ್ದಾರೆ. ಅತಿ ಹೆಚ್ಚು 87,999 ಭಕ್ತರು ಕಳೆದ ಗುರುವಾರ ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.