ಮಳೆ ಅಬ್ಬರ; ಮುನ್ನಾರ್ ರೆಸಾರ್ಟ್ ನಲ್ಲಿ 60 ಪ್ರವಾಸಿಗರು ಅಪಾಯದಲ್ಲಿ
Team Udayavani, Aug 10, 2018, 3:39 PM IST
ಮುನ್ನಾರ್ : ಧಾರಾಕಾರ ಮಳೆ ಸುರಿಯುತ್ತಿರುವ ಕೇರಳದ ಪ್ರಸಿದ್ಧ ಮುನ್ನಾರ್ ಹಿಲ್ ಸ್ಟೇಶನ್‌ಗೆ ಸಮೀಪದಲ್ಲಿರುವ ಇಡುಕ್ಕಿಯ ಪಳ್ಳಿವಸಳ್ ಧಾಮದಲ್ಲಿ 20 ವಿದೇಶೀ ಪ್ರವಾಸಿಗರ ಸಹಿತ ಒಟ್ಟು 60 ಮಂದಿ ಪ್ರವಾಸಿಗರು ಸಿಕ್ಕಿ ಹಾಕಿಕೊಂಡಿದ್ದಾರೆ.
ನಿರಂತರ ಮಳೆಯಿಂದಾಗಿ ಉಂಟಾಗಿರುವ ಭೂಕುಸಿತದ ಕಾರಣ ಈ ಪ್ರವಾಸೀ ಧಾಮವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳೂ ಬ್ಲಾಕ್ ಆಗಿವೆ.
ಈ ಪ್ರವಾಸೀ ಧಾಮದಲ್ಲಿ ಪ್ರವಾಸಿಗರು ಕಳೆದ ಎರಡು ದಿನಗಳಿಂದ ಸಿಲುಕಿಕೊಂಡಿದ್ದಾರೆ. ಇವರನ್ನು ಪಾರುಗೊಳಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನ ದಳ (ಎನ್‌ಡಿಆರ್‌ಎಫ್) ಮತ್ತು ಸೇನಾ ಸಿಬಂದಿಗಳು ತೊಡಗಿಕೊಂಡಿದ್ದಾರೆ.
ದಿಢೀರ್ ನೆರೆ ಕಂಡು ಬರುತ್ತಿರುವ ಈ ದಿನಗಳಲ್ಲಿ ಕೇರಳಕ್ಕೆ ಭೇಟಿ ಕೊಡದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸೂಚನೆ ಕೊಟ್ಟಿದೆ. ನಿನ್ನೆ ಶುಕ್ರವಾರ ಬಿಡುಗಡೆ ಮಾಡಲಾಗಿರುವ ಅಮೆರಿಕ ಸೂಚನೆಯಲ್ಲಿ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ನೈಋತ್ಯ ಮಾನ್ಸೂನ್ ಮಳೆಯಿಂದಾಗಿ ವ್ಯಾಪಕ ಭೂಕುಸಿತ ಮತ್ತು ಪ್ರವಾಹ ಉಂಟಾಗುತ್ತಿರುವ ಬಗ್ಗೆ ಎಚ್ಚರಿಕೆಯನ್ನು ಕೊಡಲಾಗಿದೆ.
ಭೂಕುಸಿತ, ನೆರೆ, ಪ್ರವಾಹ, ಜಡಿ ಮಳೆ ಆಗತ್ತಿರುವ ಕೇರಳದ ಯಾವುದೇ ಭಾಗಕ್ಕೂ ಹೋಗಬೇಡಿ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಈ ನಡುವೆ ಕೇರಳ ಜಡಿ ಮಳೆಗೆ ಬಲಿಯಾಗಿರುವವರ ಸಂಖ್ಯೆ 26ಕ್ಕೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.