ಶಿಶ್ನ ಕತ್ತರಿಸಿಕೊಂಡದ್ದು ನಾನೇ, ಹುಡುಗಿ ಅಲ್ಲ: ಅತ್ಯಾಚಾರಿ ಸ್ವಾಮಿ
Team Udayavani, May 20, 2017, 7:50 PM IST
ತಿರುವನಂತಪುರ: “ನನ್ನ ಶಿಶ್ನವನ್ನು ಕತ್ತರಿಸಿಕೊಂಡದ್ದೇ ನಾನೇ; ವರದಿಯಾಗಿರುವ ಹಾಗೆ ರೇಪ್ ಸಂತ್ರಸ್ತ ಹುಡುಗಿ ಅಲ್ಲ’ ಎಂದು ಕೇರಳದ 54ರ ಹರೆಯದ ಹರಿ ಸ್ವಾಮಿ ಯಾನೆ ಗಣೇಶಾನಂದ ಹೇಳಿಕೆ ಕೊಟ್ಟಿದ್ದಾನೆ.
“ನನ್ನ ಶಿಶ್ನವನ್ನು ನಾನೇ ಕತ್ತರಿಸಿಕೊಂಡೇ; ಯಾಕೆಂದರೆ ನನಗೆ ಅದರಿಂದ ಯಾವುದೇ ಉಪಯೋಗ ಇಲ್ಲ ಎಂಬ ಕಾರಣಕ್ಕೆ. 22ರ ಹರೆಯದ ಕಾನೂನು ವಿದ್ಯಾರ್ಥಿನಿಯಾಗಿರುವ ಅತ್ಯಾಚಾರ ಸಂತ್ರಸ್ತ ಹುಡುಗಿಯು ನನ್ನ ಮೇಲಿನ ರೋಷದಿಂದ ನನ್ನ ಶಿಶ್ನವನ್ನು ಕತ್ತರಿಸಿದಳು ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು’ ಎಂದು ಅತ್ಯಾಚಾರಿ ಗಣೇಶನಾಂದ ಹೇಳಿಕೊಂಡಿದ್ದಾನೆ.
ಸ್ವಾಮಿ ಗಣೇಶಾನಂದನಿಂದ ಕಳೆದ ಏಳು ವರ್ಷಗಳಿಂದಲೂ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರುತ್ತಾ ನಿನ್ನೆ ಶುಕ್ರವಾರ ಆತನ ಈ ನಿರಂತರ ಲೈಂಗಿಕ ಶೋಷಣೆಯಿಂದ ಬೇಸತ್ತು ಆಕ್ರೋಶಿತಳಾಗಿದ್ದ 22ರ ಹರೆಯದ ಕಾನೂನು ವಿದ್ಯಾರ್ಥಿನಿಯು ಆತನ ಶಿಶ್ನ ಕತ್ತರಿಸಿದಳೆಂದು ವರದಿಯಾಗಿತ್ತು.
ಶೇ. 90ರಷ್ಟು ಶಿಶ್ನ ಛೇದನಕ್ಕೆ ಗುರಿಯಾದ ಅತ್ಯಾಚಾರಿ ಹರಿ ಸ್ವಾಮಿಯನ್ನು ಶುಕ್ರವಾರ ಮಧ್ಯರಾತ್ರಿ ಕಳೆದು 40 ನಿಮಿಷವಾದ ವೇಳೆಯಲ್ಲಿ ತಿರುವನಂತಪುರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ತರಲಾಯಿತು ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿತ್ತು.
ಆಸ್ಪತ್ರೆಯ ಪರಿಣತ ವೈದ್ಯರು ಹರಿ ಸ್ವಾಮಿಗೆ ಛೇದಿತ ಶಿಶ್ನಕ್ಕೆ ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದು ಆತನೀಗ ಅಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದರು.
ರೇಪ್ ಸಂತ್ರಸ್ತೆಯಾಗಿರುವ ಕಾನೂನು ವಿದ್ಯಾರ್ಥಿನಿಯು ಘಟನೆಯನ್ನು ಈ ರೀತಿಯಾಗಿ ವಿವರಸಿದ್ದಳು:
“ಹರಿ ಸ್ವಾಮಿಯು ನಮ್ಮ ಮನೆಗೆ ಧಾರ್ಮಿಕ ಕಾರ್ಯಕ್ರಮಗಳಿಗೆಂದು ಪದೇ ಪದೇ ಬರುತ್ತಿದ್ದ. ಇಂತಹ ಭೇಟಿಗಳಲ್ಲಿ ಅವಕಾಶ ಸಿಕ್ಕಾಗೆಲ್ಲ ಆತ ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಆತನ ಈ ಅಸಹ್ಯಕರ ಅತ್ಯಾಚಾರ ಕೃತ್ಯಗಳಿಂದ ಬೇಸತ್ತ ನಾನು ನಿನ್ನೆ ಶುಕ್ರವಾರ ದಿನ ಆತ ನಮ್ಮ ಮನೆಗೆ ಬಂದಾಗ ಹರಿತವಾದ ಚೂರಿಯಿಂದ ಆತನ ಶಿಶ್ನವನ್ನು ಕತ್ತರಿಸಿ ಹಾಕಿದೆ’.
ಕೇರಳ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪ್ರಮೀಳಾ ದೇವಿ ಅವರು “ಅತ್ಯಾಚಾರಿ ಸ್ವಾಮಿಯನ್ನು ಸರಿಯಾಗಿ ಶಿಕ್ಷಿಸಿದ ಹುಡುಗಿಯ ಬಗ್ಗೆ ತನಗೆ ಹೆಮ್ಮೆ ಇದೆ; ತನ್ನಂತಹ ಇತರ ಶೋಷಿತ ವನಿತೆಯರಿಗೆ ಆಕೆ ರೋಲ್ ಮಾಡೆಲ್ ಆಗಿದ್ದಾರೆ’ ಎಂದು ಹೇಳಿದ್ದಾರೆ.
ಅಂದ ಹಾಗೆ ಅತ್ಯಾಚಾರಿಯ ಶಿಶ್ನ ಛೇದನ ಗೈದಿರುವ ಹುಡುಗಿಯ ವಿರುದ್ಧ ಯಾವ ರೀತಿಯ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂಬ ಬಗ್ಗೆ ಪೊಲೀಸರಿಗೆ ಈಗ ಗೊಂದಲ ಉಂಟಾಗಿದೆ. ಕೇರಳ ಪೊಲೀಸರು ಅತ್ಯಾಚಾರಿ ಆರೋಪಿ ಹರಿ ಸ್ವಾಮಿಯ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ
Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Mine Tragedy: ಇಂದು ಮತ್ತೆ ಮೂರು ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.