ದೇಶದಲ್ಲೇ ಪ್ರಥಮ: ಕೇರಳದಲ್ಲಿ ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿ ಆರಂಭ
Team Udayavani, Feb 23, 2017, 4:15 PM IST
ತಿರುವನಂತಪುರ : ದೇಶದಲ್ಲೇ ಮೊದಲ ಬಾರಿಗೆ ಕೇರಳ ಸರಕಾರ ಲೈಂಗಿಕ ಅಪರಾಧಿಗಳ ದಾಖಲಾತಿ ಪುಸ್ತಕವನ್ನು (ರಿಜಿಸ್ಟ್ರಿ)ಯನ್ನು ಆರಂಭಿಸಲಿದೆ ಎಂದು ರಾಜ್ಯಪಾಲ ಜಸ್ಟಿಸ್ (ನಿವೃತ್ತ) ಪಿ. ಸದಾಶಿವಂ ಹೇಳಿದ್ದಾರೆ.
ಲೈಂಗಿಕ ಅಪರಾಧಿಗಳ ಈ ರಿಜಿಸ್ಟ್ರಿಯ ಲೈಂಗಿಕ ಅಪರಾಧ ಎಸಗಿದವರ ಎಲ್ಲ ಗುರುತು, ಮಾಹಿತಿ, ವಿವರಗಳನ್ನು ಒಳಗೊಳ್ಳಲಿದೆ ಮತ್ತು ಇದನ್ನು ಸಾರ್ವಜನಿಕ ಅವಲೋಕನಕ್ಕೆ ಉಪಲಬ್ದಗೊಳಿಸ ಲಾಗುವುದು. ರಾಜ್ಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕ್ರಮ ಎನಿಸಲಿದೆ ಮತ್ತು ಇದು ದೇಶದಲ್ಲೇ ಮೊತ್ತ ಮೊದಲನೇಯದ್ದಾಗಲಿದೆ ಎಂದು ಸದಾಶಿವಂ ಹೇಳಿದರು.
ಕೇರಳದ 14ನೇ ವಿಧಾನಸಭೆಯ ನಾಲ್ಕನೇ ಅಧಿವೇಶನದ ಮೊದಲ ದಿನದಂದು ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಸದಾಶಿವಂ ಅವರು “ಲೈಂಗಿಕ ಅಪರಾಧಗಳ ಸಂತ್ರಸ್ತರಿಗೆ ಪರಿಹಾರ ನೀಡುವ ನಿಧಿಯೊಂದನ್ನು ಸಿಪಿಐ ಎಂ ನೇತೃತ್ವದ ಎಲ್ಡಿಎಫ್ ಸರಕಾರ ಆರಂಭಿಸಲಿದೆ ಎಂದು ಹೇಳಿದರು.
ಮಲಯಾಳಂ ಚಿತ್ರ ನಟಿಯನ್ನು ಆಕೆಯ ಕಾರಿನಲ್ಲೇ ಬಲವಂತವಾಗಿ ಅಪಹರಿಸಿ ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಲಾದ ಘಟನೆಯ ಕೆಲವೇ ದಿನಗಳ ಬಳಿಕದಲ್ಲಿ ಕೇರಳ ಸರಕಾರ ದೇಶದಲ್ಲೇ ಮೊದಲೆಂಬಂತೆ ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿಯನ್ನು ಆರಂಭಿಸುವುದಾಗಿ ಪ್ರಕಟಿಸಿರುವುದು ಗಮನಾರ್ಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.