ಕೇರಳ ಆರೋಗ್ಯಕರ ರಾಜ್ಯ
Team Udayavani, Feb 10, 2018, 11:00 AM IST
ಹೊಸದಿಲ್ಲಿ: ನೀತಿ ಆಯೋಗ ವಿವಿಧ ರಾಜ್ಯಗಳಲ್ಲಿನ ಆರೋಗ್ಯ ಸೇವೆ ಹಾಗೂ ಆರೋಗ್ಯ ಸಂಬಂಧಿ ಇತರ ವಿಷಯಗಳ ಬಗ್ಗೆ ಸೂಚ್ಯಂಕವನ್ನು ಸಿದ್ಧಪಡಿಸಿದ್ದು, ಇದರಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಷ್ಟೇ ಅಲ್ಲ, ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಣೆಯಲ್ಲಿ ಶೇ.1ರಷ್ಟು ಇಳಿಕೆ ಕಂಡಿದೆ.
ಕೇರಳದ ನಂತರದ ಸ್ಥಾನದಲ್ಲಿ ಪಂಜಾಬ್, ತಮಿಳುನಾಡು ಮತ್ತು ಗುಜರಾತ್ ಇವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಹೆಚ್ಚು ಸುಧಾರಣೆ ಕಂಡು ಬಂದಿದೆ ಎಂದು ವರದಿ ಹೇಳಿದೆ. ಅಲ್ಲದೇ ಸೂಚ್ಯಂಕದಲ್ಲಿ ಕೆಳಗಿನ ಸ್ಥಾನದಲ್ಲಿರುವ ಜಾರ್ಖಂಡ್ ಮತ್ತು ಜಮ್ಮು -ಕಾಶ್ಮೀರ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಸುಧಾರಣೆ ದಾಖಲಿಸಿದೆ. ರಾಷ್ಟ್ರೀಯ ಮರಣ ದರ, ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣ, ಸಂಪೂರ್ಣ ರೋಗ ನಿರೋಧಕತೆ ಕವರೇಜ್ ಹಾಗೂ ಸಾಂಸ್ಥಿಕ ಸೇವೆ ಅಡಿಯಲ್ಲಿ ಈ ರಾಜ್ಯಗಳು ಉತ್ತಮ ಪ್ರಗತಿ ಸಾಧಿಸಿವೆ. ಪಟ್ಟಿಯಲ್ಲಿ ದೊಡ್ಡ ರಾಜ್ಯಗಳು ಮತ್ತು ಸಣ್ಣ ರಾಜ್ಯಗಳು ಎಂದು ಪ್ರತ್ಯೇಕಿಸಲಾಗಿದ್ದು, 21 ರಾಜ್ಯಗಳನ್ನು ವಿಭಜಿಸಲಾಗಿದೆ. ಇತರ ಸಣ್ಣ ರಾಜ್ಯಗಳ ಪಟ್ಟಿಯನ್ನು ಪ್ರತ್ಯೇಕಿಸಲಾ ಗಿದ್ದು, ಈ ಪಟ್ಟಿಯಲ್ಲಿ ಮಿಜೋರಾಂ ಮೊದಲ ಸ್ಥಾನದಲ್ಲಿದೆ. ಮುಂದಿನ ಜೂನ್ ವೇಳೆಗೆ 730 ಜಿಲ್ಲಾ ಆಸ್ಪತ್ರೆಗಳಿಗೂ ರ್‍ಯಾಂಕಿಂಗ್ ನೀಡಲು ನಿರ್ಧರಿಸಲಾಗಿದ್ದು, ಅವುಗಳ ಸಾಧನೆಯ ಆಧಾರದಲ್ಲಿ ಶ್ರೇಣೀಕರಿಸಲಾಗುತ್ತದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.