ದಾಖಲೆಯ ವಿಜಯನ್‌


Team Udayavani, May 3, 2021, 7:25 AM IST

ದಾಖಲೆಯ ವಿಜಯನ್‌

ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ಸತತ ಎರಡನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯುವ ಮೂಲಕ ಆ ರಾಜ್ಯದ ಮಟ್ಟಿಗೆ 39 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.

80ರ ದಶಕದಲ್ಲಿ ಕರುಣಾಕರನ್‌ ನೇತೃತ್ವದ ಕಾಂಗ್ರೆಸ್‌ಸರಕಾರಕ್ಕೆ ಜನರು ಹೀಗೆ, ಸತತ 2ನೇ ಬಾರಿ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಕಲ್ಪಿಸಿದ್ದರು. ಅವರ ಸರಕಾರ 1981ರ ಡಿ. 28ರಂದು ಅಸ್ವಿತ್ವಕ್ಕೆ ಬಂದಿದ್ದ ಕರುಣಾಕರನ್‌ ಸರಕಾರ 1982ರ ಮಾ. 17ರಂದು ಪತನಗೊಂಡಿತ್ತು. ಅದೇ ವರ್ಷ, ನಡೆದ ವಿಧಾನಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದಿತು. ಆಗ, ಪುನಃ ಮುಖ್ಯಮಂತ್ರಿಯಾದ ಕರುಣಾಕರನ್‌, 1982ರ ಮೇ 24ರಿಂದ 1987ರ ಮಾ. 25ರವರೆಗೆ ಅಧಿಕಾರ ನಡೆಸಿದರು.

ಅಲ್ಲಿಂದ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಕೇರಳದ ಜನತೆ, ಆಡಳಿತಾರೂಢ ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರಿಯುವಂಥ ಅವಕಾಶವನ್ನು ನೀಡಿರಲೇ ಇಲ್ಲ. ಆದರೆ ಈ ಬಾರಿ ಮಾತ್ರ ಪಿಣರಾಯಿ ಸರಕಾರಕ್ಕೆ ಮತ್ತೂಂದು ಅವಕಾಶವನ್ನು ಕಲ್ಪಿಸಿದ್ದಾರೆ. ಈ ಮೂಲಕ, 44 ವರ್ಷಗಳ ಅನಂತರ ಹೊಸ ರಾಜಕೀಯ ಅಧ್ಯಾಯಕ್ಕೆ ಅವರು ಮುನ್ನುಡಿ ಬರೆದಿದ್ದಾರೆ.

ವರದಾನವಾದ ಸಮರ್ಥ ಆಡಳಿತ: ಎಡಪಕ್ಷಗಳ ಬಗ್ಗೆ ಜನಾಭಿಪ್ರಾಯ ಏನೇ ಇರಲಿ, ಪಿಣರಾಯಿ ಸರಕಾರದ ಮೇಲೆ ಕೇರಳ ಜನತೆಗೆ ಸಮುದಾಯಗಳನ್ನು ಮೀರಿದ ಒಂದು ವಿಶ್ವಾಸ ರೂಪಿತವಾಗಿದ್ದು 2018ರ ಪ್ರವಾಹದ ಸಂದರ್ಭದಲ್ಲಿ. ಅತೀವೃಷ್ಟಿಯಿಂದಾಗಿ ಕೇರಳದಲ್ಲಿ ಸಂಭವಿಸಿದ ಆ ಪ್ರಕೃತಿ ವಿಕೋಪ ಹಾಗೂ ಆಅನಂತರದ ಪರಿಸ್ಥಿತಿಯನ್ನು ಪಿಣರಾಯಿ ಸರಕಾರ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಅದಾದ ಅನಂತರ, ಪಿಣರಾಯಿ ಸರಕಾರಕ್ಕೆ ಮತ್ತೂಂದು ಅಗ್ನಿಪರೀಕ್ಷೆ ಎದುರಾಗಿದ್ದು ಕಳೆದ ವರ್ಷದ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ. ಇಡೀ ದೇಶದ ಜತೆಗೆ ಕೇರಳ ಕೂಡ ಬಾಗಿಲು ಹಾಕಿಕೊಂಡಿದ್ದ ಆ ದಿನಗಳಲ್ಲಿ ವಲಸೆ ಕಾರ್ಮಿಕರಿಗೆ ಆಶ್ರಯ ಕಲ್ಪಿಸುವುದು, ಅಂಗನವಾಡಿ ಮಕ್ಕಳಿಗೆ ಅವರ ಮನೆಗಳಿಗೇ ಊಟದ ಸೌಲಭ್ಯವನ್ನು ವಿತರಿಸುವಂಥ ಸಮಾಜಮುಖೀ ಕಾರ್ಯ ಕ್ರಮಗಳನ್ನು, ಕೊರೊನಾ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳನ್ನು ಎಲ್ಲೂ ಲೋಪ ಬಾರದಂತೆ ನಿರ್ವಹಿಸಿತು. ಇದೂ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ವೈಯಕ್ತಿಕ ವರ್ಚಸ್ಸು: ದಕ್ಷ ಆಡಳಿತದ ಜತೆಗೆ ಈ ಬಾರಿಯ ಚುನಾವಣೆಯಲ್ಲಿ ವಿಜಯನ್‌ ಅವರಿಗೆ ನೆರವಾಗಿದ್ದು ಅವರ ವೈಯಕ್ತಿಕ ವರ್ಚಸ್ಸು. ಮಿತ ಭಾಷಿಯಾದ ಅವರು, ತಾವಾಯಿತು ತಮ್ಮ ಕೆಲಸ ವಾಯಿತು ಎಂಬಂಥವರು.  ಎಲ್ಲಕ್ಕಿಂತ ಮಿಗಿಲಾಗಿ ರಾಜಕೀಯದಲ್ಲಿ ಶುದ್ಧ ಹಸ್ತರೆಸಿದವರು. ಹಾಗಾಗಿಯೇ, ಕಳೆದ ವರ್ಷ ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಯೇ ಭಾಗಿಯಾಗಿದ್ದ ಚಿನ್ನದ ಕಳ್ಳಸಾಗಣೆ ಪ್ರಕರಣ ಬಯಲಾದರೂ, ಜನ ಪಿಣರಾಯಿ ಕಡೆ ಬೆರಳು ಮಾಡಲಿಲ್ಲ, ಅಸಮಾಧಾನಗೊಳ್ಳಲಿಲ್ಲ.

ಅಲ್ಪಸಂಖ್ಯಾತರ ವಿಶ್ವಾಸ: ಪಿಣರಾಯಿಯವರ ಕಳೆದ ಐದು ವರ್ಷಗಳ ಆಡಳಿತದಲ್ಲಿ ಅಲ್ಪಸಂಖ್ಯಾತರ ಒಲವು ಎಡಪಕ್ಷಗಳ ಕಡೆಗೆ ತಿರುಗಿದ್ದು ಪಿಣರಾಯಿಯವರಿಗೆ ಮತ್ತೂಂದು ವರದಾನವಾಗಿದೆ. ಅದು ಸ್ಪಷ್ಟವಾಗಿ ಗೊತ್ತಾಗಿದ್ದು ಈ ಚುನಾವಣೆಯಲ್ಲೇ.

ಶೂನ್ಯಕ್ಕಿಳಿದ ಬಿಜೆಪಿ! :

2016ರ ಚುನಾವಣೆಯಲ್ಲಿ ನೆಮೊಮ್‌ ಕ್ಷೇತ್ರದ ಮೂಲಕ ಕೇರಳದಲ್ಲಿ ಖಾತೆ ತೆರೆದಿದ್ದ ಬಿಜೆಪಿ, ಈ ಬಾರಿ ಆ ಕ್ಷೇತ್ರವನ್ನು ಕಳೆದುಕೊಂಡಿದೆ. ಭಾರೀ ನಿರೀಕ್ಷೆ ಇರಿಸಿದ್ದ ಮಂಜೇಶ್ವರ ಹಾಗೂ ಕೊನ್ನಿ ಕ್ಷೇತ್ರ ಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್‌ ಸೋತಿ ದ್ದಾರೆ.  ಇನ್ನು, ಮೆಟ್ರೋ ಮ್ಯಾನ್‌ ಇ. ಶ್ರೀಧರನ್‌ ಅವರು ಪಾಲಕ್ಕಾಡ್‌ನ‌ಲ್ಲಿ ಸೋತಿದ್ದರೆ, ನೆಮೊಮ್‌ ಹಾಗೂ ತೃಶೂರ್‌ ಕ್ಷೇತ್ರದಲ್ಲಿ ಕ್ರಮವಾಗಿ ಕಮ್ಮನಂ ರಾಜಶೇಖರನ್‌, ಸುರೇಶ್‌ ಗೋಪಿ ಸೋತಿದ್ದಾರೆ.

ಪ್ರತಿಷ್ಠಿತ ಕ್ಷೇತ್ರಗಳು :

ಧರ್ಮದಮ್  :

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲೆಯ ಈ ವಿಧಾನಸಭಾ ಕ್ಷೇತ್ರ ಪ್ರಮುಖ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿತ್ತು. ಎಲ್‌ಡಿಎಫ್ ನಿಂದ ಸ್ಪರ್ಧಿಸಿದ್ದ ಪಿಣರಾಯಿ ವಿರುದ್ಧ ಯುಡಿಎಫ್ ಒಕ್ಕೂಟ ಕಾಂಗ್ರೆಸ್‌ನ (ಐಎನ್‌ಸಿ) ಸಿ. ರಘುನಾಥನ್‌ ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿ ಕೂಡ ಸಿ.ಕೆ. ಪದ್ಮನಾಭನ್‌ರನ್ನು ಅಖಾಡಕ್ಕೆ ಕರೆತಂದಿತ್ತು. ಆದರೆ ಅಂತಿಮವಾಗಿ, ಗೆಲುವು ಪಿಣರಾಯಿ ಅವರಿಗೇ ಒಲಿದಿದೆ.

ಕೊನ್ನಿ :

ಶಬರಿಮಲೆ ಪ್ರತಿಭಟನೆಗಳ ಕೇಂದ್ರಬಿಂದುವಾಗಿದ್ದ ಈ ಕ್ಷೇತ್ರದಲ್ಲಿ ತನ್ನ ಖಾತೆ ತೆರೆಯಲು ಸಜ್ಜಾಗಿದ್ದ ಬಿಜೆಪಿ, ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ಅವರನ್ನು ಇಲ್ಲಿ ಕಣಕ್ಕಿಳಿಸಿತ್ತು. ಪ್ರಚಾರದ ವೇಳೆಯಲ್ಲೂ ಶಬರಿಮಲೆ ವಿಚಾರವನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸಿತ್ತು. ಇಲ್ಲಿ ಹಾಲಿ ಶಾಸಕ, ಎಲ್‌ಡಿಎಫ್ನ ಜನೀಶ್‌ ಕುಮಾರ್‌, ಯುಡಿಎಫ್ನ ರಾಬಿನ್‌ ಪೀಟರ್‌ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದಾಗ್ಯೂ ಇಲ್ಲಿನ ಮತದಾರರು ಜನೀಶ್‌ ಅವರ ಪರವಾಗಿಯೇ ತೀರ್ಪು ನೀಡಿದ್ದಾರೆ.

ನೆಮಮ್‌ :

ತಿರುವಂತಪುರದ ಈ ಕ್ಷೇತ್ರದಲ್ಲಿ ಬಿಜೆಪಿ, ತನ್ನ ಪರವಾಗಿ ಕುಮ್ಮನಂ ರಾಜಶೇಖರನ್‌ ಅವರನ್ನು ಕಣಕ್ಕಿಳಿಸಿತ್ತು. 2015-18ರವರೆಗೆ ಬಿಜೆಪಿ ರಾಜ್ಯಾಧ್ಯ ಕ್ಷರಾಗಿ ಕೆಲಸ ಮಾಡಿದ್ದ ಶೇಖರನ್‌, ಮಿಜೋರಂನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದವರು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು. ಅದೇ ವಿಶ್ವಾಸದಲ್ಲಿ ಈ ಬಾರಿಯೂ ಬಿಜೆಪಿ ಇತ್ತು. ಎಲ್‌ಡಿಎಫ್ನ ವಿ. ಶಿವಕುಟ್ಟಿ ಅವರು ಬಿಜೆಪಿಯಿಂದ ಈ ಸ್ಥಾನವನ್ನು ಕಸಿದುಕೊಂಡಿದ್ದಾರೆ.

ಪಾಲಕ್ಕಾಡ್‌ :

ಮೆಟ್ರೋ ಮ್ಯಾನ್‌ ಖ್ಯಾತಿಯ ಇ. ಶ್ರೀಧರನ್‌ ಅವರನ್ನು ಬಿಜೆಪಿ ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದೇ ತಡ, ಈ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಇಲ್ಲಿ ಖಂಡಿತವಾಗಿಯೂ ಕೆಲವು ಪಡೆದೇ ತೀರುವ ನಿರೀಕ್ಷೆಯನ್ನಿಟ್ಟು ಕೊಂಡಿದ್ದ ಬಿಜೆಪಿ ಕನಸಿಗೆ ಫ‌ಲಿತಾಂಶ ತಣ್ಣೀರೆರೆಚಿದೆ. ಯುಪಿಎ ವತಿಯಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್‌ನ ಶಫಿ ಪರಂಬಿಲ್‌ ಅವರು ಈ ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ. ಭಾರೀ ಕುತೂಹಲ ಹುಟ್ಟಿಸಿದ್ದ ಶ್ರೀಧರನ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಪಾಲಾ :

ಈ ಹಿಂದೆ ಕಾಂಗ್ರೆಸ್‌ನ ಆಡಂಬೋಲವಾಗಿದ್ದ ಈ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದಿದ್ದ ಮಣಿ ಕೆ. ಕಪ್ಪನ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಕ್ಷೇತ್ರದಲ್ಲಿ ಎಲ್‌ಡಿಎಫ್ ಕಡೆಯಿಂದ ಜೋಸ್‌ ಕೆ. ಮಣಿ ಅವರೂ ಕಣಕ್ಕಿಳಿದಿದ್ದರು. ಮತಎಣಿಕೆಯ ಪ್ರತಿ ಹಂತದಲ್ಲೂ ಒಬ್ಬರ ಅನಂತರ ಒಬ್ಬರು ಮುನ್ನಡೆ ಸಾಧಿಸಿದ್ದರಿಂದ ಕಡೆಯವರೆಗೂ ಗೆಲುವು ಯಾರದ್ದು ಎಂಬ ಕುತೂಹಲವಿತ್ತು. ಕಡೆಗೆ ವಿಜಯ ಮಾಲೆ ಕಪ್ಪನ್‌ ಅವರಿಗೇ ಒಲಿದಿದೆ.

ವಯನಾಡ್ಲ್ಲಿ ಕಾಂಗ್ರೆಸ್ ಸಾಧನೆಯೇನು? :

ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಹಾಗೂ ವಯ ನಾಡ್‌ನ‌ ಸಂಸದ ರಾಹುಲ್‌ ಗಾಂಧಿ ಈ ಬಾರಿಯ ಕೇರಳ ಚುನಾವಣೆಯಲ್ಲಿ ಯುಡಿಎಫ್ ಒಕ್ಕೂಟದ ಅತೀ ದೊಡ್ಡ ಸ್ಟಾರ್‌ ಪ್ರಚಾರಕ ಆಗಿದ್ದರು. ಹಾಗಾಗಿ ಕಾಂಗ್ರೆಸ್‌, ಅದರ ಮಿತ್ರಪಕ್ಷಗಳು ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದವು.

ಹಾಗೆ ನೋಡಿದರೆ, ವಯನಾಡ್‌ನ‌ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕ್ವೀನ್‌ ಸ್ವೀಪ್‌ ಮಾಡಬೇಕಿತ್ತು. ಆದರೆ ಹಾಗಾಗಿಲ್ಲ. ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕೇವಲ ಮೂರರಲ್ಲಿ ಜಯ ಗಳಿಸಿದೆ.  ಯುಡಿಎ ಬೆಂಬಲಿತ ಐಯುಎಂಎಲ್‌ ಪಕ್ಷ ಒಂದು ಕಡೆ ಗೆದ್ದಿದೆ.   ಉಳಿದ ಮೂರು ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಒಕ್ಕೂಟದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಗೆದ್ದಿದ್ದು ಹೇಗೆ? :

  • ಪಿಣರಾಯಿ ವಿಜಯನ್‌ ಆಡಳಿತ ಮೇಲೆ ಜನರ ಭರವಸೆ ಇಟ್ಟಿದ್ದು ಎಲ್‌ಡಿಎಫ್ ಪುನಃ ಅಧಿಕಾರಕ್ಕೆ ಬರಲು ಕಾರಣ.
  • 2018ರ ಪ್ರವಾಹ, ಕಳೆದ ವರ್ಷದ ಕೊರೊನಾ ಸಂಕಷ್ಟದ ಸಂದರ್ಭಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿರುವ ಹೆಗ್ಗಳಿಕೆ.
  • ಕೇಂದ್ರ ತನಿಖಾ ಸಂಸ್ಥೆಗಳನ್ನು ಮೋದಿ ಸರಕಾರ ವಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ ಹಾಗೂ ವಲಸೆ ಕಾರ್ಮಿಕರನ್ನು ಅತೀಥಿಗಳೆಂದು ಕರೆಯಿರಿ ಎಂದ ಪಿಣರಾಯಿ ಹೇಳಿಕೆಗಳು ಎಲ್‌ಡಿಎಫ್ ಗೆ ವರದಾನ.
  • ಪ್ರಮುಖ ವಿಪಕ್ಷಗಳಲ್ಲಿ ಪಿಣರಾಯಿಯಂಥ ಗಟ್ಟಿತನದ, ಸಮರ್ಥ ನಾಯಕ ಇರದೇ ಇದ್ದದ್ದೂ ಎಲ್‌ಡಿಎಫ್ ಸರಕಾರಕ್ಕೆ ವರದಾನ.
  • ಬಿಜೆಪಿಯು ಶಬರಿಮಲೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದು ಎಲ್‌ಡಿಎಫ್ ಗೆಲುವಿಗೆ ಪರೋಕ್ಷ ನೆರವು.

ಸೋತಿದ್ದು ಹೇಗೆ? :

  • ಕಾಂಗ್ರೆಸ್‌ ಸೇರಿದಂತೆ ಯುಡಿಎಫ್ ಮಿತ್ರಪಕ್ಷಗಳು ಚುನಾವಣೆಗೆ ಪೂರ್ವ ಸಿದ್ಧತೆಯಿಲ್ಲದೆ ಧುಮುಕಿದ್ದು.
  • ಕಾಂಗ್ರೆಸ್‌ನ ಉಮನ್‌ ಚಾಂಡಿ ಜನಪ್ರಿಯತೆ ಕುಗ್ಗಿರುವುದು ಹಾಗೂ ಯಾವುದೇ ವಿಪಕ್ಷದಲ್ಲಿ ಪ್ರಭಾವಿ ನಾಯಕರು ಇಲ್ಲದೇ ಇರುವುದು.
  • ರಾಹುಲ್‌ ಗಾಂಧಿಯವರನ್ನಷ್ಟೇ ನಂಬಿಕೊಂಡು ಪ್ರಚಾರ ನಡೆಸಿದ್ದ  ಯುಡಿಎಫ್ ಒಕ್ಕೂಟ. ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ಅನಗತ್ಯವಾಗಿ ಬಿಜೆಪಿ ಪ್ರಸ್ತಾಪಿಸಿ ಪಿಣರಾಯಿ ಅವರ ಹೆಸರನ್ನು ಬಳಸಿದ್ದು.
  • ಹಿಂದುತ್ವ ಹಾಗೂ ಶಬರಿಮಲೆ ವಿಚಾರಗಳನ್ನು ಬಿಜೆಪಿ ಹೆಚ್ಚಾಗಿ ಪ್ರಚಾರ ಮಾಡಿದ್ದು. ಕೊನೆಯ ಘಟ್ಟದಲ್ಲಿ ಕ್ರೈಸ್ತರ ಮನವೊಲಿಸಲು ಮುಂದಾಗಿದ್ದು.

ಟಾಪ್ ನ್ಯೂಸ್

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

ex-pm

EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್‌ ಅಂತ್ಯಕ್ರಿಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.