ಕೆವಿನ್ ಜೋಸೆಫ್ ಮರ್ಯಾದಾ ಹತ್ಯೆ ಪ್ರಕರಣ: ಹತ್ತು ಜನರ ಮೆಲಿನ ಆರೋಪ ಸಾಬೀತು
Team Udayavani, Aug 22, 2019, 5:42 PM IST
ಕೊಟ್ಟಾಯಂ: ರಾಜ್ಯದ ಗಮನ ಸೆಳೆದಿದ್ದ ಕೆವಿನ್ ಜೋಸೆಫ್ ಎಂಬ 23 ವರ್ಷದ ದಲಿತ ಕ್ರಿಶ್ಚಿಯನ್ ಯುವಕನ ಮರ್ಯಾದಾ ಹತ್ಯಾ ಪ್ರಕರಣದಲ್ಲಿ ಹತ್ತು ಜನರನ್ನು ದೋಷಿಗಳೆಂದು ಕೊಟ್ಟಾಯಂ ಪ್ರಾಥಮಿಕ ಸತ್ರ ನ್ಯಾಯಾಲಯ ಇಂದು ಆದೇಶ ನೀಡಿದೆ. 2018ರ ಮೇ ತಿಂಗಳಿನಲ್ಲಿ ನಡೆದಿದ್ದ ಮತ್ತು ಕೇರಳ ರಾಜ್ಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ಈ ಮರ್ಯಾದ ಹತ್ಯೆ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಿರುವ ವಿಶೇಷ ನ್ಯಾಯಾಲಯವು ಐತಿಹಾಸಿಕ ಮಾದರಿಯ ತೀರ್ಪನ್ನು ನೀಡಿದೆ.
ವಿಶೇಷವೆಂದರೆ ಈ ಮರ್ಯಾದಾ ಹತ್ಯೆ ಪ್ರಕರಣದ ದೋಷಿಗಳಲ್ಲಿ ಕೆವಿನ್ ಪ್ರೇಯಸಿಯ ಸಹೋದರನೂ ಒಬ್ಬನಾಗಿದ್ದಾನೆ. ಆದರೆ ಆಕೆಯ ತಂದೆ ಮಾತ್ರ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ. ನ್ಯಾಯಾಲವು ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಶನಿವಾರದಂದು ಘೋಷಿಸಲಿದೆ.
ಏನಿದು ಪ್ರಕರಣ?
ಕೆವಿನ್ ಜೋಸೆಫ್ ಎಂಬ 23 ವರ್ಷದ ದಲಿತ ಕ್ರಿಶ್ಚಿಯನ್ ಯುವಕ ನೀನೂ ಚಾಕೋ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿಯ ಮನೆಯವರ ತೀವ್ರ ವಿರೋಧದ ನಡುವೆಯೂ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು. 2018ರ ಮೇ ತಿಂಗಳಲ್ಲಿ ಕೆವಿನ್ ಮತ್ತು ನೀನೂ ವಿವಾಹಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಯುವತಿಯ ಹೆತ್ತವರು ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಬಳಿಕ ಈ ವಿಚಾರ ಪೊಲೀಸರ ಸಮ್ಮುಖದಲ್ಲಿ ಇತ್ಯರ್ಥಗೊಂಡಿತ್ತು.
ಹೀಗಿರುತ್ತಾ ಮೇ 26ರ ಮಧ್ಯರಾತ್ರಿ ಕೆವಿನ್ ಮತ್ತು ಆತನ ಗೆಳೆಯನನ್ನು ಹುಡುಗಿಯ ಸಹೋದರ ಮತ್ತು ಆತನ ಗೆಳೆಯರು ಕೊಟ್ಟಾಯಂನಲ್ಲಿರುವ ಕೆವಿನ್ ಮನೆಯಿಂದ ಅಪಹರಿಸಿದ್ದರು. ವಿಷಯ ತಿಳಿದ ಬಳಿಕ ನೀನೂ ಜೋಸೆಫ್ ಸಹಾಯಕ್ಕಾಗಿ ಸ್ಥಳೀಯ ಪೊಲೀಸರ ಮೊರೆ ಹೋಗುತ್ತಾರೆ ಆದರೆ ವಿಐಪಿ ಭದ್ರತೆಯ ನೆಪವೊಡ್ಡಿ ಅಲ್ಲಿನ ಪೊಲೀಸರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸುತ್ತಾರೆ.
ಮಾದ್ಯಮಗಳು ಈ ಪ್ರಕರಣದ ವರದಿ ಮಾಡಿದ ಸಂದರ್ಭದಲ್ಲಿ ಪೊಲೀಸರ ನಿರ್ಲಕ್ಷ್ಯ ಬೆಳಕಿಗೆ ಬಂದಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಮೇ 27ರಂದು ಕೆವಿನ್ ಮತ್ತು ಆತನ ಗೆಳೆಯನಿಗಾಗಿ ರಾಜ್ಯವ್ಯಾಪಿ ಹುಡುಕಾಟವನ್ನು ಪ್ರಾರಂಭಿಸುತ್ತಾರೆ. ಈತನ್ಮಧ್ಯೆ ಅದೇ ದಿನ ರಾತ್ರಿ ಅನೀಶ್ ಅಪಹರಣಕಾರರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ.
ಆದರೆ ದುರದೃಷ್ಟವೆಂದರೆ ಕೆವಿನ್ ಅವರ ಮೃತದೇಹ ಮೇ 28ರ ಬೆಳಿಗ್ಗೆ ಕೊಲ್ಲಂ ಜಿಲ್ಲೆಯ ನದಿಯೊಂದರಲ್ಲಿ ಪತ್ತೆಯಾಗುತ್ತದೆ. ಇದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೂಡಲೇ ಎಚ್ಚೆತ್ತುಕೊಂಡ ಸರಕಾರ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಬ್ ಇನ್ ಸ್ಪೆಕ್ಟರ್ ಮತ್ತು ಹೆಚ್ಚುವರಿ ಸಬ್ ಇನ್ ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗುತ್ತದೆ.
ಈ ಪ್ರಕರಣದ ತನಿಖೆಗಾಗಿ ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸಲಾಗುತ್ತದೆ. ನೀನೂ ಜೋಸೆಫ್ ಕೆವಿನ್ ಕುಟುಂಬದ ಜೊತೆಯೇ ಉಳಿಯಲು ನಿರ್ಧರಿಸುತ್ತಾಳೆ. ಪ್ರಕರಣದಲ್ಲಿ ನೀನೂ ಮತ್ತು ಅನೀಶ್ ಪ್ರಮುಖ ಸಾಕ್ಷಿಗಳಾಗಿ ಬದಲಾದ ಕಾರಣ ಆರೋಪಿಗಳ ಆರೋಪ ಸಾಬೀತುಗೊಳ್ಳಲು ಸಹಕಾರಿಯಾಯ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.