ಪುರಿ ಜಗನ್ನಾಥ ದೇವಾಲಯದ ಪ್ರಾಚೀನ ರತ್ನ ಭಂಡಾರದ ಬೀಗದ ಕೈ ನಾಪತ್ತೆ
Team Udayavani, Jun 4, 2018, 3:42 PM IST
ಭುವನೇಶ್ವರ/ಪುರಿ : ಹನ್ನೆರಡನೇ ಶತಮಾನದ ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬೀಗದ ಕೈ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಪುರಿಯ ಶ್ರೀ ಶಂಕರಾಚಾರ್ಯ, ಸ್ವಾಮಿ ನಿಶ್ಚಲಾನಂದ ಸರಸ್ವತಿ ಮತ್ತು ಭಾರತೀಯ ಜನತಾ ಪಕ್ಷದ ಪ್ರಬಲ ಪ್ರತಿಭಟನೆಯನ್ನು ಲೆಕ್ಕಿಸಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ಟನಾಯಕ್ ಅವರು ಇಂದು ಸೋಮವಾರ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಕಳೆದ ಎಪ್ರಿಲ್ 4ರಂದು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯ ಸಭೆ ನಡೆದಿದ್ದಾಗಲೇ ರತ್ನ ಭಂಡಾರದ ಬೀಗದ ಕೈ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿತ್ತು.
ಸುಮಾರು 34 ವರ್ಷಗಳ ಬಳಿಕ ಕಳೆದ ಎಪ್ರಿಲ್ 4ರಂದು ಒಡಿಶಾ ಹೈಕೋರ್ಟ್ ಆದೇಶದ ಪ್ರಕಾರ ದೇವಾಲಯದ ರತ್ನ ಭಂಡಾರದ ಸ್ಥಿತಿಗತಿಯನ್ನು ಪರಿಶೀಲಿಸಲು 16 ಸದಸ್ಯರ ತಂಡವು ಬಿಗಿ ಭದ್ರತೆಯೊಂದಿಗೆ ಭಂಡಾರವನ್ನು ಪ್ರವೇಶಿಸುವುದಿತ್ತು. 2016ರಲ್ಲಿ ಭಾರತದ ಪ್ರಾಕ್ತನ ಸರ್ವೇಕ್ಷಣ ಇಲಾಖೆ ಕೈಗೊಂಡಿದ್ದ ದುರಸ್ತಿ ಕಾರ್ಯದ ಉಸ್ತುವಾರಿ ನಡೆಸಿದ್ದ ಕೋರ್ಟ್, ರತ್ನ ಭಂಡಾರ ಕಟ್ಟಡದ ಭದ್ರತೆ ಮತ್ತು ಸುರಕ್ಷೆಯನ್ನು ಪರಿಶೀಲಿಸುವಂತೆ ಎಎಸ್‌ಐಗೆ ಆದೇಶಿಸಿತ್ತು.
ಎ.4ರಂದು ರತ್ನ ಭಂಡಾರ ಪ್ರವೇಶಿಸಲಿದ್ದ ತಂಡಕ್ಕೆ ಭಂಡಾರದ ಬೀಗದ ಕೈ ಸಿಗದೇ ಇದ್ದ ಕಾರಣ ಅದಕ್ಕೆ ಒಳಪ್ರವೇಶ ಸಾಧ್ಯವಾಗಿರಲಿಲ್ಲ. ಆಗ ಅದು ಶೋಧಕ ದೀಪಗಳ ನೆರವಿನಲ್ಲಿ ಹೊರಗಿನಿಂದಲೇ ಕಬ್ಬಿಣದ ಸರಳುಗಳ ಮೂಲಕ ಒಳಗಿನ ಭಾಗವನ್ನು ವೀಕ್ಷಿಸಿತ್ತು.
12ನೇ ಶತಮಾನದ ಈ ಪ್ರಾಚೀನ ದೇವಾಲಯದ ರತ್ನ ಭಂಡಾರ ಒಟ್ಟು 7 ಕೋಣೆಗಳನ್ನು ಹೊಂದಿದೆ. ಮೊದಲ ಎರಡು ಕೋಣೆಗಳನ್ನು ಕಾಲಕಾಲಕ್ಕೆ ಉಪಯೋಗಿಸಲಾಗಿದೆ. ಉಳಿದ ಕೋಣೆಗಳು ಒಳಗಿನ ಸಾಲಿನಲ್ಲಿ ಇರುವವುಗಳಾಗಿವೆ.
ಜಗನ್ನಾಥ ದೇವಾಲಯದ ಆಡಳಿತ ಸಮಿತಿಯ ಬಳಿಯಾಗಲೀ ಪುರಿ ಜಿಲ್ಲಾ ಭಂಡಾರದಲ್ಲಾಗಲೀ ರತ್ನ ಭಂಡಾರದ ಬೀಗದ ಕೈಗಳು ಇಲ್ಲ ಎಂದು ರಾಮಚಂದ್ರ ದಾಸ ಮಹಾಪಾತ್ರ ತಿಳಿಸಿದ್ದಾರೆ.
ಈ ಬಗ್ಗೆ ಪುರಿಯ ಶ್ರೀ ಶಂಕರಾಚಾರ್ಯರು ಮತ್ತು ಬಿಜೆಪಿ ಪತ್ರಮುಖೇನ ಒಡಿಶಾ ಮುಖ್ಯಮಂತ್ರಿಯಿಂದ ಸ್ಪಷ್ಟನೆ ಕೇಳಿದ್ದಾರೆ.
ಬೀಗದ ಕೈಗಳು ಎಲ್ಲಿ, ಹೇಗೆ, ಯಾವಾಗ ನಾಪತ್ತೆಯಾದವು ಎಂಬ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಡಲೇಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಪೀತಾಂಬರ ಆಚಾರ್ಯ ಸುದ್ದಿಗಾರರಿಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.