ಜಗತ್ತಿನ ಅತಿ ಕುಬ್ಜ ವ್ಯಕ್ತಿ ಖಾಗೇಂದ್ರ ಥಾಪಾ ಇನ್ನಿಲ್ಲ
Team Udayavani, Jan 18, 2020, 9:24 PM IST
ಮುಂಬೈ: ಕೇವಲ 2 ಅಡಿ 2.41 ಇಂಚು ಎತ್ತರ ಇದ್ದ “ನಡೆದಾಡುತ್ತಿದ್ದ ಜಗತ್ತಿನ ಅತಿ ಕುಬ್ಜ ವ್ಯಕ್ತಿ ಖಾಗೇಂದ್ರ ಥಾಪಾ ಮಗರ್(27) ನೇಪಾಳದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಖಾಗ್ರೇಂದ್ರ ಥಾಪಾ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಪೊಖಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
2010ರಲ್ಲಿ ಅಂದರೆ ತಮಗೆ 18 ವರ್ಷ ತುಂಬಿದ್ದ ಸಂದರ್ಭದಲ್ಲಿ, ಖಾಗೇಂದ್ರ ಅವರು ಪ್ರಪಂಚದ ಅತಿ ಕುಬ್ಜ ವ್ಯಕ್ತಿ ಎಂದು ಗಿನ್ನೆಸ್ ದಾಖಲೆಗೆ ಸೇರಿದ್ದರು. ಬಳಿಕ ನೇಪಾಳದವರೇ ಆದ ಚಂದ್ರ ಬಹಾದೂರ್ ಡೆಂಗಿ ಅತ್ಯಂತ ಕುಬ್ಜ ವ್ಯಕ್ತಿ ಎಂಬ ಬಿರುದಿಗೆ ಪಾತ್ರರಾದರು. 2015ರಲ್ಲಿ ಡೆಂಗಿ ನಿಧನರಾದ ಬಳಿಕ ಖಾಗೇಂದ್ರ ಈ ಬಿರುದನ್ನು ಮರಳಿ ಪಡೆದರು. ಅವರ ನಿಧನಕ್ಕೆ ಗಿನ್ನೆಸ್ ದಾಖಲೆ ಮುಖ್ಯ ಸಂಪಾದಕರು ಕಂಬನಿ ಮಿಡಿದಿದ್ದಾರೆ. 6 ಕೆ.ಜಿ. ತೂಕದ ವ್ಯಕ್ತಿಗೆ ಬದುಕು ದುಸ್ತರವಾಗಿರುತ್ತದೆ. ಆದರೆ ಖಾಗೇಂದ್ರರದ್ದು ಪುಟಿಯುವ ಜೀವನೋತ್ಸಾಹ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.