Ayodhya; ರಾಮಮಂದಿರಕ್ಕೆ ಉಗ್ರ ಪನ್ನು ದಾಳಿ ಬೆದರಿಕೆ!
ನ.16, 17ಕ್ಕೆ ಹಲವು ಮಂದಿರಗಳ ಮೇಲೆ ದಾಳಿ: ಸಂದೇಶ
Team Udayavani, Nov 12, 2024, 7:15 AM IST
ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರ ಹಾಗೂ ಕೆನಡಾದ ಹಲವು ದೇವಾಲಯಗಳ ಮೇಲೆ ನ. 16 ಹಾಗೂ 17ರಂದು ದಾಳಿ ನಡೆಸುವುದಾಗಿ ಖಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಒಡ್ಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ಆತ ಮಾತನಾಡಿದ್ದು, ಹಿಂಸಾತ್ಮಕ ಹಿಂದುತ್ವ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ಪ್ರತೀ ಅಡಿಪಾಯವನ್ನೂ ನಾವು ಅಲುಗಾಡಿಸುತ್ತೇವೆ. ಮಿಸ್ಸಿಸಾಗಾದಲ್ಲಿನ ಕ್ಯಾಲಿಬರಿ ಹಿಂದೂ ದೇವಾಲಯದ ಮೇಲೆ ನ. 16ರಂದು, ಬ್ರಾಂಪ್ಟನ್ನ ತ್ರಿವೇಣಿ ಮಂದಿರದ ಮೇಲೆ ನ. 17ರಂದು ದಾಳಿ ನಡೆಯಲಿದೆ ಎಂದಿದ್ದಾನೆ.
ಕೆನಡಾಕ್ಕೆ ನಿಷ್ಠರಾಗಿ, ಇಲ್ಲವೇ ತೊಲಗಿ
ಮೋದಿಯ ಹಿಂಸಾತ್ಮಕ ಹಿಂದುತ್ವವನ್ನು ಪಾಲಿಸುವ ಭಾರತೀಯ-ಕೆನಡಿಯನ್ನರೇ, ಕೆನಡಾ ಸಂಸತ್ತಿನಲ್ಲಿ ಹಿಂದೂ ಭಯೋತ್ಪಾದನೆಯ ಪ್ರತಿನಿಧಿಯಾಗಿರುವ ಸಂಸದ ಚಂದ್ರ ಆರ್ಯ ಅವರೇ, ನೀವೆಲ್ಲ ಕೆನಡಾಕ್ಕೆ ನಿಷ್ಠರಾಗಿರಿ, ಇಲ್ಲವಾದಲ್ಲಿ ಕೆನಡಾವನ್ನು ತೊರೆಯಿರಿ. ಖಲಿಸ್ಥಾನಿ ಪರ ಸಿಕ್ಖರ ವಿರುದ್ಧ ಭಾರತೀಯ ರಾಯಭಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೋ ಹಾಗೂ ಕೆನಡಾ ಪೊಲೀಸರು (ಆರ್ಸಿಎಂಪಿ) ಒಪ್ಪಿಕೊಂಡಿದ್ದಾರೆ. ಜತೆಗೆ ನಿಜ್ಜರ್ ಹತ್ಯೆಗೂ ರಾಯಭಾರಿಗಳೇ ಜವಾಬ್ದಾರರು ಎಂಬುದನ್ನೂ ಅಂಗೀಕರಿಸಿದ್ದಾರೆ ಎಂದು ಪನ್ನು ಹೇಳಿದ್ದಾನೆ.
ಮೋದಿ, ಶಾಗೆ ಸವಾಲು
ಭಾರತೀಯ ರಾಯಭಾರಿಗಳ ಮೇಲೆ ನಮ್ಮ ಪ್ರತೀಕಾರ ಮುಂದುವರಿಯಲಿದೆ. ನ. 16-17ರಂದು ನಡೆಯಲಿರುವ ದಾಳಿಗಳು ಈ ರಾಯಭಾರಿಗಳಿಗೆ ಹೊಸ ಸವಾಲಾಗಲಿದೆ. ಸಿಕ್ಖ್ ಫಾರ್ ಜಸ್ಟೀಸ್ ಸಂಘಟನೆಯು ಮೋದಿಯ ರಾಜಕಾರಣವನ್ನು ಕೊಲ್ಲಲಿದೆ. ಮೋದಿ ಹಾಗೂ ಅಮಿತ್ ಶಾ ಅವರೇ, ಕೆನಡಾ ನಿಮ್ಮ ಅಯೋಧ್ಯೆಯ ರೀತಿಯಲ್ಲ ಎಂಬುದನ್ನು ತಿಳಿಯಿರಿ. ಆರೆಸ್ಸೆಸ್, ಬಜರಂಗ ಕಾರ್ಯಕರ್ತರು ಕೆನಡಾದ ಗುರುದ್ವಾರ ಸಾಹಿಬ್ಗ ದಾಳಿ ಮಾಡಲು ಯತ್ನಿಸಿದ್ದಾರೆ. ಈಗ ನಾವು ನಿಮ್ಮ ಅಯೋಧ್ಯೆಯ ಅಡಿಪಾಯವನ್ನು ಅಲುಗಾಡಿಸುತ್ತೇವೆ ಎಂದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.