ಕಿಲ್ಲರ್‌ ಕೆಮಿಕಲ್‌! ಇಂದೋರ್‌ ಅಕ್ರಮ ಪ್ರಯೋಗಾಲಯದಲ್ಲಿ ಪತ್ತೆ

Team Udayavani, Oct 1, 2018, 8:57 AM IST

killer.jpg

ಹೊಸದಿಲ್ಲಿ: ಸುಮಾರು 50 ಲಕ್ಷ ಜನರ ಮಾರಣ ಹೋಮಕ್ಕೆ ಕಾರಣವಾಗಬಲ್ಲ “ಫೆಂಟನೈಲ್‌’ ಎಂಬ ರಾಸಾಯನಿಕ ದ್ರವ್ಯ ಇಂದೋರ್‌ನ ಅಕ್ರಮ ಪ್ರಯೋಗಾಲಯದಲ್ಲಿ ಪತ್ತೆಯಾಗಿದ್ದು, ಇದರ ಹಿಂದೆ ರಾಸಾಯನಿಕ ದಾಳಿಯ ಸಂಚಿತ್ತೇ ಎಂಬ ಆತಂಕ ವ್ಯಕ್ತವಾಗಿದೆ.

ಕಂದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳು ವಾರದಿಂದ ನಡೆಸುತ್ತಿದ್ದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಸುಮಾರು 9 ಕೆಜಿಯಷ್ಟು ಫೆಂಟನೈಲ್‌ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಮಾಣದ ಫೆಂಟನೈಲ್‌ನಿಂದ ಸುಮಾರು 40ರಿಂದ 50 ಲಕ್ಷ ಜನರನ್ನು ಕೊಲ್ಲಬಹುದಾಗಿದ್ದು, ಓರ್ವ ಮನುಷ್ಯನನ್ನು ಕೊಲ್ಲಲು ಕೇವಲ 2 ಮಿ.ಗ್ರಾಂ ಸಾಕು ಎಂದು ಹೇಳಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಕರಣ ಪತ್ತೆಯಾಗಿದೆ.

ರಾಸಾಯನಿಕ ಯುದ್ಧಗಳಲ್ಲಿ ಈ ರಾಸಾಯನಿಕವನ್ನು ಬಳಸಲಾಗುತ್ತದಾದ್ದರಿಂದ ಇದನ್ನು ಇಷ್ಟು ಪ್ರಮಾಣದಲ್ಲಿ ಸಂಗ್ರ ಹಿಸಿಟ್ಟಿರುವುದರ ಹಿಂದೆ ದಿಲ್ಲಿಯ ಮೇಲೆ ರಾಸಾಯನಿಕ ದಾಳಿಗೆ ಪಾತಕಿಗಳು ಸಂಚು ರೂಪಿಸಿದ್ದಿರಬಹುದೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದನ್ನು ತಯಾರಿಸಲು ಅತ್ಯಾಧುನಿಕ ಲ್ಯಾಬೋರೇಟರಿಗಳು, ನುರಿತ ವಿಜ್ಞಾನಿಗಳ ಆವಶ್ಯಕತೆಯಿದ್ದು, ಇಂದೋರ್‌ನಂಥ ನಗರದಲ್ಲಿ ಇದನ್ನು ತಯಾ ರಿಸಿದ್ದಾದರೂ ಹೇಗೆಂಬ ಸೋಜಿಗದಲ್ಲಿ ವಿಜ್ಞಾನಿಗಳಿದ್ದಾರೆ.

ಯಾರದ್ದು ಈ ಪ್ರಯೋಗಾಲಯ?
ಇಂದೋರ್‌ನ ಸ್ಥಳೀಯ ಉದ್ಯಮಿ ಮತ್ತು ರಸಾಯನ ಶಾಸ್ತ್ರದಲ್ಲಿ ಪಿಎಚ್‌.ಡಿ. ಪದವೀಧರರೊಬ್ಬರ ಪಾಲುದಾರಿಕೆಯಲ್ಲಿ ಈ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಈ ಪಿಎಚ್‌.ಡಿ ಪದವೀಧರ ಅಮೆರಿಕ ವಿರೋಧಿ ನಿಲುವು ಹೊಂದಿದವನಾ ಗಿದ್ದು, ಈತನನ್ನು ಇತ್ತೀಚೆಗೆ ದಿಲ್ಲಿಯಲ್ಲಿ ಬಂಧಿಸಲಾಗಿದೆ. ಈತನ ಜತೆಗೆ ಮೆಕ್ಸಿಕೋದ ನಾಗರಿಕನೊಬ್ಬನನ್ನೂ  ಬಂಧಿಸಲಾಗಿದೆ.

ವ್ಯಾವಹಾರಿಕ ಮಾಹಿತಿ
ಇದು ಮಾದಕ ವ್ಯಸನಿಗಳ ಅಚ್ಚುಮೆಚ್ಚು. ಹಾಗಾಗಿ ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಚೀನದಿಂದ ಮೆಕ್ಸಿಕೋ, ಕೆನಡಾ ಮಾರ್ಗವಾಗಿ ಅಮೆರಿಕಕ್ಕೆ ಇದು ಕಳ್ಳಸಾಗಣೆಯಾಗುತ್ತದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೆ.ಜಿ. ಫೆಂಟನೈಲ್‌ಗೆ 6 ಲಕ್ಷ ರೂ. ಬೆಲೆಯಿದೆ. ಆದರೆ ಕಾಳದಂಧೆಯಲ್ಲಿ ಇದರ ಬೆಲೆ ಕೆ.ಜಿ.ಗೆ ಅಂದಾಜು 12 ಕೋಟಿ ರೂ.ಗಳು.

ಏನಿದು ಫೆಂಟನೈಲ್‌?
– ಫೆಂಟನೈಲ್‌ ಎಂಬುದು ಅಫೀಮು ಮಾದರಿಯ ಡ್ರಗ್‌.
– ಕೇವಲ ವಾಸನೆ ತೆಗೆದುಕೊಂಡರೂ ಸಾಕು  ಮನುಷ್ಯ ಉಳಿಯು ವುದು ಅನುಮಾನ.
– ಚರ್ಮದ ರಂಧ್ರಗಳ ಮೂಲಕವೂ ಇದು ತ್ವರಿತ ವಾಗಿ ದೇಹವನ್ನು ವ್ಯಾಪಿಸಿ ಕೊಳ್ಳಬಲ್ಲದು.
– ಹೆರಾಯ್ನಗಿಂತ 50 ಪಟ್ಟು ಹಾಗೂ ಮಾಫೈìನ್‌ಗಿಂತ 100 ಪಟ್ಟು ಹೆಚ್ಚು ಶಕ್ತಿಶಾಲಿ.
– ಇದನ್ನು ಅತ್ಯಲ್ಪ  ಪ್ರಮಾಣದಲ್ಲಿ  ಅರಿವಳಿಕೆ , ನೋವು ಶಮನ ಔಷಧಗಳಲ್ಲಿ ಬಳಸಲಾಗುತ್ತದೆ.

– ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೆ.ಜಿ. ಫೆಂಟನೈಲ್‌ಗೆ 6 ಲಕ್ಷ ರೂ. ಬೆಲೆ
– 2016ರಲ್ಲಿ ಇದರ ಓವರ್‌ ಡೋಸ್‌ನಿಂದಾಗಿ 20,000ಕ್ಕಿಂತ ಹೆಚ್ಚು ಜನರು ಸಾವಿಗೀಡಾಗಿದ್ದರು.

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.