ವಂಚನೆ ಎಸಗಿದ ಆರೋಪ : ಬಿಜೆಪಿಯ ಕಿರಿಟ್, ಪುತ್ರನ ವಿರುದ್ಧ ಕೇಸು
Team Udayavani, Apr 8, 2022, 5:20 AM IST
ಮುಂಬಯಿ: ಈಶಾನ್ಯ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಮತ್ತು ಅವರ ಪುತ್ರ ನೀಲ್ ವಿರುದ್ಧ ವಂಚನೆ ಎಸಗಿದ ಆರೋಪ ಹೊರಿಸಲಾಗಿದೆ ಮತ್ತು ಕೇಸು ದಾಖಲಿಸಲಾಗಿದೆ.
ಸದ್ಯ ಧ್ವಂಸಗೊಂಡಿರುವ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ರಕ್ಷಿಸುವುದ ಕ್ಕೋಸ್ಕ ರವಾಗಿ ಸಂಗ್ರಹವಾಗಿದ್ದ 57 ಕೋಟಿ ರೂ. ಮೊತ್ತ ವನ್ನು ದುರುಪಯೋಗ ಮಾಡಿದ ಆರೋಪವನ್ನು ಬಿಜೆಪಿ ಸಂಸದ ಮತ್ತು ಅವರ ಪುತ್ರನ ಮೇಲೆ ಹೊರಿಸಲಾಗಿದೆ. ಈ ಬಗ್ಗೆ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಮುಂಬ ಯಿಯ ಟ್ರಾಂಬೆ ಪೊಲೀಸ್ ಠಾಣೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕೇಸು ದಾಖಲಿ ಸಲಾಗಿದೆ. ಶಿವಸೇನೆ ಸೋಮಿಯ ವಿರುದ್ಧ ಪ್ರತಿಭಟನೆ ನಡೆಸಿದೆ.
ಬಾಂಗ್ಲಾದೇಶ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಅನ್ನು 1997ರಲ್ಲಿ ಸೇವೆಯಿಂದ ಮುಕ್ತಗೊಳಿಸಲಾಗಿತ್ತು. ಅದನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯವಿದ್ದರೂ 2014ರಲ್ಲಿ ಅದನ್ನು ಹರಾಜು ಹಾಕಲಾಯಿತು. 2021ರ ನವೆಂಬರ್ನಲ್ಲಿ ಅದನ್ನು ಒಡೆದು ಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.