Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು
ಬೆನ್ನುಮೂಳೆಗೆ ಹೊಕ್ಕಿದ್ದ 2.5-ಇಂಚಿನ ಚಾಕು!!... ನ್ಯೂರೋಸರ್ಜರಿ, ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ
Team Udayavani, Jan 16, 2025, 4:52 PM IST
ಮುಂಬೈ: ದುಷ್ಕರ್ಮಿಯಿಂದ ಪದೇ ಪದೇ ಇರಿತಕ್ಕೊಳಗಾಗಿದ್ದ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಬೆನ್ನುಮೂಳೆಗೆ ಹೊಕ್ಕಿದ್ದ ಚಾಕುವನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಗುರುವಾರ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಬಾಲಿವುಡ್ ನಟ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
54 ವರ್ಷದ ಖಾನ್ ಅವರು ತುರ್ತು ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ, ‘ಸದ್ಗುರು ಶರಣ್’ ಕಟ್ಟಡದಲ್ಲಿರುವ ಅವರ ಮನೆಯಲ್ಲಿ ಮುಂಜಾನೆ 2.30 ರ ಸುಮಾರಿಗೆ ನಡೆದ ದಾಳಿಯ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲೀಲಾವತಿ ಆಸ್ಪತ್ರೆಯ COO ಡಾ.ನೀರಜ್ ಉತ್ತಮಣಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ,” “ನಾವು ಬೆನ್ನುಮೂಳೆಯಿಂದ 2.5-ಇಂಚಿನ ಚಾಕುವನ್ನು ತೆಗೆದುಹಾಕಿದ್ದೇವೆ. ಎರಡು ತೀವ್ರ, ಎರಡು ಸಣ್ಣ ಗಾಯಗಳು ಮತ್ತು ಎರಡು ಇರಿತಗಳಿವೆ ಎಂದು ತಿಳಿಸಿದ್ದಾರೆ.
”ಗಾಯಗಳು ಆಳವಾಗಿದ್ದ ಹೊರತಾಗಿಯೂ ಆಸ್ಪತ್ರೆಯ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು, ಅವರಿಗೆ ನ್ಯೂರೋಸರ್ಜರಿ ಮತ್ತು ಪ್ಲಾಸ್ಟಿಕ್ ಸರ್ಜರಿಯನ್ನೂ ನಡೆಸಲಾಗಿದೆ. ಚೇತರಿಕೆಯ ಹಾದಿಯಲ್ಲಿದ್ದಾರೆ. ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ. ಬಹುಶಃ ಒಂದು ಅಥವಾ ಎರಡು ದಿನಗಳಲ್ಲಿ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗುವುದು” ಎಂದು ಡಾ.ನೀರಜ್ ಹೇಳಿದ್ದಾರೆ.
ಲೀಲಾವತಿ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ ನಿತಿನ್ ಡಾಂಗೆ, ಪ್ರತಿಕ್ರಿಯಿಸಿ ” ಸೈಫ್ ಅಲಿ ಖಾನ್ ಅವರ ಬೆನ್ನೆಲುಬಿಗೆ ದೊಡ್ಡ ಗಾಯವಾಗಿದೆ. . ಚಾಕುವನ್ನು ತೆಗೆದುಹಾಕಲು ಮತ್ತು ಸೋರುತ್ತಿರುವ ಬೆನ್ನುಮೂಳೆಯ ದ್ರವವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎಡಗೈ ಮತ್ತು ಕತ್ತಿನ ಬಲಭಾಗದಲ್ಲಿ ಇನ್ನೂ ಎರಡು ಆಳವಾದ ಗಾಯಗಳಾಗಿದ್ದು, ಅವುಗಳನ್ನು ಪ್ಲಾಸ್ಟಿಕ್ ಸರ್ಜರಿ ತಂಡ ಸರಿಪಡಿಸಿದೆ, ”ಎಂದು ವಿವರ ನೀಡಿದ್ದಾರೆ.
ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ತಂಡವು ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಪುತ್ರ ಇಬ್ರಾಹಿಂ ಮತ್ತು ಸಿಬಂದಿಯೊಬ್ಬರು ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ಮುಂಜಾನೆ 3.30 ರ ಸುಮಾರಿಗೆ, ಮನೆಯಲ್ಲಿ ಚಾಲಕ ಇಲ್ಲದ ಕಾರಣ ಆಟೋ ರಿಕ್ಷಾದಲ್ಲಿ ಕರೆತಂದರು ಎಂದು ತಿಳಿಸಿದ್ದಾರೆ.
ಮನೆ ಸಹಾಯಕಿ ಎಲಿಮ್ಮಾ ಫಿಲಿಪ್ಸ್ ಅಲಿಯಾಸ್ ಲಿಮಾ ಅವರು ಮನೆಯಲ್ಲಿದ್ದ ವೇಳೆ ಆರೋಪಿಗಳು ಫ್ಲಾಟ್ಗೆ ಪ್ರವೇಶಿಸಿದ್ದಾರೆ. ಆರೋಪಿಯನ್ನು ತಡೆಯಲು ಯತ್ನಿಸಿದ ವೇಳೆ ಗಲಾಟೆಯಲ್ಲಿ ಆಕೆಯ ಕೈಗೆ ಗಾಯಗಳಾಗಿವೆ. ಆಕೆಯ ಕಿರುಚಾಟವನ್ನು ಕೇಳಿ ಸೈಫ್ ಅಲಿಖಾನ್ ಬಂದು ಆತನೊಂದಿಗೆ ಜಗಳ ಆರಂಭಿಸಿದರು. ಆರೋಪಿ ಕೈಯಲ್ಲಿದ್ದ ಚಾಕು ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saif Ali Khan: ನಟ ಸೈಫ್ ಅಲಿಖಾನ್ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
Video: ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ
Video: ಆತ್ಮಹತ್ಯೆ ಮಾಡಿಕೊಳ್ಳಲು 13ನೇ ಮಹಡಿಯಿಂದ ಜಿಗಿದರೂ ಬದುಕುಳಿದ ಕಾರ್ಮಿಕ….
MUST WATCH
ಹೊಸ ಸೇರ್ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Saif Ali Khan: ನಟ ಸೈಫ್ ಅಲಿಖಾನ್ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.