ಕೋಹಿನೂರ್ ಕೊಟ್ಟಿದ್ದ ರಾಜ
Team Udayavani, Oct 17, 2018, 7:33 AM IST
ಲೂಧಿಯಾನಾ: ಬ್ರಿಟನ್ ಸರಕಾರದ ವಶದಲ್ಲಿರುವ ಕೋಹಿನೂರ್ ವಜ್ರವನ್ನು ಮರಳಿ ಭಾರತಕ್ಕೆ ತರಬೇಕು ಎಂಬ ವಾದ ಹಲವು ವರ್ಷಗಳಿಂದ ಕೇಳುತ್ತಾ ಇದೆ. 2016ರರ ಏಪ್ರಿಲ್‌ನಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಸರಕಾರ “ಕೋಹಿನೂರ್ ವಜ್ರವನ್ನು ಬಲವಂತವಾಗಿಯೂ ತೆಗೆದುಕೊಂಡು ಹೋಗಲಾಗಿಲ್ಲ ಅಥವಾ ಕಳವು ಮಾಡಲಾಗಿಲ್ಲ’ ಎಂಬ ಹೇಳಿಕೆ ನೀಡಿತ್ತು.
ಹೊಸದಾಗಿ ಬೆಳಕಿಗೆ ಬಂದಿರುವ ಮಾಹಿತಿ ಪ್ರಕಾರ ಪಂಜಾಬ್ ಅನ್ನು ಆಳುತ್ತಿದ್ದ ಮಹಾ ರಾಜ ರಂಜಿತ್ ಸಿಂಗ್ ವಂಶಸ್ಥರು ಅಂದಿನ ಬ್ರಿಟಿಷ್ ಆಡಳಿತದ ಈಸ್ಟ್ ಇಂಡಿಯಾ ಕಂಪೆನಿಗೆ ಉಡುಗೊರೆಯನ್ನಾಗಿ ನೀಡಿದ್ದರು. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರ ನೀಡಿ ವಜ್ರವನ್ನು ಲಾಹೋರ್‌ನ ಅಂದಿನ ಮಹಾರಾಜ ಇಂಗ್ಲೆಂಡ್‌ನ ರಾಣಿಯಾಗಿದ್ದ ವಿಕ್ಟೋರಿ ಯಾಗೆ ಹಸ್ತಾಂತರಿಸಿದ್ದರು ಎಂದು ಮಾಹಿತಿ ನೀಡಿದೆ. ಈ ಬಗ್ಗೆ ರೋಹಿತ್ ಸಿಂಗ್ ಎಂಬವರು ಮಾಹಿತಿ ಕೇಳಿದ್ದರು. ಎಎಸ್‌ಐ ನೀಡಿದ ಮಾಹಿತಿ ಪ್ರಕಾರ “ಮಹಾರಾಜ ದಿಲೀಪ್ ಸಿಂಗ್ ಮತ್ತು ಲಾರ್ಡ್ ಡಾಲ್ ಹೌಸಿ ನಡುವೆ 1849ರಲ್ಲಿ ಸಹಿ ಹಾಕಲಾದ ಲಾಹೋರ್ ಒಪ್ಪಂದದ ಅನ್ವಯ ಕೋಹಿನೂರ್ ವಜ್ರವನ್ನು ಲಾಹೋರ್‌ನ ಮಹಾರಾಜ ಇಂಗ್ಲೆಂಡ್ ರಾಣಿಗೆ ನೀಡಿದ್ದರು’ ಎಂದು ತಿಳಿಸಿದೆ. ಜತೆಗೆ ಒಪ್ಪಂದ ಪತ್ರದಲ್ಲಿನ ವಾಕ್ಯಗಳ ದಾಖಲೆಯನ್ನೂ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರ ನೀಡಿದ ಕೇಂದ್ರ ಸರಕಾರ ಆಂಗ್ಲೋ- ಸಿಕ್ಖ್ ಯುದ್ಧದ ವೆಚ್ಚ ನೀಡುವ ನಿಟ್ಟಿನಲ್ಲಿ ರಂಜಿತ್ ಸಿಂಗ್ ವಂಶಸ್ಥರು “ಸ್ವಯಂ ಪ್ರೇರಿತ’ವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ವಜ್ರವನ್ನು ನೀಡಿದ್ದರು ಎಂದು ಸರಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.