ಕೋಲ್ಕತ : ಒಳರೋಗಿ ಬಾಲಕಿಯ ಸಾವು: ಉದ್ರಿಕ್ತರಿಂದ ಆಸ್ಪತ್ರೆ ಮೇಲೆ ದಾಳಿ
Team Udayavani, Feb 15, 2017, 4:16 PM IST
ಕೋಲ್ಕತ : ಒಳರೋಗಿಯಾಗಿ ಆಸ್ಪತ್ರೆ ಸೇರಿದ ಬಾಲಕಿಯ ಅಛಾನಕ್ ಸಾವಿನಿಂದ ಆಕ್ರೋಶಿತರಾದ ಸುಮಾರು ನೂರಕ್ಕೂ ಹೆಚ್ಚು ಉದ್ರಿಕ್ತ ಜನರ ತಂಡವೊಂದು ನಗರದ ನೈಋತ್ಯ ಭಾಗದಲ್ಲಿನ ಏಕಬಲಪುರದಲ್ಲಿರುವ ಸಿಎಂಆರ್‌ಐ ಆಸ್ಪತ್ರೆಗೆ ನುಗ್ಗಿ ಅಲ್ಲಿನ ಪೀಠೊಪಕರಣ, ಕಂಪ್ಯೂಟರ್, ಹಾಗೂ ಇನ್ನಿತರ ಸಲಕರಣೆಗಳನ್ನು ಧ್ವಂಸ ಮಾಡಿ ಅನೇಕ ವೈದ್ಯಕೀಯ ಸಿಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ.
ಬಾಲಕಿಯನ್ನು ನಿನ್ನೆ ಮಂಗಳವಾರ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಇಂದು ಮೃತಪಟ್ಟಳು. ಇದರಿಂದ ಸಿಟ್ಟಿಗೆದ್ದ ಉದ್ರಿಕ್ತರ ಗುಂಪು ಆಸ್ಪತ್ರೆಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿಗುಟ್ಟಿತು. ರಿಸೆಪ್‌ಶನ್ ಹಾಗೂ ಬಿಲ್ಲಿಂಗ್ ಕೌಂಟರ್ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಹಾಗೂ ಪೀಠೊಪಕರಣಗಳನ್ನು ನಾಶಪಡಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ರೀತಿಯ ದಾಂಧಲೆ ನಡೆಸಿಯೂ ತೃಪ್ತವಾಗದ ಉದ್ರಿಕ್ತರ ಗುಂಪು ಅನಂತರ ಏಕಬಲಪುರದ ಡೈಮಂಡ್ ಹಾರ್ಬರ್ ರಸ್ತೆಯನ್ನು ತಡೆದು ಬೆಳಗ್ಗಿನ ವಾಹನ ದಟ್ಟನೆಯ ವೇಳೆ ಕೋರ್ಟ್ ಕಚೇರಿ, ಬ್ಯಾಂಕುಗಳಿಗೆ ಹೋಗುವವರಿಗೆ ತೀವ್ರ ತೊಂದರೆ ಮಾಡಿತು.
ಉದ್ರಿಕ್ತರನ್ನು ನಿಯಂತ್ರಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಆಸ್ಪತ್ರೆಗೆ ಬಿಗುಬಂದೋಬಸ್ತ್ ಏರ್ಪಡಿಸಲಾಯಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.