![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 7, 2020, 7:13 AM IST
ಲಾಕ್ ಡೌನ್ ಅವಧಿಯಲ್ಲಿ ಜನಿಸಿದ ಮಕ್ಕಳಿಗೆ ಕೆಲವೆಡೆ ಹೆತ್ತವರು ಕೊರೊನಾ, ಕೋವಿಡ್ ಎಂದೆಲ್ಲಾ ಹೆಸರಿಟ್ಟರು. ಇನ್ನೂ ಕೆಲವರು ಮನೆಯಲ್ಲಿನ ಮುದ್ದಿನ ಶ್ವಾನ, ಬೆಕ್ಕಿಗೂ ಮಾರಕ ಸೋಂಕಿನ ಹೆಸರಿಟ್ಟು ಸುದ್ದಿಯಾದರು.
ಆದರೆ ಈ ಪಶ್ಚಿಮ ಬಂಗಾಲದ ಜನ ಸ್ವಲ್ಪ ವಿಭಿನ್ನವಾಗಿ ಆಲೋಚಿಸಿದ್ದಾರೆ. ಕೋಲ್ಕತಾದ ಸಿಹಿ ತಿನಿಸುಗಳ ಅಂಗಡಿ ಒಂದರಲ್ಲಿ ಕೋವಿಡ್ ವೈರಸ್ ಆಕಾರದ ಸಿಹಿ ತಿನಿಸು ತಯಾರಿಸಿ, ಅದಕ್ಕೆ ‘*** ಸಂದೇಶ್’ ಎಂದು ನಾಮಕರಣ ಮಾಡಿ ಮಾರಾಟಕ್ಕಿಡಲಾಗಿದೆ.
ಪ್ರೀತಿ ಭಟ್ಟಾಚಾರ್ಯ ಎಂಬುವರು ಈ ಸ್ವೀಟಿನ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ವಿಷಯ ಏನೆಂದರೆ ಸಿಹಿ ತಿನಿಸುಗಳ ಪ್ರಿಯರಾಗಿರುವ ಬೆಂಗಾಲಿಗರು, ಈ ಸ್ವೀಟನ್ನು ಕೊಂಡು ತಿನ್ನೋದೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ!
You seem to have an Ad Blocker on.
To continue reading, please turn it off or whitelist Udayavani.