Kolkata; ವೈದ್ಯೆ ರೇಪ್ ಮೊದಲು ಗೆಳತಿ ಬೆತ್ತಲೆ ಫೋಟೊ ವೀಕ್ಷಿಸಿದ್ದ!!
ಟ್ರೈನಿ ವೈದ್ಯೆ ಅತ್ಯಾಚಾರ, ಕೊಲೆ ಒಪ್ಪಿಕೊಂಡ ಆರೋಪಿ... ಸ್ನೇಹಿತನ ಜತೆ ರೆಡ್‌ಲೈಟ್ ಪ್ರದೇಶಕ್ಕೆ ಭೇಟಿ: ವರದಿ
Team Udayavani, Aug 27, 2024, 6:55 AM IST
ಹೊಸದಿಲ್ಲಿ: ಕೋಲ್ಕತಾ ಟ್ರೈನಿ ವೈದ್ಯೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದಾಗಿ ಆರೋಪಿ ಸಂಜಯ್ ರಾಯ್ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಒಪ್ಪಿಕೊಂಡಿ ರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ವೈದ್ಯೆಯ ಕೊಲೆ ನಡೆಸುವ ಮುಂಚೆ ಸಂಜಯ್ ತನ್ನ ಸ್ನೇಹಿತನ ಜತೆಗೂಡಿ ಕೋಲ್ಕತಾದ 2 ರೆಡ್‌ಲೈಟ್ ಪ್ರದೇಶಗಳಿಗೆ ಭೇಟಿ ನೀಡಿದ್ದ. ಆದರೆ ಸೆಕ್ಸ್ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಮೊದಲು ಸೋನಾಗಚಿ ರೆಡ್‌ಲೈಟ್‌ಗೆ ಸ್ನೇಹಿತನ ಜತೆಗೂಡಿ ಹೋದೆ. ಆದರೆ ಅಲ್ಲಿ ಯಾವುದೇ ಉಪಯೋಗವಾಗದ್ದರಿಂದ ಬಳಿಕ ಮತ್ತೂಂದು ರೆಡ್ ಲೈಟ್ ಏರಿಯಾ ಚೆಟ್ಲಾಗೆ ಹೋದೆವು. ಅಲ್ಲಿಗೆ ಹೋಗು ವಾಗ ದಾರಿ ಮಧ್ಯೆ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದೆವು. ಚೆಟ್ಲಾದಲ್ಲಿ ನನ್ನ ಸ್ನೇಹಿತ ಸೆಕ್ಸ್ ಮಾಡಿದ. ಈ ವೇಳೆ ನಾನು, ನನ್ನ ಗೆಳತಿಗೆ ವೀಡಿಯೋ ಕಾಲ್ ಮಾಡಿ, ಬೆತ್ತಲೆ ಫೋಟೋ ಕಳುಹಿಸುವಂತೆ ಕೇಳಿದೆ. ಅವಳು ತನ್ನ ಬೆತ್ತಲೆ ಫೋಟೋ ಕಳುಹಿಸಿದಳು. ಬಳಿಕ ಅಲ್ಲಿಂದ ನೇರವಾಗಿ ಆರ್‌ಜಿ ಕಾರ್ ಆಸ್ಪತ್ರೆಗೆ ಬಂದೆವು. ನಾನು ನೇರವಾಗಿ 4ನೇ ಅಂತಸ್ತಿಗೆ ಹೋದೆ. ಅಲ್ಲಿನ ಸೆಮಿನಾರ್ ಹಾಲ್‌ನಲ್ಲಿ ಮಲಗಿದ್ದ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಸೀದಾ ಸ್ನೇಹಿತ ಎಎಸ್‌ಐ ಮನೆಗೆ ಹೋದೆ ಎಂದು ಆರೋಪಿ ಸಂಜಯ್ ಹೇಳಿದ್ದಾನೆ. ಆರೋಪಿ ಹೇಳಿದ ವಿಷಯಗಳು ಅಷ್ಟೂ ದೃಢಪಟ್ಟಿವೆ ಎನ್ನಲಾಗಿದೆ. ಹಾಗಿದ್ದೂ, ಅನೇಕ ವಿಷಯಗಳಲ್ಲಿ ಆತ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಈತನ ಮೊಬೈಲ್‌ನಲ್ಲಿ ಸಾಕಷ್ಟು ಅಶ್ಲೀಲ ವೀಡಿಯೋಗಳ ಚಿತ್ರಿಕೆಗಳಿದ್ದವು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಮಾಜಿ ಪ್ರಿನ್ಸಿಪಾಲ್‌ಗೆ 2ನೇ ದಿನ ಸುಳ್ಳು ಪತ್ತೆ ಪರೀಕ್ಷೆ
ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರೆ 5 ಆರೋಪಿಗಳ ಮೇಲೆ 2ನೇ ಹಂತದ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗಿದೆ. ತನಿಖೆ ಯಲ್ಲಿ ಘೋಷ್ ಅಸಮಂಜಸ ಉತ್ತರಗಳನ್ನು ನೀಡುತ್ತಿ ರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೂಂದು ಸುತ್ತಿನ ಸುಳ್ಳು ಪತ್ತೆ ಪರೀಕ್ಷೆ ನಡೆಸು ತ್ತಿದ್ದಾರೆ. ಅತ್ಯಾಚಾರದ ತನಿಖೆಯೊಂದಿಗೆ ಆಸ್ಪತ್ರೆ ಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಕುರಿತು ಕೂಡ ತನಿಖೆ ನಡೆಸುತ್ತಿದೆ.
ಬಂಗಾಲದಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಶುರು ಏಕಿಲ್ಲ?: ಕೇಂದ್ರ
ಪಶ್ಚಿಮ ಬಂಗಾಲದಲ್ಲಿ ಅತ್ಯಾಚಾರ ಸೇರಿ ಮಹಿಳೆಯರ ವಿರುದ್ಧದ ಪ್ರಕರಣಗಳ ತನಿಖೆಗೆ ತ್ವರಿತ ಗತಿ ಕೋರ್ಟ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡ ಲಾಗಿ ದ್ದರೂ, ಏಕೆ ಆರಂಭಿ ಸ ಲಾಗಿಲ್ಲ ಎಂದು ಕೇಂದ್ರ ಸರಕಾರ ಪ್ರಶ್ನಿಸಿದೆ. ಟ್ರೈನಿ ವೈದ್ಯೆ ಮೇಲೆ ಅತ್ಯಾ ಚಾರ, ರೇಪ್ ನಡೆದಿದ್ದ ಪ್ರಕರಣ ಖಂಡಿಸಿ ಕಠಿನ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಮಮತಾ ಬ್ಯಾನರ್ಜಿಗೆ ಉತ್ತರಿಸಿದ ಕೇಂದ್ರ ಸಚಿವೆ ಅನ್ನಪೂರ್ಣಾ ದೇವಿ, ಮಹಿಳೆಯರ ಸಹಾಯವಾಣಿ ಆರಂಭಿಸುವಂತೆ ಸೂಚಿಸಲಾಗಿತ್ತು. ಅದು ಇನ್ನೂ ಶುರುವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.