ಕೇರಳದ ಪ್ರಥಮ ಕಂದಾಯ ಸಚಿವೆ, ಕಮ್ಯೂನಿಷ್ಟ್ ನಾಯಕಿ ಕೆಆರ್ ಗೌರಿ ವಿಧಿವಶ
ಮ್ಯೂನಿಷ್ಟ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆಆರ್ ಗೌರಿ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
Team Udayavani, May 11, 2021, 11:07 AM IST
ನವದೆಹಲಿ: ಕೇರಳ ರಾಜ್ಯದ ಮೊದಲ ಕಂದಾಯ ಸಚಿವೆ, ಹಿರಿಯ ರಾಜಕಾರಣಿ ಕೆಆರ್ ಗೌರಿ(102ವರ್ಷ) ಮಂಗಳವಾರ(ಮೇ 11) ಬೆಳಗ್ಗೆ ವಿಧಿವಶರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಗೌರಿ ಅಮ್ಮ ಎಂದೇ ಜನಪ್ರಿಯರಾಗಿದ್ದರು. ಇಂದು ಬೆಳಗ್ಗೆ ತಿರುವನಂತಪುರಂನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ. ತಮ್ಮ ಜೀವನದುದ್ದಕ್ಕೂ ಹೋರಾಟವನ್ನೇ ಬದುಕನ್ನಾಗಿ ಮಾಡಿಕೊಂಡವರು ಗೌರಿ ಅಮ್ಮ.
ಕೇರಳದಲ್ಲಿನ ಕಮ್ಯುನಿಷ್ಟ್ ಚಳವಳಿಯ ಸ್ಥಾಪಕ ಸದಸ್ಯರಲ್ಲಿ ಗೌರಿ ಅಮ್ಮ ಕೂಡಾ ಒಬ್ಬರಾಗಿದ್ದಾರೆ. ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಗೌರಿ ಅಮ್ಮನನ್ನು ಏಪ್ರಿಲ್ 22ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರನ್ನು ಪರೀಕ್ಷೆಗೊಳಪಡಿಸಿದ್ದ ಸಂದರ್ಭದಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿರುವುದಾಗಿ ತಿಳಿಸಿದೆ.
1957ರಲ್ಲಿ ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಕಮ್ಯೂನಿಷ್ಟ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆಆರ್ ಗೌರಿ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.