ಬೊಜ್ಜು ಕರಗಿಸಲು ಬಂದ ಮಹಿಳೆಯನ್ನು ಕ್ರೇನ್ನಲ್ಲಿ ಎತ್ತಿದರು!
Team Udayavani, Feb 12, 2017, 3:45 AM IST
ಮುಂಬೈ: ವಿಶ್ವದಲ್ಲಿಯೇ ಅತ್ಯಂತ ದಢೂತಿ ಮಹಿಳೆ ಎಂದು ಕರೆಯಿಸಿಕೊಳ್ಳುವ ಇಮಾನ್ ಅಹ್ಮದ್ (36) ಚಿಕಿತ್ಸೆಗಾಗಿ ಮುಂಬೈಗೆ ಆಗಮಿಸಿದ್ದಾರೆ. 500 ಕೆಜಿ ತೂಕ ಹೊಂದಿರುವ ಅವರನ್ನು ವಿಮಾನದಿಂದ ಸುಸಜ್ಜಿತ ಟ್ರಕ್ಗೆ ಕ್ರೇನ್ ಮೂಲಕ ಎತ್ತಿಕೊಂಡು ಕರೆತರಲಾಗಿದೆ. ಅವರ ಪ್ರಯಾಣಕ್ಕಾಗಿ ಈಜಿಪ್ಟ್ ಏರ್ಲೈನ್ಸ್ ವಿಶೇಷ ವ್ಯವಸ್ಥೆ ಮಾಡಿತ್ತು. ವಿಮಾನ ನಿಲ್ದಾಣದಿಂದ ಸುಸಜ್ಜಿತ ಲಾರಿಯಲ್ಲಿ, ಆ್ಯಂಬ್ಯುಲೆನ್ಸ್, ವೈದ್ಯರ ನೆರವಿನೊಂದಿಗೆ ಆಸ್ಪತ್ರೆಗೆ ಕರೆತರಲಾಗಿದೆ. ಇಮಾನ್ ಅವರಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗಿದ್ದು ಚಿಕಿತ್ಸೆ ನಡೆಯಲಿದೆ. ಕಳೆದ 25 ವರ್ಷಗಳಿಂದ ಮಲಗಿದಲ್ಲೇ ಇರುವ ಇಮಾನ್ ಅವರೊಂದಿಗೆ ಅವರ ಸೋದರಿಯೂ ಬಂದಿದ್ದಾರೆ. ದಢೂತಿ ವ್ಯಕ್ತಿಯಾಗಿರುವುದರಿಂದ ವಿಮಾನ ಪ್ರಯಾಣ ವೇಳೆ ರಕ್ತ ಹೆಪ್ಪುಗಟ್ಟದಂತೆ ಅವರಿಗೆ ವಿಶೇಷ ಔಷಧಿ ನೀಡಲಾಗಿದೆ.
ಅವರಿಗೆ ಇಲ್ಲಿನ ಸೈಫೀ ಆಸ್ಪತ್ರೆಯ ತಜ್ಞ ವೈದ್ಯರು ಚಿಕಿತ್ಸೆ ನೀಡುವುದಾಗಿ ಈ ಹಿಂದೆ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ವಿಶೇಷವಾದ ಕೊಠಡಿಯನ್ನೂ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿದೆ. ಚಿಕಿತ್ಸೆ ಆರಂಭಿಸುವ ಮೊದಲು 1 ತಿಂಗಳ ಕಾಲ ಅವರನ್ನು ವೈದ್ಯರ ತಂಡ ಪರಿಶೀಲನೆ ನಡೆಸಲಿದೆ. ಡಾ.ಮುಫಝಾಲ್ ನೇತೃತ್ವದ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ. ವಿದೇಶಿ ಮಾಧ್ಯಮಗಳಲ್ಲೂ ಇದು ಸುದ್ದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.