House arrest: ಮಾರಾಮಾರಿ ಪ್ರಕರಣ; ಕೆಟಿಆರ್ ಸೇರಿ ಬಿಆರೆಸ್ ಪ್ರಮುಖರ ಗೃಹ ಬಂಧನ
Team Udayavani, Jan 14, 2025, 8:27 PM IST
ಹೈದರಾಬಾದ್: ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ಪಕ್ಷದ ಮತ್ತೂಬ್ಬ ಹಿರಿಯ ನಾಯಕ ಟಿ.ಹರೀಶ್ ರಾವ್ ಸೇರಿದಂತೆ ಪ್ರಮುಖರನ್ನು ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ. ಹೈದರಾಬಾದ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಈ ಮಾಹಿತಿ ಖಚಿತಪಡಿಸಿದ್ದಾರೆ.
ಭಾನುವಾರ ಕರೀಂನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕ ಎಂ.ಸಂಜಯ ಕುಮಾರ್ ಮತ್ತು ಬಿಆರ್‌ಎಸ್ ಶಾಸಕ ಪಡಿ ಕೌಶಿಕ್ ರೆಡ್ಡಿ ನಡುವೆ ಮಾರಾಮಾರಿ ಉಂಟಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ಕೌಶಿಕ್‌ರನ್ನು ಪೊಲೀಸರು ಬಂಧಿಸಿದ್ದರೂ, ಅವರಿಗೆ ಜಾಮೀನು ಸಿಕ್ಕಿತ್ತು. ಕೌಶಿಕ್‌ಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆ.ಟಿ.ರಾಮರಾವ್, ಟಿ.ಹರೀಶ್ ರಾವ್ ಮತ್ತು ಬಿಆರ್‌ಎಸ್‌ನ ಹಲವು ಪ್ರಮುಖರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
CongressVsAAP: ದಿಲ್ಲಿ ಪ್ಯಾರಿಸ್ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್
School Threat: ಉಗ್ರನ ಬೆಂಬಲಿಸಿದ್ದ ಸಂಸ್ಥೆ ಜತೆ ವಿದ್ಯಾರ್ಥಿಗೆ ನಂಟು!
Bengal: ಗಾಲಿಕುರ್ಚಿ ಅಲಭ್ಯತೆ: ಬೆನ್ನ ಮೇಲೆ ಪತಿಯ ಹೊತ್ತ ಮಹಿಳೆ!
Kumbh Mela: ಮೊದಲ ಶಾಹಿ ಸ್ನಾನ: 3.5 ಕೋಟಿ ಮಂದಿ ಭಾಗಿ; ಎರಡನೇ ಶಾಹಿಸ್ನಾನ ಜ.29ಕ್ಕೆ ನಿಗದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.