ರೈಲು ನಿಲ್ದಾಣಕ್ಕೆ ಮತ್ತೆ ಮಣ್ಣಿನ ಕುಡಿಕೆ
Team Udayavani, Jan 21, 2019, 12:50 AM IST
ಹೊಸದಿಲ್ಲಿ: ಉತ್ತರಪ್ರದೇಶದ ವಾರಾಣಸಿ ಹಾಗೂ ರಾಯ್‌ಬರೇಲಿಯ ರೈಲು ನಿಲ್ದಾಣಗಳಲ್ಲಿ ಟೆರ್ರಾಕೋಟದಿಂದ (ಜೇಡಿ ಮಣ್ಣಿನ ಒಂದು ವಿಧ) ತಯಾರಾದ ಮಣ್ಣಿನ ಕುಡಿಕೆಗಳು, ಮಣ್ಣಿನ ಪಾತ್ರೆ ಹಾಗೂ ತಟ್ಟೆಗಳಲ್ಲಿ ಪ್ರಯಾಣಿಕರಿಗೆ ಚಹಾ, ಕಾಫಿ ಮತ್ತು ಇನ್ನಿತರ ಲಘು ಆಹಾರ ಸರಬರಾಜು ಮಾಡುವಂತೆ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಈಶಾನ್ಯ ರೈಲ್ವೇ ವಿಭಾಗಕ್ಕೆ ಆದೇಶಿಸಿದ್ದಾರೆ.
ಇದರಿಂದಾಗಿ 15 ವರ್ಷಗಳ ಹಿಂದೆ ಅಂದಿನ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರ ಒತ್ತಾಸೆಯ ಮೇರೆಗೆ ರೈಲು ನಿಲ್ದಾಣಗಳಲ್ಲಿ ಬಳಕೆಗೆ ಬಂದಿದ್ದ ಮಣ್ಣಿನ ಕುಡಿಕೆಗಳು ಸದ್ಯದಲ್ಲೇ ಪುನಃ ರೈಲು ನಿಲ್ದಾಣಗಳಲ್ಲಿ ಪ್ರತ್ಯಕ್ಷವಾಗಲಿವೆ. ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೇ ಇಲಾಖೆ ಅಧಿಕಾರಿಗಳು, ಹೊಸ ಆದೇಶದಿಂದ ಪ್ಲಾಸ್ಟಿಕ್ ಕಪ್‌ಗ್ಳಿಗೆ ವಿದಾಯ ಹೇಳುವುದು ಮಾತ್ರ ವಲ್ಲದೆ ಸ್ಥಳೀಯ ಕುಂಬಾರರಿಗೆ ಉದ್ಯೋಗ ಕಲ್ಪಿಸಿದಂತೆಯೂ ಆಗಲಿದೆ ಎಂದಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ), ಗೋಯೆಲ್ ಅವರಿಗೆ ಪತ್ರ ಬರೆದು ವಾರಾಣಸಿ ಮತ್ತು ರಾಯ್ ಬರೇಲಿಯ ರೈಲು ನಿಲ್ದಾಣಗಳಲ್ಲಿ ಮಣ್ಣಿನ ಸಲಕರಣೆಗಳ ಉಪಯೋಗಕ್ಕೆ ಅನುವು ಮಾಡಿಕೊಟ್ಟರೆ ಈ ಭಾಗದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಮನವಿ ಮಾಡಿತ್ತು.
ಹಿಂದೆ ಬಳಕೆಗೆ ಬಂದಿದ್ದ ಮಣ್ಣಿನ ಪಾತ್ರೆಗಳಿಗಿಂತ ಈಗಿನ ಪಾತ್ರೆಗಳು ಉತ್ತಮ ದರ್ಜೆಯದಾಗಿರಲಿದ್ದು, ಗ್ರಾಹಕರ ಮನ ಗೆಲ್ಲಲಿವೆ. ಈಗಾಗಲೇ ಸುಧಾರಿತ ಪಾತ್ರೆ ತಯಾರಿಸಲು ತರಬೇತಿ ನೀಡಲಾಗಿದೆ. ಕುಂಬಾರರಿಗೆ ವಿದ್ಯುತ್ ಚಾಲಿತ ಗಾಲಿಗಳನ್ನು ನೀಡಲಾಗಿದೆ. ಇದರಿಂದ ದಿನವೊಂದಕ್ಕೆ 100 ಕಪ್ ತಯಾರಿಸುವವರು 600 ಕಪ್ ತಯಾರಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.