ನಿರ್ದೇಶಕ ಕುಂದನ್ ಷಾ ನಿಧನ
Team Udayavani, Oct 8, 2017, 6:15 AM IST
ಮುಂಬೈ: ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಸಿನಿಮಾ ನಿರ್ದೇಶಕ ಕುಂದನ್ ಷಾ ಶನಿವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. “ಜಾನೇ ಭಿ ದೋ ಯಾರೋಂ’, “ಕಭಿ ಹಾ ಕಭಿ ನಾ’ ದಂಥ ಜನಪ್ರಿಯ ಸಿನಿಮಾಗಳನ್ನು ನಿರ್ದೇ ಶಿಸಿದ್ದ ಷಾ, ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಷಾ ನಿಧನಕ್ಕೆ ಬಾಲಿವುಡ್ ನಟರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರೂ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
1983ರಲ್ಲಿ ನಿರ್ದೇಶಿಸಿದ ಮೊದಲನೇ ಸಿನಿಮಾ “ಜಾನೇ ಭಿ ದೋ ಯಾರೋಂ’ಗೆ ರಾಷ್ಟ್ರಪ್ರಶಸ್ತಿ ಗಳಿಸಿದ್ದ ಕುಂದನ್ ಷಾ, ಹಲವು ನಟರನ್ನು ಈ ಸಿನಿಮಾದ ಮೂಲಕ ಬಾಲಿವುಡ್‌ಗೆ ಪರಿಚಯಿಸಿದ್ದರು. ಅಲ್ಲದೆ ನಂತರ ಟಿವಿ ಧಾರಾವಾಹಿಗಳನ್ನೂ ನಿದೇಶಿಸಿದ್ದ ಅವರು, ಜನಪ್ರಿಯ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್‌ರ ಕಾಮನ್ ಮ್ಯಾನ್ ಪಾತ್ರವನ್ನು ಬಳಸಿಕೊಂಡು “ವಾಗ್ಲೆ ಕಿ ದುನಿಯಾ’ ಎಂಬ ಧಾರಾವಾಹಿ ನಿರ್ದೇಶಿಸಿದ್ದರು. ಇದು ಭಾರಿ ಜನಪ್ರಿಯತೆ ಗಳಿಸಿತ್ತು. ಶಾರುಖ್ ಖಾನ್ ಅಭಿನಯದ ಜನಪ್ರಿಯ ಸಿನಿಮಾ “ಕಭೀ ಹಾ ಕಭೀ ನಾ’ ಹಾಗೂ ಪ್ರೀತಿ ಜಿಂಟಾ ಅಭಿನಯದ “ಕ್ಯಾ ಕೆಹನಾ’ ಸಿನಿಮಾವನ್ನೂ ಷಾ ನಿರ್ದೇಶಿಸಿದ್ದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ವಿಡಂಬನೆ, ವಾಸ್ತವ ಹಾಗೂ ತಿಳಿಹಾಸ್ಯ ಮಿಶ್ರಣದ ಕಥೆಗಳಿಗೆ ಅವರು ಜನಪ್ರಿಯವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ
Election: ಝಾರ್ಖಂಡ್‌ನಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್: ಕಾಂಗ್ರೆಸ್
Bengaluru ವಿಭಾ ಸೇರಿ ರೋಡ್ಸ್ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ
UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ
PM MODI: ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನಕ್ಕೆ ಕಾಂಗ್ರೆಸ್ ಸಂಚು
MUST WATCH
ಹೊಸ ಸೇರ್ಪಡೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ
Election: ಝಾರ್ಖಂಡ್‌ನಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್: ಕಾಂಗ್ರೆಸ್
Bengaluru ವಿಭಾ ಸೇರಿ ರೋಡ್ಸ್ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ
UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.