ಗೋವಾ ಮನೋರಂಜನಾ ಸಂಸ್ಥೆಗೆ ಮಾಹಿತಿಯ ಕೊರತೆ: ದುಃಖಕರ ಎಂದ ಕಾಮತ್
Team Udayavani, Nov 4, 2021, 3:24 PM IST
ಪಣಜಿ: ‘2020 ರಲ್ಲಿ ಗೋವಾದಲ್ಲಿ ನಿರ್ಮಾಗೊಂಡಿರುವ ಸ್ಥಳೀಯ ಚಲನಚಿತ್ರಗಳ ಬಗ್ಗೆ ಮಾಹಿತಿಯಿಲ್ಲ ಎಂದು ಗೋವಾ ಮನೋರಂಜನಾ ಸಂಸ್ಥೆ ಹೇಳಿದೆ. ಇದು ಅತ್ಯಂತ ದುಃಖಕರ ಸಂಗತಿಯಾಗಿದೆ.ಈ ವಿಷಯದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಹಸ್ತಕ್ಷೇಪ ಮಾಡಿ 2021 ರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋವಾದ ಜನಲಚಿತ್ರಗಳಿಗೆ ವಿಶೇಷ ವಿಭಾಗ ಆರಂಭಿಸಬೇಕು’ ಎಂದು ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಆಗ್ರಹಿಸಿದ್ದಾರೆ.
ಮಡಗಾಂವನಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಾವಧಿಯಲ್ಲಿ 2005 ರಿಂದ 2011 ರ ವರೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋವಾದಲ್ಲಿ ನಿರ್ಮಾಣಗೊಂಡ ಹೆಚ್ಚಿನ ಚಲನಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.ಆದರೆ 2012 ರಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗೋವಾದ ಜಲನಚಿತ್ರಗಳಿಗೆ ಚಲನಚಿತ್ರೋತ್ಸವದಲ್ಲಿ ವಿಶೇಷ ವಿಭಾಗ ಆರಂಭಿಸಲು ಸಾಧ್ಯವಾಗಲಿಲ್ಲ’ ಎಂದು ಆರೋಪಿಸಿದರು
ಇದನ್ನೂ ಓದಿ;- ಅಡುಗೆ ಅನಿಲ ಬೆಲೆ ಕೂಡಾ ಕಡಿಮೆ ಮಾಡಬೇಕು: ಡಿ ಕೆ ಶಿವಕುಮಾರ್
‘ಗೋವಾದ ಚಲನಚಿತ್ರ ನಿರ್ಮಾಪಕರಿಗೆ ಫಿಲ್ಮ ಫೈನ್ಸ ನಿಧಿಯನ್ನು ಇದುವರೆಗೂ ವಿತರಿಸಲಾಗಿಲ್ಲ. ಸರ್ಕಾರವು ಈ ಯೋಜನೆಯನ್ನು ಬಂದ್ ಮಾಡಿದೆ. ಈ ಯೋಜನೆಯನ್ನು ಸರ್ಕಾರವು ಯಾವ ಕಾರಣಕ್ಕಾಗಿ ಬಂದ್ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ದಿಗಂಬರ್ ಕಾಮತ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.