Panaji: ಮಳೆ ಕೊರತೆ; ರೈತರಿಗೆ ಸಂಕಷ್ಟ
Team Udayavani, Sep 6, 2023, 2:54 PM IST
ಪಣಜಿ: ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ರಾಜ ವರುಣನಿಗಾಗಿ ಕಾಯುತ್ತಿದ್ದಾರೆ. ಮುಂದಿನ ವಾರ ಮಳೆ ಬಾರದಿದ್ದರೆ ಭತ್ತದ ಕೃಷಿ ಬೆಳೆಗಳಿಗೆ ತೊಂದರೆಯಾಗಲಿದೆ. ಭತ್ತದ ಕೃಷಿಗೆ ಭಾರಿ ಹೊಡೆತ ಬೀಳಬಹುದು ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಭತ್ತದ ಕೃಷಿಗೆ ನೀರಿಲ್ಲದ ಕಾರಣ ರೈತರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವರ್ಷ ಜೂನ್ ಮಧ್ಯಭಾಗದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗಿತ್ತು. ಜುಲೈನಲ್ಲಿ ಗೋವಾ ರಾಜ್ಯದಲ್ಲಿ ಸರಾಸರಿಗಿಂತ ದಾಖಲೆಯ ಮಳೆಯಾಗಿದೆ. ಆದರೆ ಆಗಸ್ಟ್‍ನಲ್ಲಿ ಕೇವಲ 12 ಇಂಚುಗಳಷ್ಟು ಮಳೆಯಾಗಿದೆ. ಸೆಪ್ಟೆಂಬರ್‍ನಲ್ಲಿ ನಿರೀಕ್ಷಿತ ಮಳೆಯಾಗುವ ಭರವಸೆ ಇಲ್ಲ. ರಾಜ್ಯದಲ್ಲಿ ಇದುವರೆಗೆ 110 ಇಂಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಗೋವಾ ರಾಜ್ಯದಲ್ಲಿ ಸದ್ಯ ಮಳೆಯ ಕೊರತೆಯಿಂದಾಗಿ ಭತ್ತ, ಸೌತೆಕಾಯಿ, ಇತರ ತರಕಾರಿ,ಸೇರಿದಂತೆ ಇತರೆ ತರಕಾರಿಗಳು ನೀರಿನ ಕೊರತೆ ಹಾಗೂ ಅಧಿಕ ಉಷ್ಣಾಂಶದಿಂದ ಅಪಾಯಕ್ಕೆ ಸಿಲುಕಿವೆ. “ರಾಜ್ಯಕ್ಕೆ ಈ ವರ್ಷ ಮುಂಗಾರು ತಡವಾಗಿ ಆಗಮಿಸಿತು, ಇದರಿಂದ ಬೆಳೆಗಳ ನಾಟಿ ವಿಳಂಬವಾಯಿತು. ನಂತರ ಜುಲೈನಲ್ಲಿ ಹೆಚ್ಚುವರಿ ಮಳೆಯಾಯಿತು ಆದರೆ ಅಗಷ್ಟ ತಿಂಗಳಿನಿಂದ ಮಳೆ ಕಡಿಮೆಯಾಗಿದೆ.” ಸದ್ಯ ಉತ್ತಮ ಮಳೆಯಾಗದಿದ್ದರೆ, ಬೆಳೆ ನಷ್ಟವಾಗುವ ಭೀತಿಯಿದೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಆತಂಕದ ವಿಷಯವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿ ನೇವಿಲ್ ಅಲ್ಫಾನ್ಸೊ ಪ್ರತಿಕ್ರಿಯೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.