ಲಡಾಖ್: ಇನ್ನಷ್ಟು ಸೇನೆ ನಿಯೋಜನೆ
ಎಲ್‌ಎಸಿ ಸನಿಹ ತಲುಪಿದ ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿ ; ತಕ್ಕ ಪ್ರತ್ಯುತ್ತರಕ್ಕೆ 45 ಸಹಸ್ರ ವೀರಯೋಧರು ಸನ್ನದ್ಧ
Team Udayavani, Jun 28, 2020, 6:00 AM IST
ಲಡಾಖ್/ಹೊಸದಿಲ್ಲಿ: ಚೀನದ ಪಡೆಯ ಬಾಲ ಕತ್ತರಿಸಲು ಭಾರತೀಯ ಸೇನಾ ಪಡೆ ಲಡಾಖ್‌ನಲ್ಲಿ ಸಂಪೂರ್ಣ ಸಜ್ಜಾಗಿದೆ.
ಉತ್ತರ ಭಾರತದ ಮಿಲಿಟರಿ ಕಂಟೋ ನ್ಮೆಂಟ್‌ಗಳು ಮತ್ತು ವಾಯುನೆಲೆಗಳಿಂದ ತುಕಡಿಗಳು, ಫಿರಂಗಿಗಳು, ಕಾಲಾಳುದಳ, ವಾಯು ಕಣ್ಗಾವಲು ರಾಡಾರ್‌ಗಳು, ಮುಂಚೂಣಿಯ ಫೈಟರ್ ಜೆಟ್‌ಗಳು ಒಂದು ತಿಂಗಳಿಂದ ಪೂರ್ವ ಲಡಾಖ್ ತಲುಪುತ್ತಿವೆ. ಕೊನೆಯ ಬೂಟ್ ನೆಲಕ್ಕಪ್ಪಳಿಸುವ ಹೊತ್ತಿಗೆ ಲಡಾಖ್‌ನಲ್ಲಿ ಒಟ್ಟು ವೀರಯೋಧರ ಸಂಖ್ಯೆ 45 ಸಾವಿರ ಆಗಿರುತ್ತದೆ!
ಏರ್‌ಲಿಫ್ಟ್
ಚಂಡೀಗಢದ ವಾಯುನೆಲೆಯಿಂದ ಐಎಎಫ್ನ ಸಿ-17 ಗ್ಲೋಬ್‌ಮಾಸ್ಟರ್ ಯುದ್ಧ ಸಾಮಗ್ರಿಗಳನ್ನು ಲಡಾಖ್‌ಗೆ ಒಯ್ಯುತ್ತಿದೆ. ಶನಿವಾರ 46 ಟನ್ ತೂಕದ ಟಿ-90 ಟ್ಯಾಂಕ್ ಅನ್ನು ಯಶಸ್ವಿಯಾಗಿ ಹೊತ್ತೂಯ್ದಿದೆ.
ಲ್ಯಾಂಡಿಂಗ್ ಮೈದಾನ ಸಕ್ರಿಯ
ಪೂರ್ವ ಲಡಾಖ್‌ನ ಡಿಬಿಒ, ಫುಕೆc ಮತ್ತು ನ್ಯೋಮಾ ವಾಯುನೆಲೆ ಸಕ್ರಿಯಗೊಳಿಸ ಲಾಗಿದೆ. ಇಲ್ಲಿಂದಲೇ ಭಾರತವು ಚೀನದ ಮೇಲೆ ವಾಯುಪ್ರಹಾರ ನಡೆಸಲಿದೆ. ನೌಕಾ ಪಡೆಯ ಮಲ್ಟಿಟಾಸ್ಕರ್ ಪಿ-8ಐ ಗಸ್ತು ತಿರುಗುತ್ತ ಚೀನ ಸೈನಿಕರ ಮೇಲೆ ನಿಗಾ ಇಟ್ಟಿದೆ. ಲಡಾಖ್ ಗಡಿಯ 65 ಪಾಯಿಂಟ್‌ಗಳಲ್ಲಿ ನಮ್ಮ ಯೋಧರು ಗಸ್ತು ತಿರುಗುತ್ತಿದ್ದಾರೆ.
ಭಾರತಕ್ಕೆ ಅಮೆರಿಕ
ಫೈಟರ್ ಜೆಟ್ ತರಬೇತಿ
ಚೀನದ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಭಾರತ, ಜಪಾನ್, ಆಸ್ಟ್ರೇಲಿಯಾಗಳಿಗೆ ಅಮೆರಿಕ ಫೈಟರ್ ಜೆಟ್ ತರಬೇತಿ ನೀಡಲು ನಿರ್ಧರಿಸಿದೆ. 2021ರ ಆರ್ಥಿಕ ವರ್ಷದ ಎನ್‌ಡಿಎಎ ಕಾಯ್ದೆಯಡಿ ಈ ತರಬೇತಿ ನೀಡಲಿದೆ. ಅಮೆರಿಕದ ಪೆಸಿಫಿಕ್ ಭೂಪ್ರದೇಶವಾದ ಗುವಾಮ್ ದ್ವೀಪದಲ್ಲಿ ಅಭ್ಯಾಸ ನಡೆಯಲಿದೆ.
ಹಿಂದೆ ಸರಿಯದ ಚೀನ
ಚೀನ ಕೂಡ ಎಲ್‌ಎಸಿ ಬಳಿ ಮಿಲಿಟರಿ ಬಲ ಹೆಚ್ಚಿಸಿದೆ. ಕಾಲಾಳು ದಳ, ಟ್ಯಾಂಕರ್‌ಗಳು, ಯುದ್ಧ ವಿಮಾನಗಳನ್ನು ಪಿಎಲ್‌ಎ ಕರೆತಂದಿದೆ. ಪ್ಯಾಂಗಾಂಗ್ ಸರೋವರ ಬಳಿಯ ಫಿಂಗರ್- 4ರ ಬಳಿ ಹೆಲಿಪ್ಯಾಡ್ ನಿರ್ಮಿಸುತ್ತಿದೆ ಎಂದು ವರದಿಗಳು ಹೇಳಿವೆ. ಇದೇವೇಳೆ ಆಸಿಯಾನ್ ದೇಶಗಳು ದಕ್ಷಿಣ ಚೀನ ಸಮುದ್ರದಲ್ಲಿ ಚೀನದ ಆಕ್ರಮಣವನ್ನು ವಿರೋಧಿಸಿ ಒಕ್ಕೊರಲ ಹೇಳಿಕೆ ನೀಡಿದ್ದಾರೆ.
ಚೀನ ಭಾರೀ ಬೆಲೆ ತೆರಲಿದೆ
ಪೂರ್ವ ಲಡಾಖ್‌ನಲ್ಲಿ ಭಾರತದ ವಿರುದ್ಧ ಚೀನವು ಆಕ್ರಮಣಕಾರಿ ಪ್ರವೃತ್ತಿಯನ್ನು ಮುಂದುವರಿಸಿದರೆ ಅದು ಜಾಗತಿಕವಾಗಿ ಏಕಾಂಗಿಯಾಗುವ ಮೂಲಕ ಭಾರೀ ಬೆಲೆ ತೆರಲಿದೆ ಎಂದು ಮಾಜಿ ಸೇನಾ ಮುಖ್ಯಸ್ಥ ಲೆ| ಜ| ಗುರ್ಮಿತ್ ಸಿಂಗ್ ಎಚ್ಚರಿಸಿದ್ದಾರೆ. ಕಳೆದ ಎರಡು-ಮೂರು ತಿಂಗಳುಗಳಲ್ಲಿ ಪೂರ್ವ ಲಡಾಖ್ ಮತ್ತು ದಕ್ಷಿಣ ಚೀನ ಸಮುದ್ರದಲ್ಲಿ ಚೀನ ನಡೆಸಿರುವ ದುಸ್ಸಾಹಸಗಳು ಇಡೀ ಜಗತ್ತೇ ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಸಮಯದಲ್ಲಿ ಅದರ “ನೈಜ ಮುಖ’ವನ್ನು ಬಹಿರಂಗಪಡಿಸಿವೆ. ಅಲ್ಲದೆ ಚೀನಕ್ಕೆ ಆರ್ಥಿಕವಾಗಿ ತೀವ್ರ ಹೊಡೆತ ನೀಡಲಿವೆ ಎಂದು ಮಾಜಿ ಸೇನಾ ಮುಖ್ಯಸ್ಥ ಲೆ| ಜ| ಗುರ್ಮಿತ್ ಸಿಂಗ್ ಎಚ್ಚರಿಸಿದ್ದಾರೆ.
ಎಸ್-400 ಕ್ಷಿಪಣಿ
ನೀಡಲು ಒಪ್ಪಿದ ರಷ್ಯಾ
ಭಾರತಕ್ಕೆ ಅತೀ ಶೀಘ್ರದಲ್ಲಿಯೇ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಒದಗಿಸಲು ರಷ್ಯಾ ನಿರ್ಧರಿಸಿದೆ. ರಕ್ಷಣ ಸಚಿವ ರಾಜನಾಥ್ ಸಿಂಗ್ ಭೇಟಿ ವೇಳೆ ರಷ್ಯಾ ಈ ಭರವಸೆ ನೀಡಿದೆ. ಏಕಕಾಲದಲ್ಲಿ 300 ಗುರಿಗಳನ್ನು ಸಮರ್ಥವಾಗಿ ಉಡಾಯಿಸುವ ಈ ಸುಧಾರಿತ ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾ ಮಾತ್ರವೇ ಹೊಂದಿದೆ. ಜಗತ್ತಿನ ಇತರ ರಾಷ್ಟ್ರಗಳು ಇದಕ್ಕೆ ಬೇಡಿಕೆ ಮುಂದಿಟ್ಟಿದ್ದರೂ ಭಾರತಕ್ಕೆ ಮೊದಲ ಆದ್ಯತೆ ನೀಡುವುದಾಗಿ ರಷ್ಯಾ ಉಪಪ್ರಧಾನಿ ಯೂರಿ ಬೊರಿಸೊವ್ ತಿಳಿಸಿದ್ದಾರೆ. ಭಾರತ 2019ರಲ್ಲಿ ಇದರ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು.
ಚೀನದ ವಸ್ತು
ಬಹಿಷ್ಕಾರಕ್ಕೆ ಯೋಧ ಕರೆ
ಚೀನದ ವಸ್ತು, ಆ್ಯಪ್ ಬಹಿಷ್ಕಾರಕ್ಕೆ ಯೋಧರೂ ಧ್ವನಿಗೂಡಿಸಿದ್ದಾರೆ. ಯೋಧ ರೊಬ್ಬರು ಚೀನದ ಆ್ಯಪ್‌ಅಳಿಸಿ, ಅವರ ಉತ್ಪನ್ನಗಳನ್ನು ಬಹಿಷ್ಕರಿಸಿ ಸದಾ ದೇಶಭಕ್ತ ರಾಗಿರಿ. ನಾವು ಲಡಾಖ್‌ನಲ್ಲಿ ಗಡಿರಕ್ಷಣೆ ನಡೆಸುತ್ತಿದ್ದೇವೆ. ನೀವು ಚೀನದ ಆ್ಯಪ್, ಉತ್ಪನ್ನಗಳನ್ನು ಬಹಿಷ್ಕರಿಸಿ. ಇದರಿಂದ ನಮಗೆ ಸಹಾಯವಾಗುತ್ತದೆ ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.