ಚೀನಕ್ಕೆ ಲಡಾಖಿಗಳ ಸವಾಲ್;ಇದುವೇ ಸೇನೆಯ ‘ಕಣ್ಣುಕಿವಿ’ ಹಿಮಬೆಟ್ಟಗಳಲ್ಲಿ ಹೋರಾಡುವ ಸ್ಕೌಟ್ಸ್
Team Udayavani, Jul 9, 2020, 6:47 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಡಾಖ್: ಪೂರ್ವ ಲಡಾಖ್‌ನ ಹಿಮಾವೃತ ಬೆಟ್ಟಗಳಲ್ಲಿ ಸಮರ್ಥವಾಗಿ ಹೋರಾಡಲು ಸ್ಥಳೀಯರ ಅವಶ್ಯವನ್ನು ಸೇನೆ ಕಂಡುಕೊಂಡಿದೆ.
ಲಡಾಖ್‌ನ ದುರ್ಗಮ ನೆಲದಲ್ಲಿ ‘ಸೇನೆಯ ಕಣ್ಣು- ಕಿವಿ’ ಅಂತಲೇ ಖ್ಯಾತಿ ಪಡೆದ ‘ಲಡಾಖ್ ಸ್ಕೌಟ್ಸ್’ ರೆಜಿಮೆಂಟ್‌ನ ವೀರಯೋಧರು ಈಗ ಭರ್ಜರಿ ತಾಲೀಮು ಆರಂಭಿಸಿದ್ದಾರೆ.
ಹೌದು, ಲಡಾಖ್ ನೆಲದ ಗುಟ್ಟನ್ನು ಲಡಾಖಿಗಳೇ ಬಲ್ಲರು. ಎಲ್‌ಎಸಿಯಲ್ಲಿ ಚೀನ ಮತ್ತೆ ಎಲ್ಲೆ ಮೀರಿದರೆ ದಿಟ್ಟ ದಾಳಿ ನಡೆಸಲು ‘ಲಡಾಖ್ ಸ್ಕೌಟ್ಸ್’ ಸಂಪೂರ್ಣ ಸಜ್ಜಾಗಿದೆ. ಬಲು ಎತ್ತರದ, ಕಡಿದಾದ ಬೆಟ್ಟಗಳ ಮೇಲೆ ಅತ್ಯಂತ ಪ್ರಬಲ ದಾಳಿ ನಡೆಸುವ ಈ ಸ್ಥಳೀಯ ಯೋಧರ ತಂಡ, ಭಾರತೀಯ ಸೇನೆಗೆ ನೂರಾನೆ ಬಲ ಇದ್ದಂತೆ.
ಏನಿದು ಲಡಾಖ್ ಸ್ಕೌಟ್ಸ್?: ಜಗತ್ತಿನ ಅತ್ಯಂತ ಎತ್ತರದ ಯುದ್ಧನೆಲೆಯಲ್ಲಿ ತರಬೇತಿ ಪಡೆಯುತ್ತಿರುವ ಸೇನಾ ತುಕಡಿ ಎಂಬ ಖ್ಯಾತಿಯ ರೆಜಿಮೆಂಟ್. 1947-48ರಲ್ಲಿ ಪಾಕ್ ಸೇನೆ ಕಾರ್ಗಿಲ್ ಮೂಲಕ ಲಡಾಖ್‌ನ ಬೌದ್ಧ ಮಠಗಳ ಲೂಟಿಗೆ ಯತ್ನಿಸಿದ್ದಾಗ, ಲಡಾಖಿ ವೀರ ಯುವಕರು ಶತ್ರುಗಳನ್ನು ಸದೆಬಡಿದು ಕಳುಹಿಸಿದ್ದರು.
ಈ ಕೆಚ್ಚೆದೆಯ ವೀರ ಯುವಕರ ಪಡೆ ಅನಂತರ ಜಮ್ಮು- ಕಾಶ್ಮೀರದ ಬೆಟಾಲಿಯನ್‌ನಲ್ಲಿ ವಿಲೀನವಾಗಿತ್ತು. 1962ರಲ್ಲಿ ಚೀನ ವಿರುದ್ಧದ ಯುದ್ಧದಲ್ಲಿ ನೆಲದ ಗುಟ್ಟನ್ನು ಅರಿತು, ಎದುರಾಳಿ ಪಡೆಯ ಹಲವರನ್ನು ಮಣ್ಣುಮುಕ್ಕಿಸುವಲ್ಲಿ ಈ ತುಕಡಿ ಯಶಸ್ವಿಯಾಗಿತ್ತು. ಹಿಮದ ಬೆಟ್ಟಗಳಲ್ಲಿ ಸ್ಥಳೀಯ ಯುವ ಯೋಧರ ಪರಾಕ್ರಮ ಅರಿತ ಕೇಂದ್ರ ಸರ್ಕಾರ ಲಡಾಖ್ ಸ್ಕೌಟ್ಸ್ ರೆಜಿಮೆಂಟನ್ನು ಪ್ರತ್ಯೇಕ ರಚಿಸಿತ್ತು.
ಸೇನೆಯ ಕಣ್ಣು-ಕಿವಿ: ಚೀನ ಮತ್ತು ಪಾಕಿಸ್ಥಾನ ಇವೆರಡರ ಪಿತೂರಿಗೆ ತುತ್ತಾದ ನೆಲ ಲಡಾಖ್. ಶತ್ರುಗಳು ಇಲ್ಲಿ ನರಿಹೆಜ್ಜೆ ಇಟ್ಟರೆ ಅದರ ಮೊದಲ ಸಪ್ಪಳ ಗೊತ್ತಾಗುವುದೇ ಈ ಲಡಾಖ್ ಸ್ಕೌಟ್ಸ್‌ಗೆ. ಹೀಗಾಗಿ ಎಲ್‌ಎಸಿ, ಎಲ್‌ಒಸಿ ಭಾಗದಲ್ಲಿ ಇದನ್ನು “ಸೇನೆಯ ಕಣ್ಣು- ಕಿವಿ’ ಅಂತಲೇ ಕರೆಯುತ್ತಾರೆ.
ಈಗ ಲಡಾಖ್ ಸ್ಕೌಟ್ಸ್‌ನ ವೀರಯೋಧರನ್ನು ಎಲ್‌ಎಸಿಯ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಹಲವು ತಂಡಗಳಾಗಿ ನಿಯೋಜಿಸಲಾಗುತ್ತಿದೆ. ಇಲ್ಲಿ ಗಸ್ತು ತಿರುಗುವ ಇತರ ರೆಜಿಮೆಂಟ್‌ನ ಯೋಧರನ್ನು ಲಡಾಖ್ ಸ್ಕೌಟ್ಸ್ ಹಲವು ಬಾರಿ ಕಾಪಾಡಿದೆ. ಚೀನ ಇನ್ನೊಮ್ಮೆ ತಪ್ಪು ಹೆಜ್ಜೆ ಇಟ್ಟರೆ, “ಸ್ಕೌಟ್ಸ್’ ವಿರಾಟ್ ರೂಪವನ್ನೇ ತಾಳಲಿದೆ.
ಅನುಭವವೇ ಇವರ ಮೊದಲ ಅಸ್ತ್ರ
– 1962ರ ಚೀನ ದಾಳಿ ಸಮಯದಲ್ಲಿ ಗಾಲ್ವಾನ್, ಹಾಟ್‌ಸ್ಪ್ರಿಂಗ್ಸ್, ಪ್ಯಾಂಗಾಂಗ್, ಚುಶುಲ್ ಪ್ರದೇಶಗಳಲ್ಲಿ ದಿಟ್ಟ ಹೋರಾಟ ನಡೆಸಿದ ರೆಜಿಮೆಂಟ್.
– 1999ರ ಕಾರ್ಗಿಲ್ ಯುದ್ಧದಲ್ಲೂ ಧೈರ್ಯ, ಶೌರ್ಯ ಪ್ರದರ್ಶಿಸಿ ಯುದ್ಧ ಗೆಲ್ಲಿಸಿದ್ದ ಸ್ಥಳೀಯ ಯೋಧಪಡೆ.
ಭಲೇ ಸಾಮರ್ಥ್ಯ
– ಪ್ರಸ್ತುತ ಲಡಾಖ್ ಸ್ಕೌಟ್ಸ್‌ನಲ್ಲಿ 5 ಬೆಟಾಲಿಯನ್‌ಗಳಿವೆ.
– ಅತ್ಯಂತ ಕಠಿನ ಪ್ರದೇಶಕ್ಕೆ ಹೊಂದಿಕೊಳ್ಳುವ ಯೋಧರು ಇವರು.
– ಕಡಿಮೆ ಆಮ್ಲಜನಕ, ಅತೀ ಶೀತ ಪ್ರದೇಶಗಳಲ್ಲಿನ ಹೋರಾಟಕ್ಕೆ ಸೈ.
– ಲಡಾಖ್‌ನ ಅಷ್ಟೂ ಬೆಟ್ಟಗಳ ಗುಟ್ಟನ್ನು ಸ್ಕೌಟ್ಸ್ ಬಲ್ಲದು.
– ಗಸ್ತು ಪ್ರದೇಶಗಳ ಸೂಕ್ಷ್ಮತೆಗಳನ್ನು ಅರಿತವರು.
ಪಿಪಿ-15ರಲ್ಲೂ ಚೀನ ಸೈನಿಕರು ವಾಪಸ್
ಗಾಲ್ವಾನ್ ತೀರದ ಪಿಪಿ-14 ವಲಯದಲ್ಲಿ ಚೀನ ಹಿಂದೆ ಸರಿದಿದ್ದಾಗಿದೆ. ಈಗ ಪಿಪಿ-15 ಪಾಯಿಂಟ್‌ನಲ್ಲೂ ಪಿಎಲ್‌ಎ ಪಡೆಗಳು 2 ಕಿ.ಮೀ. ಹಿಂದಕ್ಕೆ ಸರಿಯುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸೇನೆಯ ಮೂಲಗಳು ಖಚಿತಪಡಿಸಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರ ಎಚ್ಚರಿಕೆಯ ಕರೆ ಬಳಿಕ ಚೀನ ಎಲ್‌ಎಸಿಯಲ್ಲಿ ಹಂತಹಂತವಾಗಿ ಸೇನೆ ನಿಷ್ಕ್ರಿಯ ಕೈಗೊಳ್ಳುತ್ತಿದೆ. “ಚೀನದ ಸೈನಿಕರ ಚಲನವಲನಗಳ ಬಗ್ಗೆ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಇತರೆ ವಿವಾದಿತ ಪ್ರದೇಶಗಳಲ್ಲೂ ಪಿಎಲ್‌ಎ ಪಡೆಗಳು ಸಂಪೂರ್ಣವಾಗಿ, ಪ್ರಾಮಾಣಿಕವಾಗಿ ಹಿಂದೆ ಸರಿದಿವೆಯಾ ಎಂಬುದನ್ನು ಸೇನೆ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. “ಲಡಾಖ್ ವಲಯದಲ್ಲಿ ಯಥಾಸ್ಥಿತಿ ಪುನಃಸ್ಥಾಪನೆ ಆಗುವವರೆಗೂ ಐಎಎಫ್ ಯುದ್ಧ ವಿಮಾನಗಳು ಹಗಲು- ರಾತ್ರಿ ಗಸ್ತು ತಿರುಗಲಿವೆ.
ಚೀನದ ‘ಫಾಕ್ಸ್ ಹಂಟ್’ಗೆ ಅಮೆರಿಕ ಪ್ರತಿತಂತ್ರ
ಅಮೆರಿಕದಲ್ಲಿ ಚೀನ ನಡೆಸುತ್ತಿರುವ “ಫಾಕ್ಸ್ ಹಂಟ್’ ಯೋಜನೆ, ವಾಷಿಂಗ್ಟನ್ ಪಾಲಿಗೆ ಅತ್ಯಂತ ದೊಡ್ಡ ಬೆದರಿಕೆ ಅಂತಲೇ ಯುಎಸ್ ಗುಪ್ತಚರ ಸಂಸ್ಥೆ ಎಫ್ಬಿಐ ಎಚ್ಚರಿಸಿದೆ.
ಏನಿದು ಫಾಕ್ಸ್ ಹಂಟ್?: ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 6 ವರ್ಷಗಳ ಹಿಂದೆ ಆರಂಭಿಸಿದ ಗೂಢಚರ್ಯೆ ಕಾರ್ಯಾಚರಣೆ. ವಿದೇಶಕ್ಕೆ ಪಲಾಯನ ಮಾಡಿದ ಚೀನೀ ಭ್ರಷ್ಟ ಅಧಿಕಾರಿಗಳು, ಉದ್ಯಮಿಗಳನ್ನು ಹಿಂಬಾಲಿಸಿ, ಅವರನ್ನು ಬಲವಂತವಾಗಿ ಚೀನಕ್ಕೆ ಕರೆದೊಯ್ಯಲಾಗುತ್ತದೆ.
ಹೆದರಬೇಡಿ: ಅಮೆರಿಕದಲ್ಲಿ ಚೀನ ಮೂಲದ ಜನರು, ಅಧಿಕಾರಿಗಳಿಗೆ ವಾಪಸಾಗುವಂತೆ ಕಿರುಕುಳ ನೀಡುತ್ತಿದ್ದರೆ ಎಫ್ಬಿಐ ಕಚೇರಿಯನ್ನು ನೇರವಾಗಿ ಸಂಪರ್ಕಿಸುವಂತೆ ಅಮೆರಿಕ ಗುಪ್ತಚರ ಸಂಸ್ಥೆ ನಿರ್ದೇಶಕ ಕ್ರಿಸ್ಟೋಫರ್ ರೇ ಮನವಿ ಮಾಡಿದ್ದಾರೆ. “ಚೀನದ ದೂತನೊಬ್ಬ ಇತ್ತೀಚೆಗೆ ಅಮೆರಿಕದಲ್ಲಿ ಒಂದು ಕುಟುಂಬವನ್ನು ಫಾಕ್ಸ್ ಹಂಟ್‌ಗಾಗಿ ಭೇಟಿಯಾಗಿದ್ದ. ಒಂದೋ ನೀವು ಚೀನಕ್ಕೆ ಮರಳಿ, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಅಮಾನುಷವಾಗಿ ಸೂಚಿಸಿದ್ದ’ ಎಂದು ರೇ ಹೇಳಿದ್ದಾರೆ.
ಚೀನ ಜತೆಗೆ ಭೂತಾನ್ 25ನೇ ಸುತ್ತಿನ ಮಾತುಕತೆ ಶೀಘ್ರ
ಚೀನದ ಜತೆಗಿನ ಗಡಿವಿವಾದ ಕುರಿತು ಶೀಘ್ರವೇ ಮಾತು ಕತೆ ನಡೆಯಲಿದೆ. ಈ ವೇಳೆ ಸಾಕ್ಟೆಂಗ್ ಜೈವಿಕ ಅಭಯಾರಣ್ಯವನ್ನು ತನ್ನದೆಂದು ಹಕ್ಕು ಸ್ಥಾಪಿಸಿರುವ ಚೀನದ ನಿಲುವನ್ನು ಪ್ರಶ್ನಿಸಲಾಗುವುದು ಎಂದು ಭಾರತದಲ್ಲಿನ ರಾಯಲ್ ಭೂತಾನ್ ರಾಯಭಾರ ಕಚೇರಿ ತಿಳಿಸಿದೆ.
ಚೀನ ಜತೆಗಿನ ಗಡಿವಿವಾದ ಸಂಬಂಧ ಭೂತಾನ್ ಈಗಾಗಲೇ ಸಚಿವ ಮಟ್ಟದ 24 ಸಭೆಗಳನ್ನು ನಡೆಸಿದೆ. ಕೋವಿಡ್ 19 ಆತಂಕದ ಹಿನ್ನೆಲೆಯಲ್ಲಿ 25ನೇ ಸಭೆ ಮುಂದಕ್ಕೆ ಹೋಗಿದೆ. ಹಿಂದಿನ ಯಾವ ಸಭೆಗಳಲ್ಲೂ ಚೀನ ಸಾಕ್ಟೆಂಗ್ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ, ಈಗ ವಿನಾಕಾರಣ ಹಕ್ಕು ಸ್ಥಾಪಿಸುವ ಹುನ್ನಾರ ಹೆಣೆದಿರುವುದು ಭೂತಾನನ್ನು ಕೆರಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.