Statehood ; ಲಡಾಖ್ ಗೆ ರಾಜ್ಯ ಸ್ಥಾನಮಾನಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ
ಮೈ ಕೊರೆವ ಚಳಿಯಲ್ಲೂ ಬೀದಿಗಿಳಿದ ಸಾವಿರಾರು ಜನರು...
Team Udayavani, Feb 4, 2024, 1:12 PM IST
ಲಡಾಖ್: ಕೇಂದ್ರಾಡಳಿತ ಪ್ರದೇಶವಾಗಿರುವ ಲೇಹ್, ಲಡಾಖ್ ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆ ನೀಡುವಂತೆ ಒತ್ತಾಯಿಸಿ ಸಾವಿರಾರು ಜನರು ಮೈ ಕೊರೆವ ಚಳಿಯಲ್ಲೂ ಭಾನುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಪ್ರತಿಭಟನೆಗಳನ್ನು ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ಜಂಟಿಯಾಗಿ ಆಯೋಜಿಸಿದ್ದು, ಸಾವಿರಾರು ಪುರುಷರು ಮತ್ತು ಮಹಿಳೆಯರು ಲೇಹ್ ಮುಖ್ಯ ನಗರದ ಮೂಲಕ ಮೆರವಣಿಗೆ ನಡೆಸಿದರು. ಲಡಾಖ್‌ನ ಎರಡು ಪ್ರದೇಶಗಳನ್ನು ಪ್ರತಿನಿಧಿಸುವ LAB ಮತ್ತು KDA, ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾದಾಗಿನಿಂದ ರಾಜ್ಯತ್ವ ಮತ್ತು ಆರನೇ ಶೆಡ್ಯೂಲ್ ಸ್ಥಾನಮಾನಕ್ಕಾಗಿ ಪ್ರತಿಪಾದಿಸುತ್ತಿವೆ. ಆಗಸ್ಟ್ 2021 ರಲ್ಲಿ, LAB ಮತ್ತು KDA ತಮ್ಮ ಬೇಡಿಕೆಗಳನ್ನು ವರ್ಧಿಸಲು ಹೋರಾಟಕ್ಕೆ ನಿರ್ಧರಿಸಿದ್ದವು.
ಪ್ರತಿಭಟನಾ ಮೆರವಣಿಗೆಯಲ್ಲಿ ಲಡಾಖ್‌ನ ರಾಜ್ಯತ್ವ, ಸಂವಿಧಾನದ ಆರನೇ ಶೆಡ್ಯೂಲ್‌ನ ಅನುಷ್ಠಾನ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಸಂಸದೀಯ ಸ್ಥಾನಗಳನ್ನು ಸ್ಥಾಪಿಸುವ ಘೋಷಣೆಗಳು ಮೊಳಗಿದವು.
ಆರ್ಟಿಕಲ್ 370 ಮತ್ತು 35A ರದ್ದತಿಯ ನಂತರ ಲಡಾಖ್ ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾಗಿತ್ತು. 2019 ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು.
#WATCH | Leh, Ladakh: Thousands brave the freezing cold as they march demanding statehood for Ladakh and protections under the 6th Schedule of the Constitution for the Union Territory. (03.02) pic.twitter.com/gwsiGZBxXc
— ANI (@ANI) February 4, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.