ಮಹಿಳಾ ಹೆಡ್ ಕಾನ್ಸ್ಟೆಬಲ್ ಮೇಲೆ ಇಬ್ಬರಿಂದ ರೇಪ್, ಬ್ಲಾಕ್ ಮೇಲ್
Team Udayavani, Sep 10, 2018, 12:03 PM IST
ಚಂಡೀಗಢ : ”ಹರಿಯಾಣ ಪೊಲೀಸ್ ಇಲಾಖೆಯಲ್ಲಿನ ಓರ್ವ ಹೆಡ್ ಕಾನ್ಸ್ಟೆಬಲ್ ಮತ್ತು ಆತನ ಗೆಳೆಯ ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ” ಎಂದು ಮಹಿಳಾ ಹೆಡ್ ಕಾನ್ಸ್ಟೆಬಲ್ ಒಬ್ಬರು ದೂರು ದಾಖಲಿಸಿದ್ದಾರೆ.
ಪಲವಾಲ್ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾದುದನ್ನು ಅನುಸರಿಸಿ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪಲವಾಲ್ ಎಸ್ಪಿ ವಸೀಂ ಅಕ್ರಂ ತಿಳಿಸಿದ್ದಾರೆ.
ಮಾಧ್ಯಮದ ಕೆಲವೊಂದು ವಿಭಾಗಗಳಲ್ಲಿ ವರದಿಯಾಗಿರುವಂತೆ ಮಹಿಳಾ ಕಾನ್ಸ್ಟೆಬಲ್ ಮೇಲಿನ ಅತ್ಯಾಚಾರ ಠಾಣೆಯ ಒಳಗೆ ನಡೆದಿಲ್ಲ ಎಂದವರು ಹೇಳಿದ್ದಾರೆ.
ಮಹಿಳೆ ದಾಖಲಿಸಿರುವ ರೇಪ್ ಮತ್ತು ಬ್ಲಾಕ್ ಮೇಲ್ ದೂರಿನಲ್ಲಿ ಈ ರೀತಿಯ ವಿವರಿಸಿದ್ದಾರೆ:
“2014ರಲ್ಲಿ ನಾನು ಪಲವಾಲ್ನ ಅಲವಾಲಪುರದಲ್ಲಿ ಜೋಗೀಂದರ್ ಅಲಿಯಾಸ್ ಮಿಂಟು ಎಂಬ ವ್ಯಕ್ತಿಯ ಸಂಪರ್ಕಕ್ಕೆ ಬಂದೆ; ಆತನನ್ನು ನಾನು ಮೊದಲ ಬಾರಿಗೆ ಮಹೇಂದ್ರಗಢದಲ್ಲಿ ಭೇಟಿಯಾಗಿದ್ದೆ; ನಾನು ಫರೀದಾಬಾದ್, ಜಿಂದ್ ಮತ್ತು ಪಲವಾಲ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಸಂದರ್ಭದಲ್ಲಿ ಜೋಗೀಂದರ್ ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ. 2017ರ ಜೂನ್ನಲ್ಲಿ ಜೋಗೀಂದರ್ ನನ್ನನ್ನು ಆತನ ಸಹೋದರನಿಗೆ ಪರಿಯಿಸಿದ. ಈತ ಫರೀದಾಬಾದ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದ. ಆತನೂ ನನ್ನ ಮೇಲೆ ಅತ್ಯಾಚಾರ ಎಸಗಿದ…”
“…ಅದಾಗಿ ಈಗ ಜೋಗೀಂದರ್ ಹಣಕ್ಕಾಗಿ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ನನ್ನ ಆಕ್ಷೇಪಾರ್ಹ ಫೋಟೋಗಳನ್ನು ಆತ ಹೊಂದಿರುವ ಕಾರಣಕ್ಕೆ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಾ ಹಣ ಮತ್ತು ಸೆಕ್ಸ್ ಗೆ ಒತ್ತಾಯಪಡಿಸುತ್ತಿದ್ದಾನೆ. ಆತನ ಬೇಡಿಕೆ ತೀರಿಸದಿದ್ದರೆ ಆತ ನನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮಕ್ಕೆ ಹಾಕುತ್ತೇನೆ” ಎಂಬ ಬೆದರಿಕೆ ಒಡ್ಡಿದ್ದಾನೆ’.
ಪೊಲೀಸರು ನಡೆಸಿರುವ ತನಿಖೆಯಲ್ಲಿ ಜೋಗೀಂದರ್ ವಿವಾಹಿತನಾಗಿದ್ದು ಆತನಿಗೆ ಇಬ್ಬರು ಮಕ್ಕಳಿದ್ದಾರೆ. ದೂರು ನೀಡಿರುವ ಮಹಿಳಾ ಹೆಡ್ ಕಾನ್ಸ್ಟೆಬಲ್ ಕೂಡ ವಿವಾಹಿತಳೇ ಆಗಿದ್ದಾಳೆ ಎಂದು ಪಲವಾಲ್ ಎಸ್ಪಿ ವಸೀಂ ಅಕ್ರಮ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.