Land For Jobs Scam: ಲಾಲು ಪ್ರಸಾದ್, ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿಗೆ ಜಾಮೀನು
Team Udayavani, Oct 4, 2023, 11:49 AM IST
ಬಿಹಾರ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ ಬಿಹಾರದ ಪ್ರಸ್ತುತ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
2004ರಿಂದ 2009ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಲಾಲು ಪ್ರಸಾದ್ ಅವರ ಕುಟುಂಬಕ್ಕೆ ಭೂಮಿ ಹಸ್ತಾಂತರಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ರೈಲ್ವೇಯಲ್ಲಿ ನೇಮಕಾತಿ ಮಡಿದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿದ್ದರು.
ಜಾಮೀನು ಆದೇಶದ ಕುರಿತು ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, “ಇದು ಕಾನೂನು ವಿಷಯ, ನಾವು ನ್ಯಾಯಾಲಯದ ಮುಂದೆ (ಇಂದು) ಹಾಜರಾಗಿದ್ದೇವೆ. ನಮಗೆ ನ್ಯಾಯಾಲಯವು ಜಾಮೀನು ನೀಡಿದೆ” ಎಂದು ಹೇಳಿದರು.
ಜಾಮೀನು ಆದೇಶದ ನಂತರ, ಆರ್‌ಜೆಡಿ ಬೆಂಬಲಿಗರು ತಮ್ಮ ಪಕ್ಷದ ಮುಖ್ಯಸ್ಥರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಾ ನ್ಯಾಯಾಲಯದ ಹೊರಗೆ ಸಿಹಿ ಹಂಚಿದರು.
ಲಾಲು ಯಾದವ್ ಮತ್ತು ಇತರರು ತಮ್ಮ ವಿರುದ್ಧ ನೀಡಲಾದ ಸಮನ್ಸ್‌ನ ಅನ್ವಯ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಕೇಂದ್ರೀಯ ತನಿಖಾ ದಳ (ಸಿಬಿಐ) ಜುಲೈ 3 ರಂದು ಲಾಲು ಮತ್ತು ಇತರರ ವಿರುದ್ಧ ಹೊಸ ಚಾರ್ಜ್ ಶೀಟ್ ಅನ್ನು ಸಲ್ಲಿಸಿತ್ತು ಇದರಲ್ಲಿ ಲಾಲು ಪ್ರಸಾದ್ ಅಧಿಕಾರದಲ್ಲಿದ್ದ ವೇಳೆ ರೈಲ್ವೆಯಲ್ಲಿ ಅಭ್ಯರ್ಥಿಗಳ ಅಕ್ರಮ ನೇಮಕಾತಿಗಳನ್ನು ಮಾಡಲಾಗಿದೆ, ರೈಲ್ವೆಯ ನಿಯಮಗಳು, ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ” ಎಂದು ಅದು ಉಲ್ಲೇಖಿಸಿತ್ತು. ಈ ವೇಳೆ ರೈಲ್ವೆಗೆ ಆಯ್ಕೆಯಾದ ಅಭ್ಯರ್ಥಿಗಳು ಲಾಲು ಪ್ರಸಾದ್ ಯಾದವ್ ಅವರಿಗೆ ಮಾರಾಟ ಮಾಡಿರುವುದಾಗಿ ಉಲ್ಲೇಖಿಸಿದೆ.
ಇದನ್ನೂ ಓದಿ: Tragic: ದೇವರ ದರ್ಶನದಿಂದ ವಾಪಾಸಾಗುವ ವೇಳೆ ದುರಂತ: ಕಾರು– ಟ್ರಕ್ ಅಪಘಾತದಲ್ಲಿ 8ಮಂದಿ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.