ಲಾಲು ಝಡ್‌ ಪ್ಲಸ್‌ ಭದ್ರತೆ ವಾಪಸ್‌, ತೇಜ್‌ ಪ್ರತಾಪ್‌ ಖಂಡನೆ

Team Udayavani, Nov 27, 2017, 3:29 PM IST

Lalu-Zplus-700.jpg

ಪಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೆ ನೀಡಲಾಗಿದ್ದ  ಎನ್‌ಎಸ್‌ಜಿ ಕಮಾಂಡೋಗಳ “ಝಡ್‌ ಪ್ಲಸ್‌’ ಕೆಟಗರಿಯ ಭದ್ರತೆಯನ್ನು  ಸರಕಾರ ಹಿಂದೆಗೆದುಕೊಂಡಿದೆ. ಲಾಲುಗೆ ಈಗಿನ್ನು ರಾಜ್ಯ ಸರಕಾರ ನೀಡುವ ಝಡ್‌ ಕೆಟಗರಿಯ ಭದ್ರತೆ ಮಾತ್ರವೇ ಸಿಗಲಿದೆ.

ಲಾಲು ಪ್ರಸಾದ್‌ ಯಾದವ್‌ಗೆ ನೀಡಲಾಗಿದ್ದ ಎಲ್ಲ ಎನ್‌ಎಸ್‌ಜಿ ಕಮಾಂಡೋಗಳ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಗಿದ್ದು ಈಗಿನ್ನು ಸಿಆರ್‌ಪಿಎಫ್ ದಳ ಲಾಲು ಭದ್ರತೆಯ ಜವಾಬ್ದಾರಿ ನಿಭಾಯಿಸಲಿದೆ. ಇದು ಝಡ್‌ ಕೆಟಗರಿಯ ಭದ್ರತೆಯಾಗಲಿದ್ದು ಅದು ರಾಜ್ಯ ಪೊಲೀಸ್‌ ದಳದ ಹೊಣೆಗಾರಿಕೆಯಾಗಿರುತ್ತದೆ ಎಂದು ವರದಿಗಳು ತಿಳಿಸಿವೆ. 

ಈ ಬೆಳವಣಿಗೆಗೆ ಲಾಲು ಅವರ ಪುತ್ರ, ಮಾಜಿ ಬಿಹಾರ ಸಚಿವ, ತೇಜ್‌ ಪ್ರತಾಪ್‌ ಅವರು ಕೋಪಾವಿಷ್ಟರಾಗಿ ಪ್ರತಿಕ್ರಿಯಿಸಿದ್ದಾರೆ.

“ನಮ್ಮ ತಂದೆಗೆ ದೇವರ ದೆಯೆಯಿಂದ ಯಾವುದೇ ಅಗದಿರಲಿ; ಒಂದೊಮ್ಮೆ ಆಯಿತೆಂದಾದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್‌ ಕುಮಾರ್‌ ಅವರೇ ಕಾರಣರಾಗುತ್ತಾರೆ’ ಎಂದು ತೇಜ್‌ ಪ್ರತಾಪ್‌ ಗುಡುಗಿದ್ದಾರೆ.

“ಇದು ನಮ್ಮ ತಂದೆಯ ವಿರುದ್ಧ (ಲಾಲು ಯಾದವ್‌) ನಡೆಸಲಾಗಿರುವ ಕೊಲೆ ಪಿತೂರಿ’ ಎಂದು ಹೇಳುವ ಮೂಲಕ ತೇಜ್‌ ಪ್ರತಾಪ್‌, ಪ್ರಧಾನಿ ಮೋದಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಇದೇ ವೇಳೆ ಕೇಂದ್ರ ಗೃಹ ಸಚಿವಾಲಯ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್‌ರಾಮ್‌ ಮಾಂಜಿ ಅವರಿಗೆ ನೀಡಲಾಗಿದ್ದ ಝಡ್‌ ಪ್ಲಸ್‌ ಕೆಟಗರಿಯ ಭದ್ರತೆಯನ್ನು ಕೂಡ ಹಿಂದೆಗೆದುಕೊಂಡಿದೆ. ಮಾಂಜಿ ಅವರಿಗೆ ಝಡ್‌ ಪ್ಲಸ್‌ ಭದ್ರತೆ ಇರುತ್ತಾ ಸಿಆರ್‌ಪಿಎಫ್ ಭದ್ರತೆಯೂ ಜಾರಿಯಲ್ಲಿತ್ತು ! 

ಲಾಲು ಪುತ್ರ ತೇಜ್‌ ಪ್ರತಾಪ್‌ ನಿನ್ನೆ ಭಾನುವಾರ “ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರ ಪುತ್ರನ ವಿವಾಹ ಕಾರ್ಯಕ್ರಮವನ್ನು ಹಾಳುಗೆಡಹುವ’ ಬೆದರಿಕೆಯನ್ನು ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ತೇಜ್‌ ಪ್ರತಾಪ್‌, “ನಾನೇನೂ ಕ್ರಿಮಿನಲ್‌ ಅಥವಾ ಭಯೋತ್ಪಾದಕನಲ್ಲ’ ಎಂದು ಹೇಳಿ “ಸುಶೀಲ್‌ ಕುಮಾರ್‌ ಮೋದಿ ಅವರು ನಿರ್ಭಯರಾಗಿ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ನಡೆಸಬಹುದಾಗಿದೆ’ ಎಂದು ಹೇಳಿದ್ದರು. 

ತೇಜ್‌ ಪ್ರತಾಪ್‌ ಯಾದವ್‌ ಹಾಕಿದ್ದರು ಎನ್ನಲಾದ ಬೆದರಿಕೆಯ ಹಿನ್ನೆಲೆಯಲ್ಲಿ “ಭದ್ರತೆಯ ಕಾರಣಗಳಿಗೆ ಡಿ.3ರಂದು ರಾಜೇಂದ್ರ ನಗರದಲ್ಲಿನ ಶಾಖಾ ಮೈದಾನದಲ್ಲಿ ನಡೆಯಲು ತೀರ್ಮಾನಿಸಲಾಗಿದ್ದ  ಪುತ್ರನ ಮದುವೆಯನ್ನು ಇದೀಗ ನಾವು ಪಟ್ನಾ ವಿಮಾನ ನಿಲ್ದಾಣ ಸಮೀಪದ ವೆಟೆರಿನರಿ ಕಾಲೇಜ್‌ ಗ್ರೌಂಡ್‌ ತಾಣಕ್ಕೆ ಬದಲಾಯಿಸಿದ್ದೇವೆ’ ಎಂದು ಹೇಳಿದ್ದರು.  

ಟಾಪ್ ನ್ಯೂಸ್

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಕುಟುಂಬ ಸದಸ್ಯರಿಗೆ ಆಘಾತ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

3

Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.