ಲಷ್ಕರ್ ಉಗ್ರರ ಜೊತೆ ಕೈಜೋಡಿಸಿದ್ದ ಯುಪಿಯ ಶರ್ಮಾ ಪೊಲೀಸ್ ಬಲೆಗೆ!
Team Udayavani, Jul 10, 2017, 3:40 PM IST
ಜಮ್ಮು- ಕಾಶ್ಮೀರ: ಕಣಿವೆ ಪ್ರದೇಶದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೊಯ್ಬಾಕ್ಕೆ ನೆರವು ನೀಡುತ್ತಿದ್ದ ಉತ್ತರಪ್ರದೇಶ ಮುಜಾಫರ್ ನಗರದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಜಮ್ಮು – ಕಾಶ್ಮೀರ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಉತ್ತರಪ್ರದೇಶದ ಸಂದೀಪ್ ಕುಮಾರ್ ಶರ್ಮಾ 2012ರಲ್ಲಿ ಕೆಲಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ. ತದನಂತರ ಬದಲಿ ಕೆಲಸಕ್ಕಾಗಿ ಪಂಜಾಬ್ ಪ್ರಾಂತ್ಯಕ್ಕೂ ಪ್ರಯಾಣ ಬೆಳೆಸಿದ್ದನಂತೆ. ಆದರೆ ಆ ಬಳಿಕ ಎಟಿಎಂ ದರೋಡೆ ಮಾಡುವ ಸಂಚಿನೊಂದಿಗೆ ಜನವರಿಯಲ್ಲಿ ಕಾಶ್ಮೀರಕ್ಕೆ ವಾಪಸ್ ಆಗಿದ್ದ ಎಂದು ವರದಿ ಹೇಳಿದೆ.
ಪಂಜಾಬ್ ಪ್ರಾಂತ್ಯದಲ್ಲಿ ಶರ್ಮಾಗೆ ಸ್ಥಳೀಯ ಮಾಹಿತಿದಾರರ ಮೂಲಕ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ನಂಟು ಬೆಳೆದಿತ್ತು. ಶರ್ಮಾ ಲಷ್ಕರ್ ನ ನಟೋರಿಯಸ್ ಉಗ್ರ ಬಶೀರ್ ಲಷ್ಕರಿಯ ಆಪ್ತನಾಗಿದ್ದ ಎಂದು ವರದಿ ವಿವರಿಸಿದೆ.
ಶರ್ಮಾ ಲಷ್ಕರ್ ಎ ತೊಯ್ಬಾ ಸಂಘಟನೆ ಜೊತೆ ಕೈಜೋಡಿ ಬ್ಯಾಂಕ್ ದರೋಡೆ, ಭಾರತೀಯ ಯೋಧರ ಮೇಲೆ, ಜಮ್ಮು ಕಾಶ್ಮೀರ ಪೊಲೀಸರ ಮೇಲೆ ದಾಳಿ ನಡೆಸುವ ಸಂಚಿನಲ್ಲಿ ನೆರವು ನೀಡುತ್ತಿದ್ದ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು
Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.