ಕುಟುಂಬದ ಭೇಟಿಗೆ ಕೊನೆಯ ಅವಕಾಶ : ನಿರ್ಭಯಾ ಹಂತಕರಿಗೆ ಅಧಿಕಾರಿಗಳಿಂದ ಸೂಚನೆ
Team Udayavani, Feb 23, 2020, 6:51 AM IST
ಹೊಸದಿಲ್ಲಿ: ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಜಾರಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅವರಿಗೆ ತಮ್ಮ ಸಂಬಂಧಿಗಳನ್ನು ಕೊನೆಯ ಬಾರಿ ನೋಡುವ ಅವಕಾಶ ನೀಡಲಾಗಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಡೆತ್ ವಾರಂಟ್‌ನಂತೆ, ಮಾ. 3ರಂದು ಬೆಳಗಿನ ಜಾವ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿಯಾಗುವ ನಿರೀಕ್ಷೆಯಿದೆ.
ಪ್ರಕರಣದ ಅಪರಾಧಿಗಳಾದ ಮುಕೇಶ್ ಹಾಗೂ ಪವನ್ ಅವರು ಫೆ. 1ರಂದು ಜಾರಿ ಗೊಂಡ ಡೆತ್ ವಾರಂಟ್‌ಗೂ ಮುನ್ನವೇ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಿದ್ದರು. ಹಾಗಾಗಿ, ಇನ್ನಿಬ್ಬರಾದ ಅಕ್ಷಯ್ ಹಾಗೂ ವಿನಯ್ ಕುಮಾರ್ ಅವರಿಗೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಹಾರ್ ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಮುಖಾಮುಖೀ ಭೇಟಿ: ಸಾಮಾನ್ಯವಾಗಿ, ಜೈಲಿನಲ್ಲಿರುವ ಅಪರಾಧಿಗಳಿಗೆ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಅವಕಾಶ ವಿರುತ್ತದೆ. ಆದರೆ ಪುಟ್ಟ ಕಿಟಕಿಯ ಮೂಲಕ ಮಾತ್ರ ಅವರೊಂದಿಗೆ ಮಾತ ನಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಈ ಪ್ರಕರಣದಲ್ಲಿ ಅಪರಾಧಿಗಳು ಗಲ್ಲಿಗೇರಲಿ ರುವ ಕಾರಣ ಕೊನೆಯ ಬಾರಿಗೆ ಕುಟುಂಬ ಸದಸ್ಯರನ್ನು ಭೇಟಿಯಾಗುವಾಗ ಮುಖಾ ಮುಖೀಯಾಗಿ ಮಾತನಾಡಲು ಅವಕಾಶ ನೀಡಲಾಗುತ್ತದೆ.
ಫಾಸಿದಾರನ ರವಾನೆಗೆ ಮನವಿ: ಉತ್ತರ ಪ್ರದೇಶದ ಬಂದೀಖಾನೆ ಇಲಾಖೆಗೆ ಪತ್ರ ಬರೆದಿರುವ ತಿಹಾರ್ ಜೈಲಧಿಕಾರಿಗಳು, ಗಲ್ಲು ಶಿಕ್ಷೆ ಜಾರಿಗೂ ಎರಡು ದಿನ ಮುಂಚಿತವಾಗಿ ವಧಾಕಾರನನ್ನು ತಿಹಾರ್ ಜೈಲಿಗೆ ರವಾನಿಸುವಂತೆ ಕೋರಿದ್ದಾರೆ.
ವಿನಯ್‌ನದ್ದು ಸುಳ್ಳಿನ ಕಂತೆ
ಅಪರಾಧಿ ವಿನಯ್ ಶರ್ಮಾ, ಸ್ಕ್ರಿಝೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದು ಆತನಿಗೆ ಹೆಚ್ಚಿನ ಮಟ್ಟದ ಚಿಕಿತ್ಸೆ ನೀಡಬೇಕು. ಸದ್ಯಕ್ಕೆ ಆತನನ್ನು ಗಲ್ಲಿಗೇರಿಸಬಾರದು ಎಂದು ಆತನ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಳ್ಳಿಹಾಕಿದೆ. ವಕೀಲರ ಮನವಿಗೆ ವಿವರಣೆ ಸಲ್ಲಿಸಿದ್ದ ತಿಹಾರ್ ಜೈಲಾಧಿಕಾರಿಗಳು ವಿನಯ್ ಆರೋಗ್ಯವಾಗಿದ್ದಾನೆಂದು ಹೇಳಿದ್ದರಲ್ಲದೆ, ಅದಕ್ಕೆ ಪೂರಕವಾದ ವೈದ್ಯಕೀಯ ದಾಖಲೆಗಳನ್ನೂ ಸಲ್ಲಿಸಿದ್ದರು. ಅಲ್ಲದೆ ಆತನಿಗೆ ಯಾವ ಮಾನಸಿಕ ಕಾಯಿಲೆಯೂ ಇಲ್ಲ. ಅವನು ಹೇಳುತ್ತಿರುವುದೆಲ್ಲ ಸುಳ್ಳಿನ ಕಂತೆ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.