ಗಣರಾಜ್ಯೋತ್ಸವ: ಪಥಸಂಚಲನದಲ್ಲಿ ನೌಕಾ ವಿಚಕ್ಷಣಾ ವಿಮಾನ ಭಾಗಿ
42 ವರ್ಷಗಳಲ್ಲಿ ಮೊದಲ ಮತ್ತು ಕೊನೆಯ ಪ್ರದರ್ಶನ
Team Udayavani, Jan 19, 2023, 7:30 AM IST
ನವದೆಹಲಿ: ಪ್ರಸಕ್ತ ವರ್ಷದ ಗಣರಾಜ್ಯ ದಿನವಾದ ಜ.26ರಂದು ಮೊದಲ ಬಾರಿಗೆ ಭಾರತೀಯ ನೌಕಾಪಡೆ ಹೊಂದಿರುವ ಐಎಲ್-38 ಯುದ್ಧ ವಿಮಾನಗಳು ಪಥಸಂಚಲನದಲ್ಲಿ ಭಾಗವಹಿಸಲಿವೆ. ಕಡಲು ರಕ್ಷಣೆ ಕ್ಷೇತ್ರದಲ್ಲಿ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ವಿಮಾನಗಳನ್ನು ಮೊದಲು ಮತ್ತು ಕೊನೇ ಬಾರಿಗೆ ಪಥಸಂಚಲನದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಐಎಎಫ್ ನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟು 50 ಯುದ್ಧ ವಿಮಾನಗಳು ಜ.26ರಂದು ಕರ್ತವ್ಯಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಭೂಸೇನೆಯ ನಾಲ್ಕು ವಿಮಾನಗಳೂ ಇದರಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲು:
ರಾಜಪಥವನ್ನು ಕರ್ತವ್ಯಪಥ ಎಂದು ನಾಮಕರಣ ಮಾಡಿದ ಬಳಿಕ ಮೊದಲ ಬಾರಿಗೆ ಅಲ್ಲಿ ಗಣರಾಜ್ಯ ದಿನದ ಕಾರ್ಯಕ್ರಮ ಮತ್ತು ಪಥ ಸಂಚಲನ ನಡೆಯಲಿದೆ.
ಹಾರಾಟ ನಿಷೇಧ:
ಗಣರಾಜ್ಯ ದಿನ ಪ್ರಯುಕ್ತ ಜ.19ರಿಂದ 24 ಮತ್ತು 26ರಿಂದ 29ರವರೆಗೆ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ವ್ಯಾಪ್ತಿಯಲ್ಲಿ ವಿಮಾನಗಳ ಹಾರಾಟ ನಿಷೇಧ ಆದೇಶ ಹೊರಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರ ವರೆಗೆ ಈ ನಿಯಮ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.