![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 29, 2022, 7:20 AM IST
ಶ್ರೀನಗರ: ಅನಾಥವಾದ ಆ್ಯಪಲ್ ತೋಟಗಳು. ಮರದಲ್ಲಿರುವ ಸೇಬುಗಳನ್ನು ಸಂಗ್ರಹಿಸುವವರು ಯಾರು ಇಲ್ಲ. ಬಾಕ್ಸ್‌ಗಳಲ್ಲಿ ತುಂಬಿಟ್ಟ ಸೇಬುಗಳನ್ನು ಮಂಡಿಗೆ ಹಾಕುವವರಿಲ್ಲ. ಮನೆಗಳು ಖಾಲಿ ಖಾಲಿ…
ಇದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೌಧರಿಗುಂದ್ ಗ್ರಾಮದ ಕಾಶ್ಮೀರಿ ಪಂಡಿತರ ನಿವಾಸಿಗಳು, ತೋಟಗಳ ವ್ಯಥೆ!
ಚೌಧರಿಗುಂದ್ ಗ್ರಾಮದಲ್ಲಿ ಉಳಿದಿದ್ದ ಏಕಮಾತ್ರ ಕಾಶ್ಮೀರಿ ಪಂಡಿತೆ ಡಾಲಿ ಕುಮಾರಿ ಕೂಡ ಗ್ರಾಮ ತೊರೆದು ಜಮ್ಮುವಿಗೆ ವಲಸೆ ಹೋಗುವ ಮೂಲಕ ಇಡೀ ಗ್ರಾಮದಲ್ಲಿ ಕಾಶ್ಮೀರಿ ಪಂಡಿತರ ಸಂಖ್ಯೆ ಶೂನ್ಯವಾಗಿದೆ!
ಗ್ರಾಮದಲ್ಲಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸುತ್ತಿರುವ ಕೊಲೆಗಳು ಮತ್ತು ಹಿಂಸಾಚಾರಕ್ಕೆ ಹೆದರಿ ಇತ್ತೀಚೆಗೆ ಏಳು ಕಾಶ್ಮೀರಿ ಪಂಡಿತರ ಕುಟುಂಬಗಳು ಗ್ರಾಮವನ್ನು ತೊರೆದಿದ್ದವು. ಇದೀಗ ಡಾಲಿ ಕುಮಾರಿ ಸರದಿ.
“ಇಲ್ಲಿ ಭಯದ ವಾತಾವರಣವಿದೆ. ವಲಸೆ ಹೋಗುವುದು ಬಿಟ್ಟು ನನಗೆ ಯಾವುದೇ ಮಾರ್ಗ ಉಳಿದಿಲ್ಲ. ನಮ್ಮ ಚೌಧರಿಗುಂದ್ ಗ್ರಾಮದಲ್ಲಿ ಅ.15ರಂದು ಕಾಶ್ಮೀರಿ ಪಂಡಿತ್ ಪುರನ್ ಕೃಷನ್ ಭಟ್ ಅವರನ್ನು ಅವರ ಮನೆಯ ಹೊರಗಡೆಯೇ ಹತ್ಯೆ ಮಾಡಲಾಯಿತು. 2 ತಿಂಗಳ ಹಿಂದೆ ಚೋಟಿಗಾಮ್ ಗ್ರಾಮದಲ್ಲಿ ಉಗ್ರರು ಕಾಶ್ಮೀರಿ ಪಂಡಿತ್ ಒಬ್ಬರನ್ನು ಹತ್ಯೆ ಮಾಡಿದರು. 7 ಕುಟುಂಬಗಳು ಕಾಶ್ಮೀರ ತೊರೆದಾಗಲೂ ಇಲ್ಲೇ ಇರಬೇಕೆಂದು ಧೈರ್ಯ ಮಾಡಿದೆ. ಆದರೆ ಸದ್ಯ ಪರಿಸ್ಥಿತಿ ವಾಸ್ತವ್ಯಕ್ಕೆ ಅನುಕೂಲಕರವಾಗಿಲ್ಲ. ಎಲ್ಲ ಸರಿ ಹೋದ ನಂತರ ವಾಪಸು ಗ್ರಾಮಕ್ಕೆ ಮರಳುತ್ತೇನೆ. ಇದು ನನ್ನ ಮನೆ,’ ಎಂದು ಅವರು ಕಣ್ಣೀರು ಹಾಕಿದರು.
ಇದೇ ವೇಳೆ, ಡಾಲಿ ಕುಮಾರಿ ಅವರ ಮನೆಗೆ ಬೇಲಿ ಹಾಕಲು ನೆರವಾದ ಸ್ಥಳೀಯ ವ್ಯಕ್ತಿ ಗುಲಾಂ ಹಸನ್ ಮಾತನಾಡಿ, “ಇತ್ತೀಚೆಗೆ ನಡೆಯುತ್ತಿರುವ ಹತ್ಯೆಗಳಿಂದ ಪಂಡಿತರಿಗೆ ಅಸುರಕ್ಷತೆಯ ಭಾವನೆ ಮೂಡಿದೆ. ಹೀಗಾಗಿ ಅವರೆಲ್ಲರೂ ವಲಸೆ ಹೋಗುತ್ತಿದ್ದಾರೆ. ಭಯೋತ್ಪಾದನೆಯು ಉತ್ತುಂಗದಲ್ಲಿದ್ದಾಗಲೂ ಈ ಪಂಡಿತರು ಎಲ್ಲೂ ಹೋಗದೆ ಇಲ್ಲೇ ಉಳಿದಿದ್ದರು. ಆದರೆ, ಈಗ ಪರಿಸ್ಥಿತಿ ಚಿಂತಾಜನಕವಾಗಿದೆ’ ಎಂದಿದ್ದಾರೆ.
ಕಳೆದ 12 ದಿನಗಳಲ್ಲಿ ಕಾಶ್ಮೀರ ತೊರೆದ ಪಂಡಿತರ ಕುಟುಂಬಗಳು- 12
ವಲಸೆ ಹೋದ ಒಟ್ಟು ಕಾಶ್ಮೀರಿ ಪಂಡಿತರು- 40
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.