ಇಂದು 2020ರ ಕೊನೆಯ ಚಂದ್ರಗ್ರಹಣ
ನಾಲ್ಕನೇ ಛಾಯಾ ಗ್ರಹಣ ಮಧ್ಯಾಹ್ನ 1.04ಕ್ಕೆ ಆರಂಭ
Team Udayavani, Nov 30, 2020, 7:12 AM IST
ಹೊಸದಿಲ್ಲಿ: ಸೋಮವಾರ 2020ರ ಕೊನೆಯ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಪ್ರಸಕ್ತ ವರ್ಷ ಗೋಚರಿಸಿದ ನಾಲ್ಕನೇ ಛಾಯಾ ಚಂದ್ರ ಗ್ರಹಣ ಇದಾಗಿದ್ದು, ಮಧ್ಯಾಹ್ನ 1.04 ನಿಮಿಷಕ್ಕೆ ಆರಂಭವಾಗಿ, ಸಂಜೆ 5.22ಕ್ಕೆ ಗ್ರಹಣ ಕೊನೆಗೊ ಳ್ಳಲಿದೆ. 3.13ಕ್ಕೆ ಗ್ರಹಣವು ಉತ್ತುಂಗ ಸ್ಥಿತಿಯಲ್ಲಿ ರಲಿದೆ. ಈ ಹಿಂದಿನ ಚಂದ್ರಗ್ರಹಣಕ್ಕೆ ಹೋಲಿಸಿದರೆ, ಸೋಮವಾರದ ಗ್ರಹಣವು ದೀರ್ಘಕಾಲ ಇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭಾರತೀಯ ಖಗೋಳಾಸಕ್ತರಿಗೆ ಬೇಸರದ ಸಂಗತಿಯೆಂದರೆ, ದೇಶದಲ್ಲಿ ಕಳೆದ ಗ್ರಹಣದಂತೆ ಸ್ಪಷ್ಟವಾಗಿ ಸೋಮವಾರದ ಗ್ರಹಣ ಗೋಚರಿಸುವುದಿಲ್ಲ. ಉತ್ತರ ಹಾಗೂ ಪೂರ್ವ ಭಾಗದ ಕೆಲವೆಡೆ ಗೋಚರಿಸಬಹುದಾದರೂ, ಬಹುತೇಕ ಪ್ರದೇಶಗಳಲ್ಲಿ ಗ್ರಹಣ ಕಾಣಿಸುವುದಿಲ್ಲ. ಈ ಬಾರಿ ಕಾರ್ತಿಕ ಮಾಸದ ಶುಕ್ಲಪಕ್ಷ(ಕಾರ್ತಿಕ ಪೂರ್ಣಿಮೆ)ದ ದಿನವೇ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ.
ಭಾರತದಲ್ಲಿ ಗೋಚರಿಸುವುದೇ? :
ಭಾರತದಲ್ಲಿ ಈ ಚಂದ್ರಗ್ರಹಣವು ಮಧ್ಯಾಹ್ನ 1.04ರಿಂದ ಆರಂಭವಾಗಿ ಸಂಜೆ 5.22ಕ್ಕೆ ಅಂತ್ಯಗೊಳ್ಳುತ್ತದೆ. ಹೀಗಾಗಿ, ದೇಶದ ಉತ್ತರ ಹಾಗೂ ಪೂರ್ವ ಭಾಗದ ಕೆಲವೇ ಕಡೆ ಅದು ಗೋಚರಿಸುತ್ತದೆ. ಪಾಟ್ನಾ, ರಾಂಚಿ, ಕೋಲ್ಕತಾ, ಲಕ್ನೋ, ವಾರಾಣಸಿ ಮತ್ತು ಭುವನೇಶ್ವರದಲ್ಲಿ ಸ್ವಲ್ಪಮಟ್ಟಿಗೆ ಗ್ರಹಣ ಗೋಚರಿಸಲಿದೆ ಎಂದು ಹೇಳಲಾಗಿದೆ.
- ಇಂದಿನ ಗ್ರಹಣವು ಮೊದಲು ಗೋಚರಿಸುವುದು ಲಿಮಾ ಮತ್ತು ಪೆರುವಿನಲ್ಲಿ
- ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್ ಮತ್ತು ಅಟ್ಲಾಂಟಿಕ್‌ನಲ್ಲಿ ಗೋಚರಿಸಲಿದೆ.
- 2020ರಲ್ಲಿ 4 ಚಂದ್ರಗ್ರಹಣ ಗಳು ಸಂಭವಿಸಿದ್ದು, ಇವೆಲ್ಲವೂ ಛಾಯಾ ಗ್ರಹಣಗಳೇ ಆಗಿದ್ದವು.
- ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ನಡೆಯಲಿದೆ. ಅದು ಸಂಪೂರ್ಣ ಚಂದ್ರಗ್ರಹಣವಾಗಿರಲಿದೆ.
- ಈ ವರ್ಷದ ಡಿಸೆಂಬರ್ 14ರಂದು ಸೂರ್ಯಗ್ರಹಣ ಉಂಟಾಗುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.