ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ
Team Udayavani, Oct 28, 2024, 4:28 PM IST
ಬಿಹಾರ: ಬಿಹಾರ ಸಂಸದ ಪಪ್ಪು ಯಾದವ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆ ಬಂದಿದೆ. ಆಡಿಯೋ ಕ್ಲಿಪ್‌ನಲ್ಲಿ, ಕರೆ ಮಾಡಿದವರು ಯಾದವ್ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಮತ್ತು ನಟ ಸಲ್ಮಾನ್ ಖಾನ್ ವಿಷಯದಿಂದ ದೂರವಿದ್ದರೆ ಒಳ್ಳೆಯದು ಇಲ್ಲದಿದ್ದರೆ ನಿಮ್ಮನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಇತ್ತೀಚಿಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು ಇದರ ಬೆನ್ನಲ್ಲೇ ಪೂರ್ನಿಯಾದ ಸಂಸದ ಪಪ್ಪು ಯಾದವ್ ಅವರು ನನಗೆ ಪೊಲೀಸರು ಅನುಮತಿ ಕೊಟ್ಟರೆ 24 ಗಂಟೆಗಳ ಒಳಗೆ ದರೋಡೆಕೋರರಂತಹ ಕ್ರಿಮಿಗಳನ್ನು ಕೆಡವಿ ಹಾಕುವುದಾಗಿ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಬಿಷ್ಣೋಯ್ ಗ್ಯಾಂಗ್ ನಿಂದ ಆಡಿಯೋ ಸಂದೇಶ ಯಾದವ್ ಅವರಿಗೆ ಬಂದಿದ್ದು ಅದರಲ್ಲಿ ನಿಮ್ಮ ಚಲನವಲನವನ್ನು ನಾವು ಗಮನಿಸುತ್ತಿದ್ದೇವೆ ಸಲ್ಮಾನ್ ಖಾನ್ ವಿಷಯದಲ್ಲಿ ದೂರವಿರಿ, ಇಲ್ಲವಾದಲ್ಲಿ ನಿಮ್ಮನ್ನೂ ಕೊಲೆ ಮಾಡಲಾಗುವುದು ಎಂಬುದಾಗಿ ಸಂದೇಶ ರವಾನಿಸಿದ್ದಾರೆ.
ಆಡಿಯೋ ಸಂದೇಶ ಬಂದ ಕೂಡಲೇ ಯಾದವ್ ಅವರು ಬಿಹಾರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾಬಾ ಸಿದ್ದಿಕ್ ಅವರ ಹತ್ಯೆಯನ್ನು ಖಂಡಿಸಿದ ಯಾದವ್, ಮಾಜಿ ಸಚಿವರ ಹತ್ಯೆಯು ಮಹಾರಾಷ್ಟ್ರದಲ್ಲಿ “ಸಂಪೂರ್ಣ ಕಾನೂನುಬಾಹಿರತೆಯನ್ನು” ಎತ್ತಿ ತೋರಿಸುತ್ತದೆ. ಬಾಬಾ ಸಿದ್ದಿಕ್ ಹತ್ಯೆ ಅತ್ಯಂತ ದುರಂತವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಪ್ರಭಾವಿ ನಾಯಕರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರ ಪಾಡು ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.