ವಕೀಲರ ಭೇಟಿಗೆ ಒಪ್ಪಿಗೆ ನೀಡಲ್ಲ: ಪಾಕಿಸ್ಥಾನ
Team Udayavani, May 21, 2017, 11:46 AM IST
ಇಸ್ಲಾಮಾಬಾದ್/ಹೊಸದಿಲ್ಲಿ: ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ಥಾನವು “ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ’ ಎಂಬಂತೆ ವರ್ತಿಸುತ್ತಿದೆ. ಅಂತಾರಾಷ್ಟ್ರೀಯ ನ್ಯಾಯಾಲಯವು ತೀರ್ಪಿನಲ್ಲಿ ಜಾಧವ್‌ಗೆ ವಕೀಲರ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ನಮಗೆ ಸೂಚಿಸಿಲ್ಲ ಎಂದು ಇದೀಗ ಪಾಕಿಸ್ಥಾನ ಹೊಸ ವರಸೆ ತೆಗೆದಿದೆ.
ಶನಿವಾರ ಮಾತನಾಡಿದ ಪಾಕ್ ಪ್ರಧಾನಿಯ ಸಲಹೆಗಾರ ಸರ್ತಾಜ್ ಅಜೀಜ್, “ನ್ಯಾಯಾಲಯವು ಅಂತಿಮ ತೀರ್ಪು ಬರುವವರೆಗೆ ಗಲ್ಲು ಶಿಕ್ಷೆ ವಿಧಿಸಬೇಡಿ ಎಂದಿದೆಯೇ ವಿನಾ ಜಾಧವ್‌ಗೆ ರಾಯಭಾರಿ ಭೇಟಿಗೆ ಅವಕಾಶ ಕಲ್ಪಿಸಿ ಎಂದು ಹೇಳಿಲ್ಲ,’ ಎನ್ನುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ಜತೆಗೆ, ಜಾಧವ್ ಅವರು ನಕಲಿ ಪಾಸ್‌ಪೋರ್ಟ್ ಬಳಸಿ ಪಾಕ್ ಪ್ರವೇಶಿಸಿದ್ದರು ಹಾಗೂ ಇಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರು. ಇದನ್ನು ಅವರೇ ಒಪ್ಪಿಕೊಂಡಿದ್ದಾರೆ. ಪಾಕ್ ಕಾನೂನಿನ ಆಧಾರದಲ್ಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದಿದ್ದಾರೆ ಸರ್ತಾಜ್. ಅಲ್ಲದೆ, ಮುಂದಿನ ವಿಚಾರಣೆ ವೇಳೆ ನಾವು ಬಲಿಷ್ಠ ತಂಡದೊಂದಿಗೆ ವಾದಿಸಲಿದ್ದೇವೆ ಎಂದೂ ಹೇಳಿದ್ದಾರೆ.
ಐಸಿಜೆಯಲ್ಲಿ ವಾದಿಸಲು ಪಾಕಿಸ್ಥಾನವು ತನ್ನ ಅಟಾರ್ನಿ ಜನರಲ್ ಅಷ¤ರ್ ಔಸಫ್ ಅಲಿ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಅಜೀಜ್ ಈ ವಿಚಾರ ತಿಳಿಸಿದ್ದಾರೆ. ಮೊನ್ನೆಯ ವಿಚಾ ರಣೆ ವೇಳೆ ಬ್ರಿಟನ್ ಮೂಲದ ಖವಾರ್ ಖುರೇಷಿ ಸಮರ್ಥ ವಾಗಿ ವಾದ ಮಂಡಿಸಿಲ್ಲ ಎಂದು ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪಾಕ್ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಜಾಧವ್ ತಾಯಿಯ ಅರ್ಜಿ ಸ್ವೀಕರಿಸಿದ್ದೇವೆ: ಜಾಧವ್ ಗಲ್ಲು ಪ್ರಶ್ನಿಸಿ ಅವರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪರಿಧಿಗಣಿಸಲಾಗಿದೆ ಎಂದೂ ಅಜೀಜ್ ತಿಳಿಸಿದ್ದಾರೆ. ಎ.26ರಂದೇ ಜಾಧವ್ ತಾಯಿ ಮೇಲ್ಮನವಿ ಸಲ್ಲಿಸಿದ್ದರು.ಪ್ರತಿಯನ್ನು ಭಾರತೀಯ ಹೈಕಮಿಷನ್ ಪಾಕ್ ವಿದೇಶಾಂಗ ಕಾರ್ಯದರ್ಶಿಗೆ ಹಸ್ತಾಂತರಿಸಿತ್ತು.
ಭಾರತ ತಪ್ಪು ಮಾಡಿತು ಎಂದ ಕಾಟುj: ಜಾಧವ್ ವಿಚಾರದಲ್ಲಿ ಭಾರತವು ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿ ತಪ್ಪು ಮಾಡಿತು ಎಂದು ಭಾರತೀಯ ಪತ್ರಿಕಾ ಮಂಡಳಿ ಮಾಜಿ ಅಧ್ಯಕ್ಷ, ನ್ಯಾ| ಮಾರ್ಕಂಡೇಯ ಕಾಟುj ಅಭಿಪ್ರಾಯಪಟ್ಟಿದ್ದಾರೆ. ಫೇಸ್‌ಬುಕ್ ವಾಲ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ಭಾರತವು ಜಾಧವ್‌ಗಾಗಿ ಅಂತಾರಾಷ್ಟ್ರೀಯ ಕೋರ್ಟ್‌ನ ಮೊರೆ ಹೋಗಿದ್ದು ಪಾಕಿಸ್ಥಾನಕ್ಕೆ ವರವಾಗಿ ಪರಿಣಮಿಸಿದೆ. ಇನ್ನು ಕಾಶ್ಮೀರ ಸೇರಿದಂತೆ ಎಲ್ಲ ವಿಚಾರಗಳನ್ನೂ ಎತ್ತಿಕೊಂಡು ಪಾಕಿಸ್ಥಾನವು ಐಸಿಜೆ ಮೆಟ್ಟಿಲೇರಬಹುದು. ಆಗ ಭಾರತಕ್ಕೆ ಐಸಿಜೆಯ ವ್ಯಾಪ್ತಿ ಕುರಿತು ಆಕ್ಷೇಪವೆತ್ತಲು ಅಸಾಧ್ಯವಾಗುತ್ತದೆ. ಇದನ್ನು ಅರಿತೇ ಪಾಕಿಸ್ಥಾನವು ಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಿಲ್ಲ ಎಂದು ಅನಿಸುತ್ತದೆ,’ ಎಂದಿದ್ದಾರೆ.
ಖುರೇಷಿ ನೇಮಿಸಿದ್ದ ಯುಪಿಎ ಸರಕಾರ
ಐಸಿಜೆಯಲ್ಲಿ ಪಾಕ್ ಪರ ವಾದಿಸಿದ್ದ ವಕೀಲ ಖುರೇಷಿ ಅವರನ್ನು 2004ರಲ್ಲಿ ಮಧ್ಯಸ್ಥಿಕೆ ಪ್ರಕರಣವೊಂದರಲ್ಲಿ ವಾದಿಸಲು ಯುಪಿಎ ಸರಕಾರ ನೇಮಿಸಿತ್ತೆಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ದಾಭೋಲ್ ವಿದ್ಯುತ್ ಯೋಜನೆಗೆ ಸಂಬಂಧಿಸಿ ಅಮೆರಿಕದ ಜತೆ ಬಿಕ್ಕಟ್ಟು ಸೃಷ್ಟಿಯಾದಾಗ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದಿಸು ತ್ತಿದ್ದ ಭಾರತದ ಪ್ರತಿನಿಧಿಗಳನ್ನು ಬದಲಿಸಿ, ಖುರೇಷಿ ಅವರನ್ನು ಸರಕಾರ ನೇಮಿಸಿತ್ತು. ಇದು ಯುಪಿಎ ಸರಕಾರದ ಪಾಕ್ ಪರ ನೀತಿಯನ್ನು ತೋರಿಸುತ್ತದೆ ಎಂದಿರುವ ಬಿಜೆಪಿ ನಾಯಕ ಜಿ.ವಿ.ಎಲ್. ನರಸಿಂಹ ರಾವ್, ಕಾಂಗ್ರೆಸ್‌ಗೆàನು ಭಾರತದಲ್ಲಿ ವಕೀ ಲರೇ ಸಿಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಖುರೇಷಿ ವಿಗ್ ಧರಿಸಿದ್ದೇಕೆ?
ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ವಾದಿಸುವಾಗ ಪಾಕ್ ಪರ ವಕೀಲ ಖುರೇಷಿ ಅವರು ತಲೆಗೆ ವಿಗ್(ಕೃತಕಕೂದಲಿನ ಟೋಪಿ) ಧರಿಸಿದ್ದನ್ನು ಅನೇಕರು ಗಮನಿಸಿರಬಹುದು. ಆದರೆ, ಭಾರತದ ಪರ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಮಾಮೂಲಿ ವಸ್ತ್ರದಲ್ಲಿದ್ದರು. ಹಾಗಾದರೆ, ಖುರೇಷಿ ವಿಗ್ ಧರಿಸಿದ್ದೇಕೆ, ಅದು ಐಸಿಜೆಯಲ್ಲಿ ಕಡ್ಡಾಯವೇ? ಇಲ್ಲ, ಹಿಂದೆಲ್ಲ ನ್ಯಾಯಾಲಯದಲ್ಲಿ ವಕೀಲರು ಬಿಳಿ ಕೂದಲಿನಂತೆ ಕಾಣುವ ವಿಗ್ ಧರಿಸುತ್ತಿದ್ದರು. ಆದರೆ, ಈಗ ಅಂಥ ಪದ್ಧತಿ ಇಲ್ಲ. ಐಸಿಜೆಯಲ್ಲೂ ಅದು ಕಡ್ಡಾಯವಲ್ಲ. ಆದರೆ, ಖುರೇಷಿ ಮೂಲತಃ ಲಂಡನ್‌ನವರಾಗಿದ್ದು, ಅಲ್ಲಿ ಈಗಲೂ ವಿಗ್ ಧರಿಸಿಯೇ ವಾದ ಮಾಡಲಾಗುತ್ತದೆ. ಹಾಗಾಗಿ, ಅವರು ಅದನ್ನೇ ಐಸಿಜೆಯಲ್ಲೂ ಪಾಲಿಸಿದರು. ಆಯಾ ದೇಶದ ವಕೀಲರು ಅವರವರ ದೇಶದಲ್ಲಿನ ನ್ಯಾಯವಾದಿಗಳ ಉಡುಗೆಯಲ್ಲೇ ವಾದಿಸಲು ಐಸಿಜೆಯಲ್ಲಿ ಅವಕಾಶವಿದೆ.
ಕುಲಭೂಷಣ್ ಜಾಧವ್ ಕಸಬ್‌ಗಿಂತಲೂ ದೊಡ್ಡ ಭಯೋತ್ಪಾದಕ. ಆತ ಹಲವರನ್ನು ಇಲ್ಲಿಗೆ ಕರೆಸಿಕೊಂಡು ವಿಧ್ವಂಸಕ ಕೃತ್ಯ ನಡೆಸಿದ್ದಾನೆ. ಎಷ್ಟೋ ಮಂದಿಯ ಸಾವಿಗೆ ಕಾರಣರಾಗಿದ್ದಾನೆ.
– ಜ| ಪರ್ವೇಜ್ ಮುಷರ್ರಫ್, ಪಾಕ್ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.