Leader of the Opposition; ಚೊಚ್ಚಲ ಭಾಷಣದಲ್ಲೇ ಅಬ್ಬರ! ; ರಾಹುಲ್‌ ವಿರುದ್ಧ ಕ್ರಮ?

ಇಂದು, ನಾಳೆ ಮೋದಿ ಉತ್ತರ

Team Udayavani, Jul 2, 2024, 6:46 AM IST

1-LOP

ಹೊಸದಿಲ್ಲಿ: 18ನೇ ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಅಲಂಕರಿಸಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ಸೋಮವಾರ ಸದನದಲ್ಲಿ ಪ್ರಖರ ಹಾಗೂ ಬೆಂಕಿಯಂಥ ಭಾಷಣದ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ತಮ್ಮ ಮೊದಲ ಭಾಷಣದಲ್ಲೇ ಕೇಂದ್ರ ಸರಕಾರದ ವಿರುದ್ಧ ಅಬ್ಬರಿಸಿದ ರಾಹುಲ್‌, ನೀಟ್‌ ಅಕ್ರಮ, ಅಗ್ನಿಪಥ, ಅಯೋಧ್ಯೆ, ಮಣಿಪುರ ಸೇರಿ ಒಂದಾದ ಅನಂತರ ಒಂದರಂತೆ ಹಲವು ವಿಚಾರಗಳನ್ನೆತ್ತುತ್ತಆಡಳಿತ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯ ವೇಳೆ ರಾಹುಲ್‌ ಗಾಂಧಿ ಮಾತನಾಡಲು ಎದ್ದು ನಿಂತಾಗ ಬಿಜೆಪಿ ಸದಸ್ಯರು “ಜೈ ಶ್ರೀ ರಾಮ್‌’ ಎಂದು ಘೋಷಣೆ ಕೂಗಿದರು. ಇದರಿಂದ ಸ್ವಲ್ಪವೂ ವಿಚಲಿತರಾಗದ ರಾಹುಲ್‌ ಕೂಡಲೇ “ಜೈ ಸಂವಿಧಾನ’ ಎಂದು ತಿರುಗೇಟು ನೀಡಿದರು. ಒಟ್ಟು 1 ಗಂಟೆ 40 ನಿಮಿಷ ರಾಹುಲ್‌ ಮಾತನಾಡಿದರು. ವಿಪಕ್ಷ ನಾಯಕನಾಗಿ ರಾಹುಲ್‌ರ ಚೊಚ್ಚಲ ಭಾಷಣವನ್ನು ತಾಯಿ ಸೋನಿಯಾ ಗಾಂಧಿ,  ಸಹೋದರಿ ಪ್ರಿಯಾಂಕಾ ವಾದ್ರಾ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. ಇದೇ ವೇಳೆ, ಪ್ರಧಾನಿ ಮೋದಿ ಮತ್ತು ಸರಕಾರದ ಆದೇಶದ ಮೇರೆಗೆ ನನ್ನ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ನನ್ನ ವಿರುದ್ಧ 20+ ಕೇಸುಗಳನ್ನು ಹಾಕಲಾಗಿದೆ, 2 ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ, ನನ್ನ ಮನೆಯನ್ನು ಕಿತ್ತುಕೊಳ್ಳಲಾಗಿದೆ, ಇ.ಡಿ. ಮೂಲಕ 55 ಗಂಟೆಗಳ ಕಾಲ ನನ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬುದನ್ನೂ ರಾಹುಲ್‌ ಪ್ರಸ್ತಾವಿಸಿದರು.

ಸರಕಾರ ಇನ್ನೂ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ನೀಡಿಲ್ಲ. ವಿಪಕ್ಷಗಳನ್ನು ನಿಮ್ಮ ಶತ್ರುಗಳಂತೆ ನೋಡಬೇಡಿ. ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೂ ನಾವು ಸಿದ್ಧರಿದ್ದೇವೆ. ನಾವೆಲ್ಲರೂ ಒಂದಾಗಿ ದೇಶವನ್ನು ಮುನ್ನಡೆಸೋಣ ಎಂದೂ ಅವರು ಸಲಹೆ ನೀಡಿದರು. ರಾಹುಲ್‌ ಭಾಷಣದ ವೇಳೆ ಪ್ರಧಾನಿ ಮೋದಿ ಎರಡೆರಡು ಬಾರಿ ಎದ್ದು ನಿಂತು ಪ್ರತಿಕ್ರಿಯಿಸಿದರೆ, ಕೇಂದ್ರದ ಐವರು ಸಚಿವರು ಕೂಡ ಮಧ್ಯೆ ಎದ್ದು ನಿಂತು ಸ್ಪಷ್ಟನೆ ನೀಡಿದ್ದೂ ಕಂಡುಬಂತು.

ಮೋದಿ ನೀತಿಯಿಂದ ಮಣಿಪುರ ಸುಟ್ಟುಹೋಯಿತು

ನಿಮ್ಮ ರಾಜಕೀಯ ಹಾಗೂ ನೀತಿಗಳ ಮೂಲಕ ಮಣಿಪುರದಂಥ ಶಾಂತಿಯುತ ರಾಜ್ಯವನ್ನು “ನಾಗರಿಕ ಯುದ್ಧ’ದ ಬೆಂಕಿಗೆ ನೂಕಿದ್ದೀರಿ ಎಂದು ಪ್ರಧಾನಿ ಮೋದಿ ನೇತೃತ್ವದ ಸರಕಾರದ ವಿರುದ್ಧ ಹರಿಹಾಯ್ದ ರಾಹುಲ್‌, ನಿಮ್ಮ ನೀತಿಗಳಿಂದಾಗಿ ಮಣಿಪುರವು ಸಂಪೂರ್ಣ ಸುಟ್ಟುಹೋಯಿತು. ನಮ್ಮ ಪ್ರಧಾನಮಂತ್ರಿಗಳಿಗೆ ಮಣಿಪುರ ಒಂದು ರಾಜ್ಯವೇ ಅಲ್ಲ. ಸಂಘರ್ಷಪೀಡಿತ ರಾಜ್ಯಕ್ಕೆ ಒಮ್ಮೆ ಹೋಗಿ, ಉತ್ತಮ ಸಂದೇಶ ರವಾನಿಸಿ ಎಂದು ನಾವು ಕೇಳಿಕೊಂಡರೂ ಅವರು ಆ ಕಡೆ ಮುಖ ಮಾಡಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಅಯೋಧ್ಯೆಯಿಂದಲೇ ಸ್ಪಷ್ಟ ಸಂದೇಶ

ತಮ್ಮ ಭಾಷಣದ ವೇಳೆ ಅಯೋಧ್ಯೆಯಿರುವ ಫೈಜಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರಸ್ತಾವಿಸಿದ ರಾಹುಲ್‌, “ಬಿಜೆಪಿಯು ಅಯೋಧ್ಯೆಯಿಂದ ಹಿಡಿದು ದೇಶಾದ್ಯಂತ ಭಯವನ್ನು ಸೃಷ್ಟಿಸುತ್ತಾ ಸಾಗಿತ್ತು. ಅದೆಷ್ಟು ತೀವ್ರವಾಗಿತ್ತೆಂದರೆ, ಕೊನೆಗೆ ಶ್ರೀ ರಾಮನ ಜನ್ಮಭೂಮಿಯೇ ಬಿಜೆಪಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿತು. ಆ ಸಂದೇಶ ಇಂದು ನಿಮ್ಮ ಮುಂದೆಯೇ ಕುಳಿತಿದೆ’ ಎನ್ನುತ್ತಾ ಫೈಜಾಬಾದ್‌ ಸಂಸದ ಅವಧೇಶ್‌ ಪ್ರಸಾದ್‌ರತ್ತ ಕೈತೋರಿಸಿದರು. ಜತೆಗೆ ಸೂಕ್ತ ಪರಿಹಾರ ನೀಡದೇ ಅಯೋಧ್ಯೆಯ ಸ್ಥಳೀಯರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ಸಣ್ಣಪುಟ್ಟ ಅಂಗಡಿಗಳು, ಮನೆಗಳನ್ನು ಧ್ವಂಸ ಮಾಡಿ, ಜನರನ್ನು ಬೀದಿ ಪಾಲು ಮಾಡಲಾಯಿತು. ಅಯೋಧ್ಯೆಯ ಜನರ ಭೂಮಿ ಕಸಿದುಕೊಂಡು, ಮನೆ, ಅಂಗಡಿ ನೆಲಸಮಗೊಳಿಸುವ ಮೂಲಕ ಮೋದಿ ಎಲ್ಲರಲ್ಲೂ ಭಯ ಸೃಷ್ಟಿಸಿದರು. ಇಷ್ಟೆಲ್ಲ ಮಾಡಿದ ಮೇಲೂ ರಾಮಮಂದಿರ ಉದ್ಘಾಟನೆಗೆ ಅಂಬಾನಿ -ಅದಾನಿಯನ್ನು ಕರೆದರೇ ವಿನಾ ಸ್ಥಳೀಯರಿಗೆ ಆಹ್ವಾನ ನೀಡಲಿಲ್ಲ. ಇವೆಲ್ಲವೂ ಅಯೋಧ್ಯೆ ಜನರ ಆಕ್ರೋಶಕ್ಕೆ ಕಾರಣವಾಯಿತು ಎಂದೂ ರಾಗಾ ಹೇಳಿದರು. ಇದೇ ವೇಳೆ, ಫೈಜಾಬಾದ್‌ ಸಂಸದ ಅವಧೇಶ್‌ ಪ್ರಸಾದ್‌ ಅವರಿಗೆ ಹಸ್ತಲಾಘವ ಮಾಡುವ ಮೂಲಕ ರಾಹುಲ್‌ ಬಿಜೆಪಿಗೆ ತಿರುಗೇಟು ನೀಡಿದರು.

ಮೋದಿ ಎಸ್ಕೇಪ್‌: ಮೋದಿಯವರು ಅಯೋಧ್ಯೆಯಲ್ಲಿ ಕಣಕ್ಕಿಳಿಯಲು ಯೋಚಿಸಿ 2 ಬಾರಿ ಸಮೀಕ್ಷೆ ನಡೆಸಿದ್ದರು. ಆದರೆ ಸಮೀಕ್ಷೆಯಲ್ಲಿ ನಕಾರಾತ್ಮಕ ಫ‌ಲಿತಾಂಶ ಬಂದ ಕಾರಣ, ಅಯೋಧ್ಯೆಯಿಂದ ಎಸ್ಕೇಪ್‌ ಆಗಿ ವಾರಾಣಸಿಯಲ್ಲೇ ಸ್ಪರ್ಧಿಸಿದರು ಎಂದೂ ರಾಗಾ ವ್ಯಂಗ್ಯವಾಡಿದರು.

BJPಯವರಲ್ಲೂ ಮೋದಿಯಿಂದ ಭಯ ಸೃಷ್ಟಿ!

ಸದನಕ್ಕೆ ಬಂದಾಗ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು ಗಡ್ಕರಿ ಅವರು ನನ್ನನ್ನು ನೋಡಿಯೂ, ಕುಶಲೋಪರಿ ವಿಚಾರಿಸಲಿಲ್ಲ. ಮೋದಿ ಸಿಟ್ಟಾಗಬಹುದು ಎಂಬ ಭಯ ಅವರಿಗೆ. ಅಯೋಧ್ಯೆಯ ಜನರನ್ನು ಮಾತ್ರವಲ್ಲ, ಬಿಜೆಪಿಯವರಲ್ಲೇ ಮೋದಿ ಭಯ ಸೃಷ್ಟಿಸಿಟ್ಟಿದ್ದಾರೆ ಎಂದು ರಾಹುಲ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಪ್ರಜಾಪ್ರಭುತ್ವ ಮತ್ತು ಸಂವಿಧಾನವು ನನಗೆ ವಿಪಕ್ಷ ನಾಯಕನನ್ನು ಗಂಭೀರವಾಗಿ ಪರಿಗಣಿಸುವಂತೆ ಕಲಿಸಿದೆ’ ಎನ್ನುವ ಮೂಲಕ ತಿರುಗೇಟು ನೀಡಿದರು.

NEET ಶ್ರೀಮಂತರಿಗಾಗಿ ಮಾಡಿದ “ಕಮರ್ಷಿಯಲ್‌’ ಪರೀಕ್ಷೆ

ನೀಟ್‌ ಎನ್ನುವುದು ಶ್ರೀಮಂತ ವಿದ್ಯಾರ್ಥಿಗಳಿಗೆಂದೇ ರೂಪಿಸಲಾದ “ವಾಣಿಜ್ಯ’ ಪರೀಕ್ಷೆಯಾಗಿದೆಯೇ ವಿನಾ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆಂದು ಮಾಡಿದ್ದಲ್ಲ ಎಂಬ ಗಂಭೀರ ಆರೋಪವನ್ನು ರಾಹುಲ್‌ ಮಾಡಿದ್ದಾರೆ. ನೀಟ್‌ ಅಕ್ರಮ ಕುರಿತು ಸರಕಾರದ ವಿರುದ್ಧ ಮುಗಿಬಿದ್ದ ಅವರು, 7 ವರ್ಷಗಳಲ್ಲಿ ಒಟ್ಟು 70 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಆದರೆ ಸರಕಾರ ಈ ಬಗ್ಗೆ ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ. ಏಕೆಂದರೆ ಅದಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಸಕ್ತಿಯಿಲ್ಲ ಎಂದು ಕಿಡಿಕಾರಿದ್ದಾರೆ. ವೃತ್ತಿಪರ ಪರೀಕ್ಷೆಗಳನ್ನೆಲ್ಲ ಕಮರ್ಷಿಯಲ್‌ ಪರೀಕ್ಷೆಗಳಾಗಿ ಬದಲಿಸಲಾಗಿದೆ. ನೀಟ್‌ನಲ್ಲಿ ಟಾಪ್‌ ರ್‍ಯಾಂಕ್‌ ಪಡೆದರೂ, ಹಣವಿಲ್ಲ ಎಂದಾದರೆ ಆ ವಿದ್ಯಾರ್ಥಿಗೆ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಈಗ ವಿದ್ಯಾರ್ಥಿಗಳು ಪರೀಕ್ಷೆಯ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದೆ ಎಂದೂ ರಾಗಾ ಹೇಳಿದ್ದಾರೆ.

ಅಗ್ನಿವೀರರನ್ನು ಬಳಸಿ, ಬಿಸಾಡುತ್ತಿರುವ ಸರಕಾರ

ಮೋದಿಯವರ ಆಜ್ಞೆಯ ಮೇರೆಗೆ ಅಗ್ನಿವೀರ ಯೋಜನೆ ತರಲಾಗಿದೆ. ಅಗ್ನಿವೀರ ಎನ್ನುವುದು ಬಳಸಿ-ಬಿಸಾಕುವ ಕೆಲಸವಿದ್ದಂತೆ. ಒಬ್ಬ ಯೋಧನಿಗೆ ಪಿಂಚಣಿ ಸಿಗುತ್ತದೆ, ಮತ್ತೂಬ್ಬನಿಗೆ ಸಿಗಲ್ಲ. ನೀವು ಯೋಧರ ನಡುವೆಯೇ ವಿಭಜನೆ ಸೃಷ್ಟಿ ಮಾಡಿದ್ದೀರಿ ಎಂದು ರಾಹುಲ್‌ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜನಾಥ್‌ ಸಿಂಗ್‌, “ಕಾಂಗ್ರೆಸ್‌ ನಾಯಕ ಸಂಸತ್‌ನಲ್ಲಿ ತಪ್ಪು ಮಾಹಿತಿ ಹಬ್ಬುತ್ತಿದ್ದಾರೆ’ ಎಂದು ಕಿಡಿಕಾರಿದರು.

ರಾಹುಲ್‌ ವಿರುದ್ಧ ಕ್ರಮ ?

ಸದನದಲ್ಲಿ ಹಿಂದೂ-ವಿರೋಧಿ ಹೇಳಿಕೆ ಯನ್ನು ನೀಡಿರುವ ರಾಹುಲ್‌ ಗಾಂಧಿ ವಿರುದ್ಧ ಸ್ಪೀಕರ್‌ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಅಗ್ನಿವೀರರ ಕುರಿತು ಸದನಕ್ಕೆ ರಾಹುಲ್‌ ತಪ್ಪು ಮಾಹಿತಿ ನೀಡು ತ್ತಿದ್ದಾರೆ. 158 ಸಂಸ್ಥೆಗಳ ಸಲಹೆ ಪಡೆದು ಈ ಯೋಜನೆ ಜಾರಿ ಮಾಡಲಾಗಿದೆ. ಹುತಾತ್ಮ ಅಗ್ನಿವೀರರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರವನ್ನೂ ನೀಡಲಾಗುತ್ತಿದೆ. ರಾಹುಲ್‌ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು.

-ರಾಜನಾಥ್‌ ಸಿಂಗ್‌, ರಕ್ಷಣ ಸಚಿವ

ಇಂದು, ನಾಳೆ ಮೋದಿ ಉತ್ತರ

ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ್ದ ಭಾಷಣಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಸಭೆಯಲ್ಲಿ, ಬುಧವಾರ ರಾಜ್ಯಸಭೆಯಲ್ಲಿ ವಂದನಾ ಭಾಷಣ ಮಾಡಲಿದ್ದಾರೆ. ಈ ವೇಳೆ ವಿಪಕ್ಷ ಗಳ ಹಲವು ಆರೋಪಗಳಿಗೂ ತಿರುಗೇಟು ನೀಡಲಿದ್ದಾರೆ.

ಟಾಪ್ ನ್ಯೂಸ್

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Apologize or give 5 crores: Another threat to actor Salman

Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.