ಲೀಕೇಜ್ನಿಂದಲೇ ರಾಕೆಟ್ ಅವಗಢ; 2021ರ ಜಿಐಎಸ್ಎಟಿ ರಾಕೆಟ್ ವೈಫಲ್ಯಕ್ಕೆ ಕಾರಣ ಪತ್ತೆ
ವೈಫಲ್ಯ ವಿಶ್ಲೇಷಣಾ ಸಮಿತಿಯ (ಎಫ್ಎಸಿ) ವರದಿಯಲ್ಲಿ ಕಾರಣ ಉಲ್ಲೇಖ
Team Udayavani, Mar 27, 2022, 7:30 AM IST
ನವದೆಹಲಿ: ಕಳೆದ ವರ್ಷ ಆಗಸ್ಟ್ನಲ್ಲಿ ಸಂಭವಿಸಿದ್ದ, “ಜಿಯೋ ಇಮ್ಯಾಜಿಂಗ್ ಸ್ಯಾಟಲೈಟ್’ (ಜಿಐಎಸ್ಎಟಿ-1) ಉಡಾವಣಾ ವೈಫಲ್ಯದ ಕಾರಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಜಿಐಎಸ್ಎಟಿ-1 ರಾಕೆಟ್ನಲ್ಲಿದ್ದ ಕ್ರಯೋಜೆನಿಕ್ ಇಂಜಿನ್ನ ಮೇಲ್ಭಾಗದಲ್ಲಿರುವ ಕ್ರಿಟಿಕಲ್ ವಾಲ್Ìನಲ್ಲಿ ಬಿರುಕು ಕಾಣಿಸಿಕೊಂಡಿದ್ದೇ ಉಡಾವಣೆ ವೈಫಲ್ಯಕ್ಕೆ ಕಾರಣ ಎಂದು ಇಸ್ರೋ ರಚಿಸಿದ್ದ ವೈಫಲ್ಯ ವಿಶ್ಲೇಷಣಾ ಸಮಿತಿ (ಎಫ್ಎಸಿ) ತನ್ನ ವರದಿಯಲ್ಲಿ ಹೇಳಿದೆ.
ವರದಿಯಲ್ಲೇನಿದೆ?
ರಾಕೆಟ್ನಲ್ಲಿದ್ದ ಕ್ರಯೋಜೆನಿಕ್ನ ಅಪ್ಪರ್ ಸ್ಟೇಜ್ (ಸಿಯುಎಸ್) ಎಂಬುದು ರಾಕೆಟ್ನ ಮೇಲ್ಫಾಗದ ಕೋಶ. ರಾಕೆಟ್ ಭೂಮಿಯಿಂದ ಸಾಕಷ್ಟು ಎತ್ತರಕ್ಕೆ ಪ್ರಯಾಣ ಬೆಳೆಸಿದ ನಂತರ ರಾಕೆಟ್ಟನ್ನು ಮತ್ತಷ್ಟು ದೂರಕ್ಕೆ ಕೊಂಡೊಯ್ಯಲು ಸಿಯುಎಸ್ನಲ್ಲಿರುವ ದ್ರವೀಕೃತ ಜಲಜನಕ ಹಾಗೂ ದ್ರವೀಕೃತ ಆಮ್ಲಜನಕ ಟ್ಯಾಂಕ್ಗಳಿಂದ ಹೇರಳ ಪ್ರಮಾಣದಲ್ಲಿ ದಹಿಸುವ ಮೂಲಕ ರಾಕೆಟ್ ಮತ್ತಷ್ಟು ಮುಂದಕ್ಕೆ ಹೋಗುತ್ತದೆ.
ಆದರೆ, ದ್ರವೀಕೃತ ಜಲಜನಕದ ಟ್ಯಾಂಕ್ನ ಮೇಲಿದ್ದ ಸಾಫ್ಟ್ ವಾಲ್ ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ದ್ರವೀಕೃತ ಜಲಜನಕವಿದ್ದ ಟ್ಯಾಂಕ್ನಲ್ಲಿ ಒತ್ತಡ ಕಡಿಮೆಯಾಗಿದೆ. ಇದರಿಂದಾಗಿ, ರಾಕೆಟ್ ಉಡಾವಣೆಗೊಂಡ ನಂತರ 297.3ನೇ ಸೆಕೆಂಡ್ನಲ್ಲಿ ರಾಕೆಟ್ ತನ್ನ ಪಥವನ್ನು ಬದಲಿಸಿತು ಎಂದು ವರದಿಯಲ್ಲಿ ಹೇಳಲಾಗಿದೆ.
ಏನಾಗಿತ್ತು?
2021ರ ಆ. 21ರ ಮುಂದಾನೆ 5:43ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಜಿಎಸ್ಎಲ್ವಿ ಎಫ್-10 ರಾಕೆಟ್, ಉಡಾವಣೆಗೊಂಡ 307 ಸೆಕೆಂಡ್ಗಳ ತರುವಾಯ ತನ್ನ ಪಥವನ್ನು ಬದಲಿಸಿ ತನ್ನಲ್ಲಿದ್ದ ಜಿಎಸ್ಐಟಿ-1 ಭೂಪರಿವೀಕ್ಷಣಾ ಉಪಗ್ರಹದ ಸಮೇತ ಅಂಡಮಾನ್-ನಿಕೋಬಾರ್ ಸಮುದ್ರಕ್ಕೆ ಹೋಗಿ ಬಿದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.