![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 19, 2022, 6:39 AM IST
ಹೊಸದಿಲ್ಲಿ: ಭಾರತದ ತೈಲ ಅಗತ್ಯಗಳನ್ನು ಪೂರೈಸಲು ಶೇ.80 ಆಮದನ್ನೇ ಅವಲಂಬಿಸಬೇಕಾಗಿದೆ. ಕಚ್ಚಾ ತೈಲದಲ್ಲಿ ಸ್ವಾವಲಂಬನೆ ಹೊಂದಿರುವವರು ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳುವವರು, ನಮಗೆ ಮಾತ್ರ ಆ ದೇಶದಿಂದ ಖರೀದಿ ಮಾಡಬೇಡಿ ಎಂದು ಹೇಳಲು ಅರ್ಹತೆ ಉಳಿಸಿಕೊಂಡಿಲ್ಲ. ನಮ್ಮ ಇಂಧನ ಅಗತ್ಯದ ಬಗ್ಗೆ ರಾಜಕೀಯ ಮಾಡುವುದು ಬೇಡ ಎಂದು ಶುಕ್ರವಾರ ಕೇಂದ್ರ ಸರಕಾರ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವುದನ್ನು ಭಾರತ ಖಂಡಿಸಬೇಕು ಎಂದು ಅಮೆರಿಕ ಸಹಿತ ಹಲವು ರಾಷ್ಟ್ರಗಳು ಪ್ರತಿಪಾದಿಸುತ್ತಿರುವಂತೆಯೇ ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈಗಾಗಲೇ 30 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದೆ.
ಜಗತ್ತಿನ ಇತರ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುವ ಕಚ್ಚಾತೈಲದ ಪ್ರಮಾಣಕ್ಕೆ ಹೋಲಿಸಿದರೆ, ರಷ್ಯಾದಿಂದ ಖರೀದಿಸುತ್ತಿರುವುದು ಶೇ.1ಕ್ಕಿಂತ ಕಡಿಮೆ. ರಷ್ಯಾ-ಉಕ್ರೇನ್ ಬಿಕ್ಕಟ್ಟು ಶುರುವಾದ ಬಳಿಕ ಜಗತ್ತಿನಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಹೀಗಾಗಿ, ಕೇಂದ್ರ ಸರಕಾರ ಸ್ಪರ್ಧಾತ್ಮಕವಾಗಿ ಇಂಧನ ಖರೀದಿಸುವ ಅವಕಾಶಗಳನ್ನು ಶೋಧಿಸಲೇಬೇಕಾಯಿತು ಎಂದು ಸರಕಾರ ಹೇಳಿದೆ.
ಮಿತವ್ಯಯದಲ್ಲಿ ಕಚ್ಚಾ ತೈಲ ಸಿಗುವುದಿದ್ದರೆ, ಅದರ ಖರೀದಿ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಳ್ಳುವ ಅವಕಾಶ ದೇಶಕ್ಕಿದೆ ಎಂದು ಕೇಂದ್ರ ಪ್ರತಿಪಾದಿಸಿದೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.