![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 21, 2019, 2:01 PM IST
ನವದೆಹಲಿ: ಚಿರತೆ, ಹೆಬ್ಬಾವು ಕಾದಾಟ, ಚಿರತೆ, ಹುಲಿ, ಸಿಂಹದ ನಡುವಿನ ಸೆಣಸಾಟ ಹೀಗೆ ಹಲವು ವಿಡಿಯೋಗಳು ಸಾಮಾಜಿಕ ಹಾಗೂ ಅಂತರ್ಜಾಲ ತಾಣಗಳಲ್ಲಿ ಈಗಾಗಲೇ ಸದ್ದು ಮಾಡಿದ್ದು, ಇದೀಗ ಚಿರತೆ ಮತ್ತು ಮುಳ್ಳುಹಂದಿ ಮುಖಾಮುಖಿಯಾಗಿದ್ದು ಇವುಗಳ ನಡುವಿನ ಕಾದಾಟದ ವೀಡಿಯೋ ಹರಿದಾಡುತ್ತಿದೆ.
ಚಿರತೆ ಮತ್ತು ಮುಳ್ಳುಹಂದಿ ಕಾದಾಟದ ಸುಮಾರು 58 ಸೆಕೆಂಡುಗಳ ವೀಡಿಯೋವನ್ನು ಐಎಫ್ ಎಸ್ (ಇಂಡಿಯನ್ ಫಾರೆಸ್ಟ್ ಸರ್ವೀಸ್)ನ ಪ್ರವೀಣ್ ಕಾಸ್ವಾನ್ ಎಂಬವರು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೆದ್ದಾರಿಯಲ್ಲಿ ಚಿರತೆ ಮತ್ತು ಮುಳ್ಳುಹಂದಿ ಮುಖಾಮುಖಿಯಾದಾಗ ಭೀಕರ ಕಾಳಗಕ್ಕೆ ಮುಂದಾಗಿದ್ದವು. ಧೈರ್ಯದಿಂದ ಮುನ್ನುಗ್ಗಿದ ಚಿರತೆ ಮುಳ್ಳುಹಂದಿ ಮೇಲೆ ದಾಳಿ ನಡೆಸಲು ಮುಂದಾಗಿತ್ತು…ಆದರೆ ಮುಳ್ಳುಹಂದಿ ತನ್ನ ಮುಳ್ಳುಗಳಿಂದ ಸುತ್ತಾಡುತ್ತ ತಪ್ಪಿಸಿಕೊಳ್ಳುತ್ತಿತ್ತು. ಆದರೂ ಚಿರತೆ ಮುಳ್ಳುಹಂದಿಗೆ ತನ್ನ ಬಲಿಷ್ಠ ಪಂಜದಿಂದ ಗಾಯಮಾಡಿಬಿಟ್ಟಿತ್ತು.
Continuing with #leopard vs #porcupine. This one old video of another encounter between them. Here leopard got a good lesson from porcupine With their sharp quills. pic.twitter.com/5jbqITpeka
— Parveen Kaswan, IFS (@ParveenKaswan) November 20, 2019
ಮುಂದೇನಾಯ್ತು…ಅಷ್ಟರಲ್ಲಿ ಮುಳ್ಳುಹಂದಿ ತನ್ನ ಚೂಪಾದ ಮುಳ್ಳುಗಳನ್ನು ಬಿಟ್ಟುಬಿಟ್ಟಿತ್ತು! ಬಾಣದಂತಹ ಮುಳ್ಳು ಚಿರತೆಯ ಬಾಯಿಗೆ ತಗುಲಿದ್ದು, ಇದರಿಂದ ಚಿರತೆ ಕಂಗಾಲಾಗಿ ಹೋಗಿತ್ತು. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಚಿರತೆ ಹುಲ್ಲುಗಾವಲಿನತ್ತ ಹೊರಟು ಹೋಯಿತು. ಆದರೆ ಚಿರತೆ ಮತ್ತೊಮ್ಮೆ ಮುಳ್ಳುಹಂದಿಯತ್ತ ನೋಡುವ ಧೈರ್ಯ ತೋರಲೇ ಇಲ್ಲ!
ಇದೊಂದು ಹಳೆಯ ವಿಡಿಯೋ ಎಂದು ಪ್ರವೀಣ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಆದರೆ ಇಲ್ಲಿ ಚಿರತೆ ಮುಳ್ಳುಹಂದಿಯಿಂದ ಉತ್ತಮ ಪಾಠ ಕಲಿತಿದೆ ಎಂದು ಉಲ್ಲೇಖಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.