Tirupati Temple: ತಿರುಪತಿ ದೇವಸ್ಥಾನದ ಬಳಿ 6ವರ್ಷದ ಬಾಲಕಿಯನ್ನು ಕೊಂದ ಚಿರತೆ ಕೊನೆಗೂ ಸೆರೆ
Team Udayavani, Aug 14, 2023, 1:00 PM IST
ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ಪ್ರಸಿದ್ಧ ತಿರುಮಲ ದೇವಸ್ಥಾನದ ಬಳಿ ಆರು ವರ್ಷದ ಬಾಲಕಿಯ ಮೇಲೆ ದಾಳಿ ನಡೆಸಿ ಕೊಂದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 11ರಂದು ಕುಟುಂಬವೊಂದು ತಿರುಮಲದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟಹತ್ತಿ ಹೋಗುವ ವೇಳೆ ಎದುರಿನಿಂದ ಹೋಗುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿ ಕಾಡಿಗೆ ಎಳೆದೊಯ್ದಿತ್ತು, ಬಳಿಕ ಕಾರ್ಯಾಚರಣೆ ನಡೆಸಿದ ವೇಳೆ ಅರಣ್ಯದಲ್ಲಿ ಬಾಲಕಿಯ ದೇಹದ ಭಾಗ ಸಿಕ್ಕಿತ್ತು.
ಘಟನೆಗೆ ಸಂಬಂಧಿಸಿ ಅರಣ್ಯ ಇಲಾಖೆ ಚಿರತೆ ಪತ್ತೆಗೆ ಅರಣ್ಯ ಪ್ರದೇಶದಲ್ಲಿ ಹನ್ನೆರಡು ಕಡೆಗಳಲ್ಲಿ ಕ್ಯಾಮೆರಾ ಇರಿಸಿ ಚಿರತೆಯ ಚಲನವಲನ ಪತ್ತೆಹಚ್ಚಿ ಸೆರೆ ಹಿಡಿದಿದ್ದಾರೆ.
ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಚಾರಣಕ್ಕೆ ಅವಕಾಶ:
ಮಕ್ಕಳೊಂದಿಗೆ ಟ್ರೆಕ್ಕಿಂಗ್ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಪೋಷಕರಿಗೆ ಮಾಹಿತಿ ನೀಡಿದೆ ಒತ್ತಾಯಿಸಿದೆ. ಅಲ್ಲದೆ “15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಯಾತ್ರಾರ್ಥಿಗಳು ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರ ನಡುವೆ ಮಾತ್ರ ಚಾರಣ ಮಾಡಬಹುದು” ಎಂದು ಹೇಳಿದೆ.
ರಾತ್ರಿ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ:
ಪ್ರಕರಣಕ್ಕೆ ಸಂಬಂಧಿಸಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖ ನಿರ್ಧಾರ ಕೈಗೊಂಡಿದ್ದು ಜನರ ಜೀವದ ಸುರಕ್ಷತೆಯ ದೃಷ್ಟಿಯಿಂದ ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Temple Collapse: ವರುಣನ ಆರ್ಭಟ… ದೇವಸ್ಥಾನ ಕುಸಿದು 9 ಮೃತ್ಯು, ಹಲವರು ಸಿಲುಕಿರುವ ಶಂಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.