ಎದೆ ತಟ್ಟುವ ಮೊದಲು ಪ್ರಗತಿ ಸಾಧಿಸಿ: ರಾಜನ್
Team Udayavani, Sep 9, 2017, 8:20 AM IST
ಹೊಸದಿಲ್ಲಿ: ಭಾರತದ ಆರ್ಥಿಕ ಬೆಳವಣಿಗೆಯನ್ನು ಚೀನಕ್ಕೆ ಹೋಲಿಕೆ ಮಾಡಿ ನೋಡಿದರೆ, ಅಪಮೌಲ್ಯಕ್ಕೂ ಮೊದಲಿನ ಜಿಡಿಪಿ ಬೆಳವಣಿಗೆಯೇ ಮುಂದುವರಿದಿದ್ದಲ್ಲಿ 10 ವರ್ಷಗಳ ಅವಧಿಯಲ್ಲಿ ಶೇ. 8-10ರಷ್ಟು ಪ್ರಗತಿ ಸಾಧ್ಯ ವಾಗುತ್ತಿತ್ತು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತವು ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿ ವಿಶ್ವಕ್ಕೆ ಪಾಠ ಮಾಡಬಹುದೇ ವಿನಾ ಆರ್ಥಿಕ ಪ್ರಗತಿ ವಿಚಾರದಲ್ಲಿ ಎದೆತಟ್ಟಿಕೊಳ್ಳಬೇಕೆಂದರೆ ಮೊದಲು ಶೇ.8-10ರಷ್ಟು ಪ್ರಗತಿ ದಾಖಲಿಸಬೇಕು. ಆದರೆ ದೇಶದ ಆರ್ಥಿಕ ಪ್ರಗತಿ ನಿರೀಕ್ಷೆಯ ಮಟ್ಟದಲ್ಲಿಲ್ಲ ಎಂದಿದ್ದಾರೆ. ಜತೆಗೆ, ಭಾರತ ಮತ್ತು ಚೀನವನ್ನು ಈಗ ಹೋಲಿಕೆ ಮಾಡುವುದು ಸರಿಯಲ್ಲ. ಮುಂದಿನ 10 ವರ್ಷಗಳಲ್ಲಿ ಭಾರತವು ಕ್ಷಿಪ್ರಗತಿಯ ಅಭಿವೃದ್ಧಿ ಹಾಗೂ ಚೀನವು ಕ್ಷಿಪ್ರಗತಿಯ ಆರ್ಥಿಕ ಕುಸಿತ ಕಂಡರಷ್ಟೇ ಎರಡೂ ದೇಶಗಳನ್ನು ಹೋಲಿಕೆ ಮಾಡಬಹುದಾಗಿದೆ ಎಂದೂ ಹೇಳಿದ್ದಾರೆ ರಘುರಾಂ ರಾಜನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.