ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ದೇಶ ಮುಕ್ತವಾಗಲಿ: ಮೋದಿ
Team Udayavani, Dec 27, 2022, 1:28 AM IST
ಹೊಸದಿಲ್ಲಿ: ದೇಶವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊ ಯ್ಯಲು ಭಾರತವು ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತವಾಗಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಸ್ಲಾಂಗೆ ಮತಾಂತರವಾಗಲು ಒಪ್ಪದೇ ಔರಂಗಜೇಬ್‌ನ ಕತ್ತಿಗೆ ಬಲಿಯಾದ ಗುರು ಗೋವಿಂದ ಸಿಂಗ್ ಅವರ ವೀರ ಪುತ್ರರಾದ ಜೊರಾವರ್ ಸಿಂಗ್ ಮತ್ತು ಫತೇಹ್‌ಸಿಂಗ್ ಅವರ ಗೌರವಾರ್ಥ ನಡೆದ “ವೀರ ಬಲ ದಿವಸ್’ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುತಾತ್ಮರಾದ ಇಬ್ಬರು ಬಾಲಕರ ಶೌರ್ಯವನ್ನು ಉಲ್ಲೇಖೀಸಿ ಮಾತನಾಡಿದ ಅವರು, “ಒಂದೆಡೆ ಭಯೋತ್ಪಾದನೆ ಮತ್ತೊಂದೆಡೆ ಆಧ್ಯಾತ್ಮಿಕತೆ ಇತ್ತು. ಒಂದೆಡೆ ಕೋಮು ಗಲಭೆ ಮತ್ತೂಂದೆಡೆ ಉದಾರವಾದ. ಒಂದೆಡೆ ಲಕ್ಷಾಂತರ ಸೈನಿಕರ ಪಡೆ, ಆದರೆ “ವೀರ್ ಸಾಹಿಬ್‌ಜಾದೆ’ ಮಾತ್ರ ಕದಲಲಿಲ್ಲ,’ ಎಂದರು.
“ಔರಂಗಜೇಬ್ ಮತ್ತು ಅವನ ಜನರು ಕತ್ತಿಯ ಆಧಾರದ ಮೇಲೆ ಗುರು ಗೋವಿಂದ್ ಸಿಂಗ್ ಅವರ ಮಕ್ಕಳನ್ನು ಮತಾಂತರಿಸಲು ಬಯಸಿದ್ದರು. ಆದರೆ ಸಾಧ್ಯವಾಗದೇ ಇಬ್ಬರು ಮುಗ್ಧ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದರು. ಔರಂಗಜೇಬನ ಭಯೋತ್ಪಾದನೆಯ ವಿರುದ್ಧ ಮತ್ತು ಭಾರತವನ್ನು ಬದಲಾಯಿಸುವ ಅವನ ಯೋಜನೆಗಳ ವಿರುದ್ಧ ಗುರು ಗೋವಿಂದ್ ಸಿಂಗ್ ಪರ್ವತದಂತೆ ನಿಂತರು,’ ಎಂದು ಶ್ಲಾಘಿಸಿದರು. ಗುರು ಗೋವಿಂದ್ ಸಿಂಗ್ ಅವರ ಮಕ್ಕಳ ಬಲಿದಾನದ ಗೌರವಾರ್ಥ ಡಿ.26 ಅನ್ನು “ವೀರ ಬಲ ದಿವಸ್’ ಆಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.