ಯೋಜನೆ ವಿಳಂಬಕ್ಕೆ ನಮ್ಮಿಂದ ತಡೆ
Team Udayavani, Dec 26, 2018, 10:51 AM IST
ಕರೇಂಗ್ ಚಪೊರಿ (ಅಸ್ಸಾಂ): ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ನೀತಿ ಯನ್ನು ತಮ್ಮ ನೇತೃತ್ವದ ಕೇಂದ್ರ ಸರಕಾರ ಬದಲಾವಣೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಗೆ ನಿರ್ಮಿಸಲಾದ ದೇಶದ ಅತ್ಯಂತ ಉದ್ದದ ರೈಲು-ರಸ್ತೆ ಸೇತುವೆ ಉದ್ಘಾಟಿಸಿದ ಬಳಿಕ ಕರೇಂಗ್ ಚಪೋರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತ ನಾಡಿದರು.
ಈ ಸೇತುವೆಯು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೋಟ್ಯಂತರ ಜನರ ಜೀವನಾಡಿಯಾಗಿದ್ದು, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಜನರಿಗೆ ಇದು ಕ್ರಿಸ್‌ಮಸ್ ಕೊಡುಗೆ ಎಂದು ಮೋದಿ ಬಣ್ಣಿಸಿದ್ದಾರೆ. 16 ವರ್ಷಗಳ ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಇಲ್ಲಿಗೆ ಆಗಮಿಸಿ ಕಾಮಗಾರಿಗೆ ಹಸಿರುನಿಶಾನೆ ತೋರಿಸಿದ್ದರು.
ಕಾಮಗಾರಿ ಪೂರ್ತಿಗೊಂಡು ಉದ್ಘಾಟನೆಯಾದದ್ದು ಅವರಿಗೆ ಅರ್ಪಿಸುವ ಗೌರವ ಎಂದರು ಮೋದಿ. 2004ರಲ್ಲಿ ಅವರು ಚುನಾವಣೆಯಲ್ಲಿ ಸೋಲದೇ ಇರುತ್ತಿದ್ದರೆ ಕಾಮಗಾರಿ 2008-09ರಲ್ಲೇ ಪೂರ್ಣವಾಗುತ್ತಿತ್ತು ಎಂದಿದ್ದಾರೆ. ಮಾಜಿ ಪ್ರಧಾನಿ ಅಟಲ್ ಜನ್ಮದಿನದಂದೇ ಅಸ್ಸಾಂಗೆ ಆಗಮಿಸಿದ್ದೇನೆ. ಉತ್ತಮ ಆಡಳಿತಕ್ಕೆ ಅವರು ಆದ್ಯತೆ ನೀಡಿದ್ದರು ಎಂದೂ ಮೋದಿ ಸ್ಮರಿಸಿಕೊಂಡಿದ್ದಾರೆ.
2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಭಿವೃದ್ಧಿ ಕಾಮಗಾರಿಗಳ ಜಾರಿಯಲ್ಲಿ ವಿಳಂಬ ನೀತಿ ಅನು ಸರಿಸುವುದನ್ನು ತಡೆಯಲಾಗಿದೆ. ಕ್ಷಿಪ್ರವಾಗಿ ಅವುಗಳ ಜಾರಿಗೆ ಒತ್ತು ನೀಡಲಾಗಿದೆ. ವಿಳಂಬದಿಂದಾಗಿ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಅಸ್ಸಾಂ ಮಾತ್ರವಲ್ಲ ಈಶಾನ್ಯ ರಾಜ್ಯಗಳಲ್ಲಿಯೇ ಈಗ ಅಭಿವೃದ್ಧಿ ಕಾಮಗಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಗುತ್ತಿವೆ ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳಿಗಾಗಿಯೇ ವಿಶೇಷವಾಗಿ 15 ರೈಲುಗಳನ್ನು ಶೀಘ್ರದಲ್ಲೇ ಓಡಿಸಲಾಗುತ್ತದೆ ಎಂದಿದ್ದಾರೆ. ಬೋಗಿಬೀಲ್ ಸೇತುವೆ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ. ಈ ಸೇತುವೆ ನಿರ್ಮಾಣ ದೇಶದ ಮೂಲ ಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರದ ನೈಪುಣ್ಯತೆಗೆ ಹಿಡಿದ ಕೈಗನ್ನಡಿ ಎಂದು ಮೋದಿ ಬಣ್ಣಿಸಿದ್ದಾರೆ.
ದೇವೇಗೌಡರು ಕಂಡಿದ್ದ ಕನಸಿದು
ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ 1996ರಲ್ಲಿ ಅಸ್ಸಾಂ ಗಣ ಪರಿಷತ್ ಯುನೈಟೆಡ್ ಫ್ರಂಟ್‌ನ ಭಾಗವಾಗಿತ್ತು. ಆ ಪಕ್ಷದ ಸಂಸದರು ಬೋಗಿಬೀಲ್ ಸೇತುವೆ ಬಗ್ಗೆ ನೀಲ ನಕ್ಷೆ ಸಿದ್ಧಪಡಿಸಿ ರೈಲ್ವೆ ಇಲಾಖೆಗೆ ನೀಡಿದರು. ಆ ಕಾಲಕ್ಕೆ 2 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗೆ ಇಲಾಖೆ ಹುಬ್ಬೇರಿಸಿ, “ಅಸ್ಸಾಂನಂಥ ಸಣ್ಣ ರಾಜ್ಯಕ್ಕೆ ಅದು ಅಗತ್ಯವಿಲ್ಲ’ ಎಂದು ಹೇಳಿತು. ಆ ಕಾಲಕ್ಕೆ ಅಸ್ಸಾಂ ಗಣ ಪರಿಷತ್‌ನ ಪ್ರಮುಖ ನಾಯಕರೂ, ಸಚಿವರೂ ಆಗಿದ್ದ ಬೀರೇಂದ್ರ ಪ್ರಸಾದ್ ಬೈಶ್ಯ, ಮುಹಿರಾಂ ಸೈಕಿಯಾ ಪ್ರಧಾನಿ ದೇವೇಗೌಡರ ಮಧ್ಯಪ್ರವೇಶ ಕೋರಿದರು. ಅದೇ ಸಂದರ್ಭದಲ್ಲಿ ರೈಲ್ವೆ ಬಜೆಟ್ ಮಂಡಿಸುವುದಕ್ಕೆ ಮುನ್ನ ನಡೆದಿದ್ದ ಸಭೆಯಲ್ಲಿ ಸೇತುವೆ ಬಗ್ಗೆ ಪ್ರಸ್ತಾಪ ನೀಡಿದ್ದರೂ, ಅದು ಇಲ್ಲದೇ ಇದ್ದುದನ್ನು ಕಂಡ ಬೀರೇಂದ್ರ ಪ್ರಸಾದ್ ಬೈಶ್ಯ ಸಿಟ್ಟಿಗೆದ್ದರು. ಪಾಸ್ವಾನ್ ನಮ್ಮನ್ನು ಕಡೆಗಣಿಸಿದರು ಎಂದು ಆರೋಪಿಸಿದ್ದರು. ಅಲ್ಲಿದ್ದ ಪ್ರಧಾನಿ ದೇವೇಗೌಡರು, ಬೈಶ್ಯ ಅವರನ್ನು ಸಮಾಧಾನಪಡಿಸಿ ವಿಷಯ ಇತ್ಯರ್ಥಪಡಿಸುವಂತೆ ಸಲಹೆ ನೀಡಿದರು. ಅದಕ್ಕೆ ಉತ್ತರಿಸಿದ್ದ ಪಾಸ್ವಾನ್, ಸೇತುವೆ ವಿಷಯ ಬಜೆಟ್‌ನಲ್ಲಿ ಸೇರಿಸಲು ಸಮಯ ಮೀರಿದೆ. ಬಜೆಟ್ ಮಂಡನೆ ವೇಳೆ ಸಣ್ಣ ಸೇತುವೆ ನಿರ್ಮಿಸುವ ಬಗ್ಗೆ ಟಿಪ್ಪಣಿ ನೀಡಿ. ಅದನ್ನು ಓದುವೆ ಎಂದು ಹೇಳಿದ್ದರು. 2 ದಿನಗಳ ಬಳಿಕ ಪಾಸ್ವಾನ್‌ಗೆ ತಾನು ಘೋಷಣೆ ಮಾಡಿದ್ದು, ಸಣ್ಣದಲ್ಲ ಅತ್ಯಂತ ದೊಡ್ಡ ಯೋಜನೆ ಎಂಬ ಅರಿವು ಬಂದಿತಂತೆ. ಅದನ್ನು ಪ್ರಧಾನಮಂತ್ರಿಗಳ ವಿಶೇಷ ಪ್ಯಾಕೇಜ್‌ನಲ್ಲಿ ಸೇರಿಸಲಾಗಿತ್ತು. ಒಟ್ಟಿನಲ್ಲಿ ಅತಿ ದೊಡ್ಡ ಸೇತುವೆ ಯೋಜನೆಯಲ್ಲಿ ದೇವೇಗೌಡರ ಪಾತ್ರ ಹಿರಿದು.
ಸವಾಲುಗಳೇನಿದ್ದವು?
– ಪ್ರತಿ ವರ್ಷದ ನವೆಂಬರ್‌ನಿಂದ ಮಾರ್ಚ್ ವರೆಗೆ ಮಾತ್ರ ಕಾಮಗಾರಿ ಕೈಗೊಳ್ಳಲು ಅವಕಾಶ. ಬ್ರಹ್ಮಪುತ್ರಾ ನದಿಯಲ್ಲಿನ ಪ್ರವಾಹದಿಂದ ಅಡ್ಡಿ
– ಉತ್ತರದಿಂದ ದಕ್ಷಿಣ ತೀರಕ್ಕೆ ಪೈಪ್‌ಲೈನ್‌ಗಳ ಮೂಲಕ ಕಾಂಕ್ರೀಟ್ ಮತ್ತು ಕಬ್ಬಿಣ ಸಾಗಿಸಲಾಗುತ್ತಿತ್ತು. 80 ಸಾವಿರ ಟನ್ ತೂಕದ ಸ್ಟೀಲ್ ಪ್ಲೇಟ್‌ಗಳನ್ನು ರಸ್ತೆ ಮತ್ತು ರೈಲು ಮಾದರಿಯ ಸಾಗಣೆ ವ್ಯವಸ್ಥೆಯಲ್ಲಿ ಕೆಲಸದ ಸ್ಥಳಕ್ಕೆ ತಲುಪಿಸಲಾಗುತ್ತಿತ್ತು.
– ಪಿಲ್ಲರ್‌ಗಳ ಮೇಲೆ ಸ್ಟೀಲ್ ಪ್ಲೇಟ್ ಮತ್ತು ಇತರ ವಸ್ತುಗಳನ್ನು ಮೇಲಕ್ಕೆತ್ತಿ ಅಳವಡಿಸಲು 1 ಸಾವಿರ ಟನ್ ತೂಕದ ಹೈಡ್ರಾಲಿಕ್ ಜಾಕ್ ಮತ್ತು ಸ್ಟ್ರಾಂಡ್ ಜಾಕ್‌ಗಳನ್ನು ಬಳಕೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.