ಜೀವ ರಕ್ಷಕ ಔಷಧ ದೇಶದಲ್ಲೇ ಅಗ್ಗ
Team Udayavani, Dec 1, 2019, 5:30 AM IST
ಅಗತ್ಯ ಹಾಗೂ ಜೀವ ರಕ್ಷಕ
ಔಷಧಗಳು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆ ದೊರೆಯಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ವಿದೇಶಗಳಿಗೆ ತುಲನೆ ಮಾಡಿದರೆ, ನಮ್ಮಲ್ಲೇ ಕಡಿಮೆ ದರಕ್ಕೆ ಜೀವರಕ್ಷಕ ಔಷಧಗಳು ಸಿಗುತ್ತಿವೆ ಎಂದು ಸಮೀಕ್ಷೆಯೊಂದು ಹೇಳಿದೆ. ಆ ವರದಿಯಲ್ಲೇನಿದೆ? ವಿವರಗಳು ಇಲ್ಲಿವೆ.
ಸಮೀಕ್ಷೆ ಯಾರಿಂದ?
ಲಂಡನ್ ಮೂಲದ ಮೆಡ್‌ಬೆಲ್ಲೆಯ ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಈ ಒಂದು ಸಮೀಕ್ಷೆಯನ್ನು ನಡೆಸಿದ್ದು, 13 ಸಾಮಾನ್ಯ ಜೀವ ರಕ್ಷಕ ಔಷಧಗಳ ಬೆಲೆ ವ್ಯತ್ಯಾಸವನ್ನು ವಿಶ್ಲೇಷಿಸಿದೆ.
ಮಾನದಂಡವೇನು?
ವಿಶ್ವಾದ್ಯಂತ 50 ದೇಶಗಳಲ್ಲಿ ಈ ಒಂದು ಸಮೀಕ್ಷೆ ನಡೆದಿದ್ದು, ಆ 13 ಔಷಧಗಳ ಬೆಲೆ ವ್ಯತ್ಯಾಸವನ್ನು ಯುರೋ ದರದಲ್ಲಿ ಅಳೆಯಲಾಗಿದೆ.
ಅಮೆರಿಕದಲ್ಲಿ ಅತಿ ದುಬಾರಿ
ವರದಿಯ ಪ್ರಕಾರ ಜೀವ ರಕ್ಷಕ ಔಷಧಗಳು ಅಮೆರಿಕ ದೇಶದಲ್ಲಿ ಅತಿ ದುಬಾರಿಯಾಗಿದ್ದು, ಇತರ ದೇಶಗಳಲ್ಲಿರುವ ದರಕ್ಕಿಂತ ದುಪ್ಪಟ್ಟು ಹೆಚ್ಚು ದರ ಹೊಂದಿದೆ. ಅನಂತರದ ಸ್ಥಾನವನ್ನು ಜಪಾನ್ ಪಡೆದುಕೊಂಡಿದೆ.
ಈ ದೇಶಗಳಲ್ಲಿ ಕಡಿಮೆ
ಕನಿಷ್ಠ ಮೊತ್ತದಲ್ಲಿ ಜೀವ ರಕ್ಷಕ ಔಷಧಗಳು ದೊರೆಯುವ 10 ದೇಶಗಳ ಪಟ್ಟಿಯಲ್ಲಿ ಭಾರತ ಗುರುತಿಸಿಕೊಂಡಿದ್ದು, 7 ನೇ ಸ್ಥಾನದಲ್ಲಿದೆ.
ಅತಿ ದುಬಾರಿ
ಹೃದಯದ ಕಾಯಿಲೆ, ಅಸ್ತಮಾ, ಕ್ಯಾನ್ಸರ್, ಸಕ್ಕರೆ ಕಾಯಿಲೆ ಸೇರಿದಂತೆ ರೋಗ ನಿರೋಧಕಗಳ ಬೆಲೆ ಅಮೆರಿಕ ದೇಶದಲ್ಲಿ ಇತರ ದೇಶಗಳ ಕನಿಷ್ಠ ಮೊತ್ತಕ್ಕಿಂತ ಒಂದು ಪಟ್ಟು ಹೆಚ್ಚಿದೆ.
ವಿದೇಶಗಳಲ್ಲಿ ದುಬಾರಿ ಯಾಕೆ ?
ದೇಶದಲ್ಲಿ ಜೀವ ರಕ್ಷಕ ಔಷಧಗಳ ಮೇಲಿನ ಪೇಟೆಂಟ್ ಅಧಿಕಾರವನ್ನು 20 ವರ್ಷಗಳಿಗೆ ನಿಗದಿ ಪಡಿಸಿದ್ದು, ವಿದೇಶಗಳು ಇದರಿಂದ ಹೊರತಾಗಿದೆ. ಅಲ್ಲಿನ ಔಷಧ ಕಂಪೆನಿಗಳು ಆಗಾಗ್ಗೆ ಬೆಲೆ ವಿಸ್ತರಣೆ ನೀತಿಯನ್ನು ಅನುಸರಿಸುತ್ತಿದ್ದು, ಕನಿಷ್ಠ ಮೊತ್ತಕ್ಕಿಂತ ಹೆಚ್ಚಾಗಿ ಬೆಲೆಯನ್ನು ನಿಗದಿ ಮಾಡಿ ಜನರ ಮೇಲೆ ಹೇರುತ್ತವೆ.
ಯಾಕೆ ಕಡಿಮೆ ?
ಇತರ ರಾಷ್ಟ್ರಗಳಿಗೆ ಹೋಲಿಸಿದ್ದರೆ ದೇಶ ಪ್ರತ್ಯೇಕ ಏಕಸ್ವಾಮ್ಯತೆ ಮಾನದಂಡ ಮತ್ತು ನಿಯಮಗಳನ್ನು ಅಳವಡಿಸಿಕೊಂಡಿದ್ದು, ಪ್ರತಿಸ್ಪರ್ಧಿಗಳಿಂದ ಮುಕ್ತವಾಗಿದೆ. ಜತೆಗೆ ದೇಶದಲ್ಲಿ ಈ ಕ್ಷೇತ್ರದ ಕಾನೂನಿನ ಯೋಜನೆಗಳು ನ್ಯಾಯ ಸಮ್ಮತವಾಗಿದೆ. ಸರಕಾರವೂ ಬೆಲೆ ನಿಯಂತ್ರಣ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ.
ಜನರಿಕ್ ಔಷಧ: ಭಾರತ ಮುಂಚೂಣಿಯಲ್ಲಿ
50,000 ಕೋಟಿ ರೂ. ಮೌಲ್ಯದ ಜನರಿಕ್ ಔಷಧಗಳನ್ನು ರಫ್ತು ಮಾಡುವಲ್ಲಿ ದೇಶ ಮುಂಚೂಣಿಯಲ್ಲಿದೆ. ಜತೆಗೆ ವಿಶ್ವದಲ್ಲಿ ದೇಶೀಯ ಔಷಧ ಉದ್ಯಮ ಕೇತ್ರ ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.