Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
ಗರ್ಭದಲ್ಲಿನ ಮಕ್ಕಳ ಬೆಳವಣಿಗೆಗೂ ಕುತ್ತು: ವೈದ್ಯರ ಎಚ್ಚರಿಕೆ
Team Udayavani, Nov 19, 2024, 7:45 AM IST
ಹೊಸದಿಲ್ಲಿ: ಶ್ವಾಸಕೋಶ ಕ್ಯಾನ್ಸರ್, ಹೃದಯಾಘಾತ, ಗರ್ಭದಲ್ಲೇ ಮಕ್ಕಳ ಬೆಳವಣಿಗೆಗೆ ತೊಡಕು! ಇವು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಜನರಿಗೆ ವೈದ್ಯರು ನೀಡುತ್ತಿರುವ ಎಚ್ಚರಿಕೆ. ದಿಲ್ಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಳವಾಗು ತ್ತಿದ್ದು, ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ 495ಕ್ಕೆ ತಲುಪಿದೆ. ಇದು ಗಂಭೀರ ಮಟ್ಟದ (ಸಿವಿಯರ್ ಪ್ಲಸ್) ಮಾಲಿನ್ಯವಾಗಿದ್ದು, ಜನರ ಆರೋಗ್ಯದ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ಬಗ್ಗೆ ಸಿಎಂಆರ್ಐ ಆಸ್ಪತ್ರೆಯ ವೈದ್ಯ ಡಾ| ಅರೂಪ್ ಹಲ್ದರ್ ಮಾಹಿತಿ ನೀಡಿದ್ದು, ಮಾಲಿನ್ಯ ಹೆಚ್ಚಾಗುತ್ತಿರುವಂತೆಯೇ 0.1 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕಗಳು ಉಸಿರಾಟದ ಮೂಲಕ ಮನುಷ್ಯರ ಶ್ವಾಸಕೋಶ ಪ್ರವೇಶಿಸಿ ರಕ್ತದ ಕಣಗಳನ್ನು ಸೇರುತ್ತವೆ. ಇವು ಬರೀ ಶ್ವಾಸಕೋಶಕ್ಕೆ ತೊಂದರೆ ಮಾಡುವುದರ ಬದಲಿಗೆ ಮೆದುಳು, ಹೃದಯ, ಮೂತ್ರಪಿಂಡಗಳು ಸೇರಿದಂತೆ ಇನ್ನಿತರ ಭಾಗಗಳಿಗೂ ಹಾನಿ ಮಾಡುತ್ತವೆ ಎಂದಿದ್ದಾರೆ.
ಇದೇ ಪರಿಸ್ಥಿತಿ ಮುಂದುವರಿದರೆ ರಾಜಧಾನಿಯ ಜನರು ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್, ಹೈಪರ್ಟೆನ್ಶನ್, ಲಿವರ್ ಡ್ಯಾಮೇಜ್, ಮರೆವಿನ ಕಾಯಿಲೆ, ಅಲರ್ಜಿ, ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಗುರಿಯಾಗಬೇಕಾಗುತ್ತದೆ.
ಗರ್ಭಿಣಿಯರು ಈ ವಾತಾವರಣದಲ್ಲಿದ್ದರೆ ಅವರ ಗರ್ಭದಲ್ಲಿ ಮಗುವಿನ ಬೆಳವಣಿಗೆ ಕುಂಠಿತವಾಗುವುದಲ್ಲದೇ, ಮಕ್ಕಳು ನರ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
Scientists: ಕೋಳಿ ಮೊದಲಾ, ಮೊಟ್ಟೆ ಮೊದಲಾ?: ಇಲ್ಲಿದೆ ಉತ್ತರ!
Railways: “ವಂದೇ ಭಾರತ್’ ರೈಲಿನ ಸಾಂಬಾರಲ್ಲಿ ಹರಿದಾಡಿದ ಕೀಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.